-->
 ವಕೀಲರು ತಮ್ಮ ಕಕ್ಷಿದಾರರೊಂದಿಗೆ ನಡೆಸಿದ ಸಂವಹನದ ಗೌಪ್ಯತೆ: ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು

ವಕೀಲರು ತಮ್ಮ ಕಕ್ಷಿದಾರರೊಂದಿಗೆ ನಡೆಸಿದ ಸಂವಹನದ ಗೌಪ್ಯತೆ: ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು

 ವಕೀಲರು ತಮ್ಮ ಕಕ್ಷಿದಾರರೊಂದಿಗೆ ನಡೆಸಿದ ಸಂವಹನದ ಗೌಪ್ಯತೆ: ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು




ವಕೀಲರು ತಮ್ಮ ಕಕ್ಷಿದಾರರೊಂದಿಗೆ ನಡೆಸುವ ಸಂಭಾಷಣೆ ಮತ್ತು ಅದರ ಮಾಹಿತಿಗಳನ್ನು ಬಹಿರಂಗಪಡಿಸುವಂತೆ ಒತ್ತಾಯಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ವಕೀಲರು ಮತ್ತು ಕಕ್ಷಿದಾರರ ನಡುವಿನ ಸಂವಹನಕ್ಕೆ ವಿಶೇಷ ಸ್ಥಾನಮಾನವಿದೆ. ಅದನ್ನು ವಿಚಾರಣೆಯಲ್ಲಿ ಬಹಿರಂಗಪಡಿಸುವಂತೆ ನ್ಯಾಯ ವಿಚಾರಣೆಯಲ್ಲಿ ಕೇಳಲಾಗದು ಎಂದು ತೀರ್ಪು ನೀಡಿದ ಹೈಕೋರ್ಟ್ ನ್ಯಾಯಪೀಠ, ಹಿರಿಯ ವಕೀಲರಿಗೆ ಸಾಕ್ಷಿ ಸಮನ್ಸ್ ನೀಡಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.



ಭಾರತೀಯ ಸಾಕ್ಷ್ಯ ಅಧಿನಿಯಮದ ಸೆಕ್ಷನ್ 126ರ ಅಡಿಯಲ್ಲಿ ವಿಶೇಷ ಸ್ಥಾನಮಾನ ಇರುವ ಸಾಕ್ಷ್ಯಗಳ ದಾಖಲಾತಿಗೆ ನಿರ್ಬಂಧವಿದೆ. ಒಂದು ವೇಳೆ, ಅಂತಹ ಸಾಕ್ಷ್ಯವನ್ನು ಹಾಜರುಪಡಿಸಿದರೂ ಅದನ್ನು ಒಪ್ಪಲಾಗದು ಎಂದು ನ್ಯಾಯಪೀಠ ಹೇಳಿದೆ.



ಅದೇ ರೀತಿ, ಭಾರತೀಯ ಸಾಕ್ಷ್ಯ ಅಧಿನಿಯಮದ ಸೆಕ್ಷನ್ 129ರ ಅಡಿಯಲ್ಲಿ ಕಾನೂನು ಸಲಹೆಗಾರರ ಜೊತೆಗೆ ನಡೆಸುವ ಗೌಪ್ಯ ಸಂವಹನದ ದಾಖಲೆಗಳೂ ನ್ಯಾಯವಿಚಾರಣೆಯಲ್ಲಿ ಸಾಕ್ಷ್ಯವನ್ನಾಗಿ ಹಾಜರುಪಡಿಸಲು ನಿಷೇಧವಿದೆ. ಈ ಕಾರಣಕ್ಕೆ ಪ್ರಕರಣದಲ್ಲಿ ಸಾಕ್ಷ್ಯ ನೀಡುವಂತೆ ವಕೀಲರಿಗೆ ಸಮನ್ಸ್ ಜಾರಿಗೊಳಿಸುವಂತಿಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.



ಪೂರನ್‌ಮಾಲ್ Vs ಡೈರೆಕ್ಟರ್ ಆಫ್ ಇನ್ಸ್‌ಪೆಕ್ಷನ್, ನ್ಯೂಡೆಲ್ಲಿ 1974 1 SCC 345 ಮತ್ತು ಉತ್ತರ ಪ್ರದೇಶ Vs ರಾಜ್ ನಾರಾಯಣ್ AIR 1974 SC 865 ಪ್ರಕರಣಗಳನ್ನು ಉಲ್ಲೇಖಿಸಿದ ಬಾಂಬೆ ಹೈಕೋರ್ಟ್‌ ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.


ಪ್ರಕರಣ: ಅನಿಲ್ ವಿಷ್ಣು ಅಂತುರ್ಕರ್ Vs ಚಂದ್ರಕುಮಾರ್ ಪೋಪಟ್‌ಲಾಲ್‌ ಬಾಲ್ಡೋಟ

ಬಾಂಬೆ ಹೈಕೋರ್ಟ್; WP No. 3359/2015 Dated 21-12-2022

Ads on article

Advertise in articles 1

advertising articles 2

Advertise under the article