ಗ್ರಾಹಕರ ಹಕ್ಕುಗಳು: ಇನ್‌ಫ್ಲುವೆನ್ಸರ್‌ಗಳಿಗೆ ಮಾರ್ಗಸೂಚಿ; ತಪ್ಪಿದರೆ ಭಾರೀ ದಂಡ
ಗ್ರಾಹಕರ ಹಕ್ಕುಗಳು: ಇನ್‌ಫ್ಲುವೆನ್ಸರ್‌ಗಳಿಗೆ ಮಾರ್ಗಸೂಚಿ; ತಪ್ಪಿದರೆ ಭಾರೀ ದಂಡ
ಸಾಮಾಜಿಕ ಜಾಲತಾಣದಲ್ಲಿ ಇನ್‌ಫ್ಲುವೆನ್ಸರ್‌ಗಳ ಪ್ರಚಾರದಿಂದ ಗ್ರಾಹಕರು ತಮಗೆ ವಂಚನೆಯಾಗಿದೆ ಎಂದು ಭಾವಿಸಿದರೆ ಇನ್‌ಫ್ಲುವೆನ್ಸರ್‌ಗಳು ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಭಾರೀ ದಂಡವನ್ನು ಪಡೆಯಬಹುದು.
ಈ ಕುರಿತ ಕಠಿಣ ನಿಯಮಾವಳಿಯನ್ನು ಗ್ರಾಹಕ ವ್ಯವಹಾರಗಳ ಸಚಿವಾಲಯ ಜಾರಿಗೆ ತಂದಿದ್ದು, ಗ್ರಾಹಕ ಹಕ್ಕುಗಳ ರಕ್ಷಣಾ ಕಾಯ್ದೆಯಡಿ ಕಾನೂನು ಕ್ರಮ ಎದುರಿಸಲು ಅವಕಾಶ ನೀಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಇನ್‌ಫ್ಲುವೆನ್ಸರ್‌ಗಳು ಯಾವುದೇ ವಾಣಿಜ್ಯ ಉತ್ಪನ್ನ ಹಾಗೂ ಸೇವೆಗಳಿಗೆ ಪ್ರಚಾರ ನೀಡುವುದನ್ನು ಪರಿಣಾಮಕಾರಿಯಾಗಿ ಖಾತ್ರಿಗೊಳಿಸಲು ಆಯಾ ಉತ್ಪನ್ನಗಳನ್ನು ಅವರು ಬಳಸಿರಬೇಕು.
ಯಾವುದೇ ಆಧಾರವಿಲ್ಲದೆ, ಯಾ ತಾವು ಬಳಸದೆ ಇರುವ ಉತ್ಪನ್ನಗಳಿಗೆ ಇನ್‌ಫ್ಲುವೆನ್ಸರ್‌ಗಳು ಪ್ರಚಾರ ಮಾಡುವ ಹಾಕಿಲ್ಲ. ಪ್ರಚಾರದ ಸಂದರ್ಭದಲ್ಲಿ ಇನ್‌ಫ್ಲುವೆನ್ಸರ್‌ಗಳು ಜಾಹೀರಾತಿನ ಸ್ವರೂಪವನ್ನು ಬಹಿರಂಗಪಡಿಸಬೇಕು.
ಇದು ಜಾಹೀರಾತು ಯಾ ಪ್ರಾಯೋಜಿತ ಎಂಬ ಬ್ಯಾಡ್ಜನ್ನು ಕಣ್ಣುಕಕ್ಕುವ ರೀತಿಯಲ್ಲಿ ಎದ್ದುಕಾಣುವಂತೆ ಅಳವಡಿಸಿರಬೇಕು ಎಂಬುದಾಗಿ ನಿಯಮಾವಳಿ ಸ್ಪಷ್ಟಪಡಿಸಿದೆ.