-->
ಆರೋಪಪಟ್ಟಿ ಸಾರ್ವಜನಿಕ ದಾಖಲೆಯಲ್ಲ- ಸುಪ್ರೀಂ ಕೋರ್ಟ್

ಆರೋಪಪಟ್ಟಿ ಸಾರ್ವಜನಿಕ ದಾಖಲೆಯಲ್ಲ- ಸುಪ್ರೀಂ ಕೋರ್ಟ್

ಆರೋಪಪಟ್ಟಿ ಸಾರ್ವಜನಿಕ ದಾಖಲೆಯಲ್ಲ- ಸುಪ್ರೀಂ ಕೋರ್ಟ್





ಕ್ರಿಮಿನಲ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗುವ ಆರೋಪಪಟ್ಟಿ ಸಾರ್ವಜನಿಕ ದಾಖಲೆಯಲ್ಲ. ಉಚಿತವಾಗಿ ಲಭ್ಯವಾಗುವಂತೆ ಮಾಡಲು ವೆಬ್‌ಸೈಟ್‌ಗೆ ಇದನ್ನು ಅಪ್‌ಲೋಡ್ ಮಾಡಲಾಗದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಆರೋಪಪಟ್ಟಿಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾ. ಎಂ. ಆರ್. ಶಾ ಮತ್ತು ಸಿ.ಟಿ. ರವಿಕುಮಾರ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.



ಆರೋಪಪಟ್ಟಿ ಅಪ್‌ಲೋಡ್ ಮಾಡುವುದು ಕ್ರಿಮಿನಲ್ ಅಪರಾಧ ಸಂಹಿತೆಯ ನಿಯಮಗಳಿಗೂ ವಿರುದ್ಧವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.



ಎನ್‌ಜಿಓ ಅಥವಾ ಇತರೆ ಸಂಸ್ಥೆಗಳು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದಲ್ಲದವರಿಗೆ ಆರೋಪಪಟ್ಟಿ ದೊರೆತರೆ ಅದು ದುರ್ಬಳಕೆ ಮತ್ತು ದುರುಪಯೋಗ ಆಗುವ ಸಾಧ್ಯತೆ ಹೆಚ್ಚು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.



ಸ್ವಯಂ ಪ್ರೇರಿತವಾಗಿ ಮಾಹಿತಿ ಪ್ರಕಟಿಸುವುದು ಸಾರ್ವಜನಿಕ ಸೇವಾ ಸಂಸ್ಥೆಗಳ ಕರ್ತವ್ಯ. ಅಪರಾಧ ಯಾರು ಎಸಗಿದ್ದಾರೆ ಎಂಬುದನ್ನು ತಿಳಿಯುವ ಹಕ್ಕು ಪ್ರತಿ ನಾಗರಿಕನಿಗೂ ಇದೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದಿಸಿದ್ದರು.



Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu