-->
ದುರ್ನಡತೆ ಆರೋಪ ಇದ್ದರೂ ಪಂಚಾಯತ್ ನೌಕರನ ಏಕಾಏಕಿ ವಜಾ ಸರಿಯಲ್ಲ: ಕರ್ನಾಟಕ ಹೈಕೋರ್ಟ್‌

ದುರ್ನಡತೆ ಆರೋಪ ಇದ್ದರೂ ಪಂಚಾಯತ್ ನೌಕರನ ಏಕಾಏಕಿ ವಜಾ ಸರಿಯಲ್ಲ: ಕರ್ನಾಟಕ ಹೈಕೋರ್ಟ್‌

ದುರ್ನಡತೆ ಆರೋಪ ಇದ್ದರೂ ಪಂಚಾಯತ್ ನೌಕರನ ಏಕಾಏಕಿ ವಜಾ ಸರಿಯಲ್ಲ: ಕರ್ನಾಟಕ ಹೈಕೋರ್ಟ್‌






ಗ್ರಾಮ ಪಂಚಾಯತ್‌ನ ನೌಕರರು ನಾಗರಿಕ ಸೇವಕನಲ್ಲ. ಆದರೂ, ಪಂಚಾಯತ್ ನೌಕರನ ದುರ್ನಡತೆಗೆ ಸಂವಿಧಾನದ ಆರ್ಟಿಕಲ್ 311ರ ಅಡಿಯಲ್ಲಿ ಯಾವುದೇ ವಿಚಾರಣೆ ಇಲ್ಲದೆ ಸೇವೆಯಿಂದ ವಜಾಗೊಳಿಸುವಂತಿಲ್ಲ. ಪಂಚಾಯತ್ ಒಂದು ಪ್ರಭುತ್ವವಾಗಿದ್ದು, ಸಂವಿಧಾನದ ಆರ್ಟಿಕಲ್ 12ರಡಿಯಲ್ಲಿ ನಿರಂಕುಶವಾಗಿ ವರ್ತಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ದುರ್ನಡತೆಯ ಪ್ರಕರಣ ನಡೆದಿದ್ದರೂ, ಆರೋಪಿ ಸ್ಥಾನದಲ್ಲಿ ಇರುವ ಪಂಚಾಯತ್ ನೌಕರರಿಗೆ ತಮ್ಮ ಕೃತ್ಯದ ಬಗ್ಗೆ ಸಮಜಾಯಿಷಿ ನೀಡಲು, ತಮ್ಮನ್ನು ಸಮರ್ಥಿಸಿಕೊಳ್ಳಲು ಸೂಕ್ತ ಅವಕಾಶ ನೀಡಬೇಕು ಎಂದು ನ್ಯಾಯಪೀಠ ಹೇಳಿದೆ.



ವಿಚಾರಣೆ ನಡೆಸದಿದ್ದರೆ, ಆರೋಪಿ ವಿರುದ್ಧ ಮಾಡಲಾದ ಆರೋಪಗಳು ಆರೋಪಗಳಾಗಿಯೇ ಉಳಿಯುತ್ತವೆ. ಕಾನೂನಿನ ಪ್ರಕಾರ, ಆರೋಪಗಳನ್ನು ರುಜುವಾತುಪಡಿಸುವವರೆಗೆ ಇದರ ಸ್ಥಾನಮಾನ ಬದಲಾಗದು. ಇದು ಅನುಮಾನದ ಆಧಾರದ ಮೇಲೆ ನೌಕರರನ್ನು ತೆಗೆದುಹಾಕುವುದಕ್ಕೆ ಸಮನಾಗಿದೆ ಎಂದು ನ್ಯಾಯಪೀಠ ತಮ್ಮ ತೀರ್ಪಿನಲ್ಲಿ ತಿಳಿಸಿದೆ.



ದುರ್ನಡತೆ ಆರೋಪ ಇದ್ದಾಗ ಇಲಾಖಾ ವಿಚಾರಣೆ ನಡೆಸುವುದು ಕಡ್ಡಾಯ. ಮತ್ತು ಯಾವುದೇ ರೀತಿಯಲ್ಲೂ ಇದರಿಂದ ತಪ್ಪಿಸಿಕೊಳ್ಳುವುದು ಯಾ ಪ್ರಕ್ರಿಯೆಯನ್ನು ತೊಡೆದು ಹಾಕುವುದು ಅಸಾಧ್ಯ ಮತ್ತು ಇದು ಸಹಜ ನ್ಯಾಯ(Natural Justice)ದ ತತ್ವವನ್ನು ಉಲ್ಲಂಘನೆ ಮಾಡಿದಂತೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.



ಒಂದು ಪ್ರಭುತ್ವ ಭಾರತದ ಸಂವಿಧಾನದ 12ನೇ ವಿಧಿಯಡಿಯಲ್ಲಿ ನ್ಯಾಯಸಮ್ಮತವಾಗಿ ಮತ್ತು ಸಮಂಜಸವಾಗಿ ನಡೆದುಕೊಳ್ಳಬೇಕು ಮತ್ತು ಸಹಜ ನ್ಯಾಯದ ತತ್ವಗಳು ಇದರಲ್ಲಿ ಅಡಕಗೊಳ್ಳುತ್ತವೆ ಎಂದು ಅದು ಗಮನಿಸಿತು.



ಪ್ರಕರಣ: ಎಸ್‌.ಕೆ. ಶಂಕರಪ್ಪ Vs ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತೊಬ್ಬರು

ಕರ್ನಾಟಕ ಹೈಕೋರ್ಟ್ WP 48068/2018 Dated 21-10-2020



S.K. Shankarappa vs The Panchayath Development Officer and another. Writ Petition 48068/2018 decided on 21 October 2020.





Ads on article

Advertise in articles 1

advertising articles 2

Advertise under the article