-->
ATM ಬಳಕೆಗೆ ಇನ್ನು ಮುಂದೆ ಫೇಸ್ ಐಡಿ...?- ಶೀಘ್ರದಲ್ಲೇ ಜಾರಿಯಾಗುತ್ತದೆಯೇ..?

ATM ಬಳಕೆಗೆ ಇನ್ನು ಮುಂದೆ ಫೇಸ್ ಐಡಿ...?- ಶೀಘ್ರದಲ್ಲೇ ಜಾರಿಯಾಗುತ್ತದೆಯೇ..?

ATM ಬಳಕೆಗೆ ಇನ್ನು ಮುಂದೆ ಫೇಸ್ ಐಡಿ...?- ಶೀಘ್ರದಲ್ಲೇ ಜಾರಿಯಾಗುತ್ತದೆಯೇ..?





ಈಗ ನಮ್ಮ ಕೈಯಲ್ಲಿ ಇರುವ ಸ್ಮಾರ್ಟ್‌ ಫೋನ್‌ಗಳನ್ನು ತೆರೆಯಲು ಫೇಸ್ ಐಡಿ ಬಳಸಲಾಗುತ್ತದೆ. ಇದೇ ತಂತ್ರಜ್ಞಾನವನ್ನು ಇನ್ನು ಮುಂದೆ ATMಗಳಲ್ಲಿ ಬಳಕೆ ಮಾಡಲಾಗುತ್ತದೆ. ಇಂತಹ ಒಂದು ಸೂಚನೆಯನ್ನು ಕೇಂದ್ರ ಸರ್ಕಾರ ಬ್ಯಾಂಕ್‌ಗಳ ಆಡಳಿತಕ್ಕೆ ರವಾನಿಸಿದೆ.



ಶೀಘ್ರದಲ್ಲೇ ಫೇಸ್ ಐಡಿ ತಂತ್ರಜ್ಞಾನವನ್ನ ಬ್ಯಾಂಕಿನಿಂದ ಹಣ ತೆಗೆಯಲು ಬಳಸಲಾಗುವುದು. ಇದುವರೆಗೆ ಬ್ಯಾಂಕ್‌ನ ನಿಮ್ಮ ಖಾತೆಯಿಂದ ಹಣ ತೆಗೆಯಲು ಚೆಕ್ ಯಾ ವಿತ್ ಡ್ರಾ ಫಾರ್ಮ್ ಗೆ ಸಹಿ ಹಾಕಿದರೆ ಸಾಕಾಗುತ್ತಿತ್ತು. ಈ ತಂತ್ರಜ್ಞಾನ ಜಾರಿಗೆ ಬಂದ ಮೇಲೆ ಮುಖ ಮತ್ತು ಕಣ್ಣುಗಳ ರೆಟಿನಾವನ್ನ ಸ್ಕ್ಯಾನ್ ಮಾಡಬೇಕಾಗಿದೆ. 



ಬ್ಯಾಂಕಿನ ಹಣಕಾಸು ವಹಿವಾಟುಗಳಿಗೆ ಫೇಸ್ ಐಡಿ ಮತ್ತು ಐರಿಶ್ ಸ್ಕ್ಯಾನಿಂಗ್ ಬಳಸಲು ಸರ್ಕಾರ ಇಚ್ಚಿಸಿದೆ. ಆದರೆ, ಇದು ಎಲ್ಲಾ ವಹಿವಾಟುಗಳಿಗೆ ಅಗತ್ಯವಿಲ್ಲ. ಈ ವ್ಯವಸ್ಥೆಯಿಂದ ತೆರಿಗೆ ವಂಚನೆ ಕಡಿಮೆಯಾಗಲಿದೆ ಎಂಬುದು ಸರ್ಕಾರದ ಚಿಂತನೆ.



ಕೆಲವು ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್‌ಗಳು ಫೇಸ್ ಐಡಿ ಮತ್ತು ಐರಿಶ್ ಸ್ಕ್ಯಾನಿಂಗ್ ಪರಿಚಯಿಸಲು ಈಗಾಗಲೇ ಕಾರ್ಯಪ್ರವೃತ್ತವಾಗಿವೆ. ಈ ಬಗ್ಗೆ ಯಾವುದೇ ಸಾರ್ವಜನಿಕ ಘೋಷಣೆ ಮಾಡಿಲ್ಲ. ಆದರೆ, ಈಗ ಫೇಸ್ ಐಡಿ ಪರಿಶೀಲನೆ ಕಡ್ಡಾಯವಲ್ಲ. 



ಬ್ಯಾಂಕ್ ಗ್ರಾಹಕರು ಆಧಾರ್ ಕಾರ್ಡ್‌ ಯಾ ಯಾವುದೇ ಸರ್ಕಾರಿ ಗುರುತಿನ ಚೀಟಿ ಅಥವಾ ಪಾನ್ ಕಾರ್ಡ್ ಹೊಂದಿಲ್ಲದಿದ್ದರೆ ಈ ತಂತ್ರಜ್ಞಾನವನ್ನ ಬಳಸಲಾಗುತ್ತದೆ. ಆದರೆ, ಈ ತಂತ್ರಜ್ಞಾನದ ಬಳಕೆ ಸಂದರ್ಭದಲ್ಲಿ ಕೆಲವೊಂದು ಗೌಪ್ಯತೆಯ ಬಗ್ಗೆ ಸಮಸ್ಯೆಗಳು ಇವೆ.



ಪ್ರಸ್ತುತ, ಭಾರತದಲ್ಲಿ ಫೇಸ್ ಐಡಿ, ಸೈಬರ್ ಭದ್ರತೆ ಮತ್ತು ಗೌಪ್ಯತೆಗೆ ಸಂಬಂಧಿಸಿದಂತೆ ಯಾವುದೇ ವಿಶೇಷ ಕಾನೂನು ಜಾರಿಯಲ್ಲಿ ಇಲ್ಲ. ಮುಂದಿನ ಒಂದು ವರ್ಷದಲ್ಲಿ 20 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸುವ ಗ್ರಾಹಕರು ಫೇಸ್ ಐಡಿ ಮತ್ತು ಐರಿಶ್ ಐಡಿ ಬಳಸಬೇಕಾಗುತ್ತದೆ. 



ಈ ಮುಖದ ಸ್ಕ್ಯಾನಿಂಗ್ ಅಲ್ಲದೆ ಗ್ರಾಹಕರು ತಮ್ಮ ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ ನೀಡಬೇಕು. ಈ ಮಧ್ಯೆ, ಆಧಾರ್ ಕಾರ್ಡ್ ಸ್ವೀಕರಿಸಿದ ಪತ್ರದ ಬಳಿಕ ಕೆಲವೊಂದು ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳುವಂತೆ ಬ್ಯಾಂಕ್‌ ಗಳಿಗೆ ಹಣಕಾಸು ಸಚಿವಾಲಯ ಸೂಚಿಸಿದೆ. 



ಬೆರಳ ಮುದ್ರೆ (ಫಿಂಗರ್‌ ಪ್ರಿಂಟ್) ಪರಿಶೀಲನೆಯನ್ನ ಬಳಸಲಾಗದಿದ್ದಲ್ಲಿ, ಫೇಸ್ ಐಡಿ ಮತ್ತು ಐರಿಸ್ ಸ್ಕ್ಯಾನಿಂಗ್ ತಂತ್ರಜ್ಞಾನವನ್ನ ಬಳಸಬೇಕು ಎಂದು ಈ ಸೂಚನೆಯಲ್ಲಿ ತಿಳಿಸಲಾಗಿದೆ.

Ads on article

Advertise in articles 1

advertising articles 2

Advertise under the article