-->
ಮಲ್ಟಿಪ್ಲೆಕ್ಸ್, ಚಿತ್ರಮಂದಿರ ಖಾಸಗಿ ಆಸ್ತಿ, ಅಲ್ಲಿ ಹೊರಗಿನ ಆಹಾರ ನಿರ್ಬಂಧಿಸಬಹುದು: ಸುಪ್ರೀಂ ಕೋರ್ಟ್‌

ಮಲ್ಟಿಪ್ಲೆಕ್ಸ್, ಚಿತ್ರಮಂದಿರ ಖಾಸಗಿ ಆಸ್ತಿ, ಅಲ್ಲಿ ಹೊರಗಿನ ಆಹಾರ ನಿರ್ಬಂಧಿಸಬಹುದು: ಸುಪ್ರೀಂ ಕೋರ್ಟ್‌

ಮಲ್ಟಿಪ್ಲೆಕ್ಸ್, ಚಿತ್ರಮಂದಿರ ಖಾಸಗಿ ಆಸ್ತಿ, ಅಲ್ಲಿ ಹೊರಗಿನ ಆಹಾರ ನಿರ್ಬಂಧಿಸಬಹುದು: ಸುಪ್ರೀಂ ಕೋರ್ಟ್‌





ಮಲ್ಟಿಪ್ಲೆಕ್ಸ್‌ ಆಯಾ ಮಾಲೀಕರ ಖಾಸಗಿ ಆಸ್ತಿ. ಅಲ್ಲಿ ಯಾವ ಆಹಾರವನ್ನು ಮಾರಾಟಕ್ಕಿಡಬೇಕು ಎಂಬುದು ಅವರ ನಿರ್ಧಾರ, ಅವರ ಹಕ್ಕು. ಅಲ್ಲಿಗೆ ಬರುವ ಪ್ರೇಕ್ಷಕರು ಹೊರಗಿನಿಂದ ಆಹಾರ ಮತ್ತು ಪಾನೀಯಗಳನ್ನು ತರದಂತೆ ನಿರ್ಬಂಧಿಸುವ ಹಕ್ಕು ಅವರಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾ. ಡಿ ವೈ ಚಂದ್ರಚೂಡ್ ಮತ್ತು ನ್ಯಾ. ಪಿ ಎಸ್ ನರಸಿಂಹ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ಆದರೆ, ಈ ನಿರ್ಧಾರ, ನಿರ್ಬಂಧ ಸಾರ್ವಜನಿಕ ಹಿತಾಸಕ್ತಿಗೆ ವ್ಯತಿರಿಕ್ತವಾಗಿ ಇರಬಾರದು ಎಂದು ಹೇಳಿದೆ.



ಪ್ರೇಕ್ಷಕರು ಚಿತ್ರಮಂದಿರಗಳಿಗೆ, ಮಲ್ಟಿಪ್ಲೆಕ್ಸ್‌ಗಳಿಗೆ ಮನರಂಜನೆಗಾಗಿ ಆಗಮಿಸುತ್ತಾರೆ. ಆ ಸ್ಥಳ ಆ ಮಾಲೀಕರ ಖಾಸಗಿ ಸ್ಥಳವಾಗಿದ್ದು, ಅಲ್ಲಿ ಯಾವ ಆಹಾರ, ಪಾನೀಯ ಮಾರಾಟ ಮಾಡಬೇಕು ಎಂಬುದು ಮಾಲೀಕರ ನಿರ್ಧಾರ. ಅಲ್ಲಿ ತಮಗೆ ಸೂಕ್ತ ಕಂಡದ್ದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗದ ನಿರ್ಧಾರ ಕೈಗೊಳ್ಳಬಹುದು. ಆದರೆ, ಅಲ್ಲಿ ಲಭ್ಯ ಇರುವುದನ್ನು ಸೇವಿಸಬೇಕೆ, ಬೇಡವೇ ಎಂಬುದು ಪ್ರೇಕ್ಷಕರಿಗೆ ಬಿಟ್ಟದ್ದು ಮತ್ತು ಇದು ಸಂಪೂರ್ಣ ಅವರಿಗೆ ಸಂಬಂಧಿಸಿದ್ದಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.



ಮಲ್ಟಿಪ್ಲೆಕ್ಸ್‌ಗೆ ಪ್ರವೇಶ ಮಾಡುವ ಪ್ರೇಕ್ಷಕರು ಮಾಲೀಕರ ನಿಯಮಗಳಿಗೆ ಬದ್ಧರಾಗಿರಬೇಕು. ಇದು ಚಿತ್ರಮಂದಿರ ಮಾಲೀಕರ ವಾಣಿಜ್ಯಾತ್ಮಕ ನಿರ್ಧಾರದ ವಿಷಯವಾಗಿದೆ ಎಂದು ನ್ಯಾಯಪೀಠ ಹೇಳಿದೆ.



ಈ ತೀರ್ಪಿನೊಂದಿಗೆ, ಹೊರಗಿನ ಆಹಾರ ಮತ್ತು ಪಾನೀಯವನ್ನು ಮಲ್ಟಿಪ್ಲೆಕ್ಸ್ ಮತ್ತು ಚಲನಚಿತ್ರ ಮಂದಿರಗಳಿಗೆ ತರುವುದನ್ನು ತಡೆಯಬಾರದು ಎಂಬ ಜಮ್ಮು ಕಾಶ್ಮೀರ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಮ್ ನ್ಯಾಯಪೀಠ ಬದಿಗೆ ಸರಿಸಿದೆ.



ಇಂತಹ ತೀರ್ಪು ಪ್ರಕಟಿಸುವ ನ್ಯಾಯವ್ಯಾಪ್ತಿ ಹೈಕೋರ್ಟ್‌ಗೆ ಇಲ್ಲ ಎಂದು ಹೇಳಿರುವ ನ್ಯಾಯಪೀಠ, ಮಲ್ಟಿಪ್ಲೆಕ್ಸ್‌ಗಳಲ್ಲಿ ಶುದ್ಧ ಕುಡಿಯುವ ನೀರನ್ನು ಉಚಿತವಾಗಿ ಒದಗಿಸಲು ಚಿತ್ರಮಂದಿರದ ಮಾಲಕರು ಸಮ್ಮತಿಸಿದ್ದಾರೆ. ಹಾಗೆಯೇ, ಪೋಷಕರೊಂದಿಗೆ ಬರುವ ನವಜಾತ ಶಿಶುವಿಗೆ ಅಗತ್ಯವಿರುವ ಆಹಾರವನ್ನು ನೀಡಲು ಯಾವುದೇ ಅಡ್ಡಿ ಮಾಡಬಾರದು. ಇದಕ್ಕೆ ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳ ಮಾಲಕರು ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಪೀಠ ಹೇಳಿತು.



ಜಮ್ಮು ಕಾಶ್ಮೀರ ಹೈಕೋರ್ಟ್‌ 2018ರಲ್ಲಿ ಮಲ್ಟಿಪ್ಲೆಕ್ಸ್‌ ಪ್ರವೇಶ ಮತ್ತು ಆಹಾರ ನಿರ್ಬಂಧ ಕುರಿತ ತೀರ್ಪು ಪ್ರಶ್ನಿಸಿ ಚಿತ್ರ ಮಂದಿರ ಮಾಲೀಕರು ಮತ್ತು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಈ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.


ಇದನ್ನೂ ಓದಿ

20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಹೈಕೋರ್ಟ್ ಮಹತ್ವದ ಆದೇಶ




ಸರ್ಕಾರಿ ನೌಕರರ ಪದೋನ್ನತಿ: ಭಾಗ್ಯದ ಬಾಗಿಲು ತೆರೆದ ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು



ವಿಮೆ ಪರಿಹಾರಕ್ಕೆ HDFC ಹಿಂದೇಟು: ಬಿಸಿ ಮುಟ್ಟಿಸಿದ ಗ್ರಾಹಕ ನ್ಯಾಯಾಲಯ, ಬಡ್ಡಿ ಸಹಿತ 30 ಲಕ್ಷ ಪಾವತಿಗೆ ಆದೇಶ



ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿ: ಕೋರ್ಟನ್ನೇ ಬೆಚ್ಚಿಬೀಳಿಸಿದ ಪ್ರಸಂಗ!

2022ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ 100 ತೀರ್ಪುಗಳು- ಭಾಗ 1



2022ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ 100 ತೀರ್ಪುಗಳು- ಭಾಗ 2



2022ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ 100 ತೀರ್ಪುಗಳು- ಭಾಗ 3

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200