-->
ಚೆಕ್ ಅಮಾನ್ಯ ಪ್ರಕರಣ: ದೂರುದಾರ ಹಣದ ಮೂಲ, ಪಾವತಿ ವಿಧಾನ ಹೇಳುವ ಅಗತ್ಯವಿಲ್ಲ- ಸುಪ್ರೀಂ ಕೋರ್ಟ್ ಮಹತ್ವ ತೀರ್ಪು

ಚೆಕ್ ಅಮಾನ್ಯ ಪ್ರಕರಣ: ದೂರುದಾರ ಹಣದ ಮೂಲ, ಪಾವತಿ ವಿಧಾನ ಹೇಳುವ ಅಗತ್ಯವಿಲ್ಲ- ಸುಪ್ರೀಂ ಕೋರ್ಟ್ ಮಹತ್ವ ತೀರ್ಪು

ಚೆಕ್ ಅಮಾನ್ಯ ಪ್ರಕರಣ: ದೂರುದಾರ ಹಣದ ಮೂಲ, ಪಾವತಿ ವಿಧಾನ ಹೇಳುವ ಅಗತ್ಯವಿಲ್ಲ- ಸುಪ್ರೀಂ ಕೋರ್ಟ್ ಮಹತ್ವ ತೀರ್ಪು





ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಗಾವಣೀಯ ಲಿಖಿತಗಳ ಕಾಯ್ದೆ ಸೆಕ್ಷನ್ 138 ಅನ್ವಯ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ದೂರುದಾರರು ಆರೋಪಿಗೆ ನೀಡಲಾದ ಹಣದ ಮೂಲ ಯಾ ಪಾವತಿಯ ವಿಧಾನವನ್ನು ಹೇಳುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.



ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾದ ಎಂ.ಆರ್. ಷಾ ಹಾಗೂ ನ್ಯಾ. ಬಿ.ವಿ. ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.



ಚೆಕ್‌ನಲ್ಲಿ ನಮೂದಿಸಲಾದ ಮೊತ್ತದ ಹಣಕ್ಕೆ ತಾನು ಬಾಧ್ಯಸ್ಥನಲ್ಲ ಎಂಬುದನ್ನು ಋಜುವಾತು ಪಡಿಸುವ ಹೊಣೆ ಆರೋಪಿಯದ್ದಾಗಿರುತ್ತದೆ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಸ್ಪಷ್ಟಪಡಿಸಿದೆ.



ಆರೋಪಿಯನ್ನು ಖುಲಾಸೆಗೊಳಿಸಿದ ಕೇರಳ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ, ಚೆಕ್‌ನಲ್ಲಿ ತಿಳಿಸಲಾದ ಮೊತ್ತದ ವ್ಯವಹಾರ ಮಾಡಿದ ಕುರಿತು ದೂರುದಾರರು ಹಣದ ಮೂಲವನ್ನು ಬಹಿರಂಗಪಡಿಸಿಲ್ಲ ಎಂಬ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಆರೋಪಿಯನ್ನು ಖುಲಾಸಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ಹೈಕೋರ್ಟ್ ತೀರ್ಪನ್ನು ಬದಿಗಿರಿಸಿತು.



ಪ್ರಕರಣದ ಆರೋಪಿಯು ವಿವಾದಿತ ಚೆಕ್‌ ಮತ್ತು ಅದರಲ್ಲಿ ಹಾಕಲಾದ ಸಹಿಯ ಬಗ್ಗೆ ಯಾವುದೇ ಆಕ್ಷೇಪ ತೆಗೆಯದಿದ್ದರೆ, ಆಗ ಅದು ಕಾನೂನುಬದ್ಧ ಹಣದ ಮರುಪಾವತಿ ಬಾಧ್ಯತೆಗೆ ನೀಡಲಾದ ಚೆಕ್ ಎಂಬ ಪೂರ್ವಭಾವನೆಯನ್ನು ಇರುತ್ತದೆ ಎಂಬುದಾಗಿ ಸುಪ್ರೀಂ ಕೋರ್ಟ್ ನ್ಯಾಯಪೀಠ ಸ್ಪಷ್ಟಪಡಿಸಿದೆ.



ಪ್ರಕರಣ: ಪಿ. ರಸಿಯಾ Vs ಅಬ್ದುಲ್ ನಜೀರ್ ಮತ್ತು ಇನ್ನೊಬ್ಬರು

ಸುಪ್ರೀಂಕೋರ್ಟ್ CRIMINAL APPEAL NOS. 1233-1235 OF 2022 Dated: 12-08-2022




Ads on article

Advertise in articles 1

advertising articles 2

Advertise under the article