-->
Consumer Awareness | ರೈಲ್ವೇ ಕ್ಯಾಟರಿಂಗ್‌ನಲ್ಲಿ ಮಹಾ ಮೋಸ!- ರೈಲ್ವೇ ಪ್ರಯಾಣಿಕರೊಬ್ಬರ ಭೀಭತ್ಸ ಅನುಭವ ಇದು!

Consumer Awareness | ರೈಲ್ವೇ ಕ್ಯಾಟರಿಂಗ್‌ನಲ್ಲಿ ಮಹಾ ಮೋಸ!- ರೈಲ್ವೇ ಪ್ರಯಾಣಿಕರೊಬ್ಬರ ಭೀಭತ್ಸ ಅನುಭವ ಇದು!

ರೈಲ್ವೇ ಕ್ಯಾಟರಿಂಗ್‌ನಲ್ಲಿ ಮಹಾ ಮೋಸ!- ರೈಲ್ವೇ ಪ್ರಯಾಣಿಕರೊಬ್ಬರ ಭೀಭತ್ಸ ಅನುಭವ ಇದು!

ವಿಚಾರವಾದಿ ಸಂಘಟನೆಯ ರಾಷ್ಟ್ರೀಯ ನಾಯಕರಾದ ಪ್ರೊ. ನರೇಂದ್ರ ನಾಯಕ್ ಅವರು ರೈಲ್ವೇಯಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ರೈಲ್ವೇ ಕ್ಯಾಂಟೀನ್ ಸೇವೆಯನ್ನು ಪಡೆದುಕೊಂಡರು. ರಾತ್ರಿ ಊಟದ ಪ್ಯಾಕೇಟ್‌ ಖರೀದಿಯಲ್ಲಿ ರೈಲ್ವೇ ಇಲಾಖೆಯ ಕ್ಯಾಟರಿಂಗ್ ಸೇವೆಯಲ್ಲಿ ನಡೆಯುತ್ತಿರುವ ಮಹಾ ಮೋಸ ಬಯಲಾಯಿತು. ಅವರ ಈ ಅನುಭವ ಕಥನವನ್ನು ಅವರದ್ದೇ ಮಾತಿನಲ್ಲಿ ತಿಳಿದುಕೊಳ್ಳಿ...


ಪ್ರೊ. ನರೇಂದ್ರ ನಾಯಕ್ ಹೇಳಿದ ಮಾತು-

ನಾನು ಜನವರಿ 27, 2023 ರಂದು ಮಂಗಳೂರಿನಿಂದ ಈರೋಡ್‌ಗೆ ಎಸಿ 3 ಟೈರ್‌ನಲ್ಲಿ ರೈಲು ನಂ.12686 ರಲ್ಲಿ ಪ್ರಯಾಣಿಸುತ್ತಿದ್ದೆ ಮತ್ತು ನನ್ನ ಪಿಎನ್‌ಆರ್ ಸಂಖ್ಯೆ 4441725953. ನಾನು ಸಂಜೆಯ ಊಟಕ್ಕೆ ಮೊಟ್ಟೆ ಪದಾರ್ಥ ಜೊತೆಗೆ ಚಪಾತಿ ಆಹಾರದ ಪ್ಯಾಕೇಜ್‌ ಆರ್ಡರ್ ಮಾಡಿದ್ದೆ. ದಾರಿ ಮಧ್ಯೆ, ತಲಶ್ಶೇರಿ ದಾಟಿದ ನಂತರ ಈ ಪ್ಯಾಕೇಟ್‌ನ್ನು ನನ್ನ ಬರ್ತ್‌ಗೆ ತಲುಪಿಸಲಾಗಿದೆ. ತಂದವರು ಅದರ ಪಾವತಿಯಾಗಿ 90 ರೂ. ಪಾವತಿಸಲು ಕೇಳಿದರು. ನಾನು ಬಿಲ್ ಕೇಳಿದಾಗ ನಂತರ ಕೊಡುತ್ತೇನೆ ಎಂದರು. ಬಿಲ್ ತಂದುಕೊಡು, ಆಮೇಲೆ ಹಣ ಪಡೆದುಕೊಳ್ಳಿ ಎಂದು ಹೇಳಿದ್ದೆ.ನನಗೆ ನೀಡಲಾದ ಪ್ಯಾಕೇಟ್‌ನಲ್ಲಿ ಆಹಾರ ತಯಾರಿಕೆಯ ದಿನಾಂಕ ಅಥವಾ MRP ಯಾವುದೂ ಇರಲಿಲ್ಲ. ಅದರ ನಿಜವಾದ ಬೆಲೆಯ ಬಗ್ಗೆ ನನಗೆ ಖಚಿತವಿಲ್ಲ. ಆದರೆ ನನ್ನ ಎದುರಿನ ಮಧ್ಯ ಮತ್ತು ಮೇಲಿನ ಬರ್ತ್‌ನಲ್ಲಿರುವ ದಂಪತಿ ಇದೇ ಆಹಾರಕ್ಕಾಗಿ ಆರ್ಡರ್ ಮಾಡಿದ್ದರು ಮತ್ತು ಅವರು ಇಬ್ಬರಿಗೆ ನೀಡಲಾದ ಆಹಾರಕ್ಕೆ 180 ರೂ. ನೀಡಿದ್ದರು.ಸ್ವಲ್ಪ ಸಮಯದ ನಂತರ ರಾತ್ರಿ 9 ಗಂಟೆಯ ಸುಮಾರಿಗೆ, ವ್ಯಕ್ತಿಯೊಬ್ಬ ರೂ.50 (ಜಿಎಸ್‌ಟಿ ಸೇರಿದಂತೆ) ಬಿಲ್‌ನೊಂದಿಗೆ ಬಂದರು. ಮತ್ತೆ ಅವರು ನನಗೆ ದೀರ್ಘವಾದ ವಿವರಣೆಯನ್ನು ನೀಡಲು ಪ್ರಯತ್ನಿಸಿದರು. ಆದರೆ, ನಾನು ಅವರ ಮಾತನ್ನು ಮೊಟಕುಗೊಳಿಸಿದೆ. ಸದ್ಯ ಚಾಲ್ತಿಯಲ್ಲಿ ಇರುವ ನೆಲದ ಕಾನೂನಿನ ಪ್ರಕಾರ, ಬಿಲ್ ಮೂಲಕವೇ ಮಾರಾಟ ವಹಿವಾಟು ನಡೆಸಬೇಕು ಎಂದು ಹೇಳಿದೆ. ಮತ್ತು ಆ ಬಿಲ್‌ಗಿಂತ ಹೆಚ್ಚು ಹಣವನ್ನು ಗ್ರಾಹಕರು ಪಾವತಿಸಬೇಕಾಗಿಲ್ಲ.ಅದರಂತೆ, ಅವರು ನನ್ನಿಂದ ಬಿಲ್ ಮೊತ್ತವನ್ನು ಪಡೆದುಕೊಂಡರು (ಬಿಲ್ಲಿನಲ್ಲಿ ನಮೂದಿಸಿದಂತೆ ರೂ. 50 ಮಾತ್ರ). ಈ ಮಾತುಗಳನ್ನು ಕೇಳಿದ ಎದುರು ಬರ್ತ್‌ನಲ್ಲಿದ್ದ ಸಹ ಪ್ರಯಾಣಿಕರು ನಾವು ಏಕೆ ರೂ. 40 ಹೆಚ್ಚು ಏಕೆ ಪಾವತಿಸಬೇಕು ಎಂದು ಕೇಳಿದರು. ತಬ್ಬಿಬ್ಬಾದ ಕ್ಯಾಟರಿಂಗ್ ವಾಲಾ ಅವರಿಂದ ಪಡೆದ ಹೆಚ್ಚುವರಿ ಹಣವನ್ನು ಸಹ ಹಿಂದಿರುಗಿಸಿದರು!


ನಂತರ ನಾನು IRCTC ಗೆ ದೂರು ನೀಡಿದೆ. ಅದನ್ನು ಟ್ವಿಟರ್ ಮತ್ತು ಫೇಸ್‌ಬುಕ್‌ ಖಾತೆಗೆ ಪೋಸ್ಟ್ ಮಾಡಿದ್ದೇನೆ. ಐಆರ್‌ಸಿಟಿಸಿಯ ಪ್ರತಿನಿಧಿ ಎಂದು ಹೇಳಿಕೊಂಡ ಒಬ್ಬ ಬಾಲಾಜಿ ಎಂಬಾತ ನನಗೆ ಕರೆ ಮಾಡಿ ಸಮಜಾಯಿಷಿ ನೀಡಲು ಪ್ರಯತ್ನಿಸಿದರು.

ಅವರು ರೂ. 50 ಬಿಲ್ ಏಕೆ ಎಂಬ ಬಗ್ಗೆ ಉದ್ದುದ್ದ ವಿವರಣೆ ನೀಡಿದರು. ಅದರ ನಿಜವಾದ ಮೌಲ್ಯ ಹೆಚ್ಚು ಎಂದು ನಂಬಿಸಿ ಆ ನಿಜವಾದ ಬೆಲೆಕೆಲವು ಲಿಂಕ್‌ಗಳನ್ನು ಹುಡುಕುವಂತೆ ನನಗೆ ಹೇಳಿದರು.ಅವರ ಉತ್ತರ ಮತ್ತು ಅಧಿಕೃತ ವೆಬ್‌ಸೈಟ್‌ನಲ್ಲಿನ ಪ್ರತಿಕ್ರಿಯೆಯಿಂದ ನಾನು ತೃಪ್ತನಾಗಲಿಲ್ಲ, ಲೇಬಲ್‌ನಲ್ಲಿ MRP ಅನ್ನು ಏಕೆ ಮುದ್ರಿಸಿಲ್ಲ, ಮೆನುವಿನಲ್ಲಿ ನಿಜವಾದ ವೆಚ್ಚ ಹೆಚ್ಚಿದ್ದರೆ ಕಡಿಮೆ ಮೊತ್ತಕ್ಕೆ ಬಿಲ್ ಏಕೆ ನೀಡಲಾಯಿತು ಎಂಬ ನನ್ನ ಪ್ರಶ್ನೆಗೆ ಅವರಲ್ಲಿ ಉತ್ತರ ಇರಲಿಲ್ಲ.ಬಿಲ್‌ನಲ್ಲಿನ ಕ್ರಮಸಂಖ್ಯೆಯ ಪ್ರಕಾರ, ಇದು ಇನ್‌ವಾಯ್ಸ್ ಸಂಖ್ಯೆ 53 ಆಗಿದೆ. ಅಂತಹ ಒಂದು ಯಂತ್ರವು ಕ್ಯಾಟರರ್‌ ಬಳಿ ಇದೆ ಎನ್ನುವುದಾದರೆ, ಆದೊಂದು ಸರಣಿ ಸಂಖ್ಯೆ ದಿನಕ್ಕೆ ಎಂದು ಭಾವಿಸಿದರೆ, ಕ್ಯಾಟರಿಂಗ್ ಸೇವೆಯವರು ದಿನದಲ್ಲಿ ರಾತ್ರಿ 9 ಗಂಟೆಯವರೆಗೆ ಒಂದು ದಿನಕ್ಕೆ ಕೇವಲ 53 ಗ್ರಾಹಕರಿಗೆ ಸೇವೆ ಸಲ್ಲಿಸುವ ವ್ಯವಹಾರವನ್ನು ನಡೆಸಿದ್ದಾರೆ ಎಂಬುದನ್ನು ನಂಬುವುದು ತುಂಬಾ ಕಷ್ಟ.ಅದೂ ಎಂಆರ್‌ಪಿ ಹಾಕದೆ ಮತ್ತು ಬಿಲ್‌ಗಳನ್ನು ನೀಡದೆ ಗ್ರಾಹಕರಿಂದ ಹೆಚ್ಚಿನ ಶುಲ್ಕ ವಿಧಿಸುವ ಬೃಹತ್ ಹಗರಣವೇ ಆಗಿರುತ್ತದೆ. ಇದರಲ್ಲಿ ಮಹಾಮೋಸ ಅಡಗಿದೆ. ಪ್ರತಿಯೊಬ್ಬ ಗ್ರಾಹಕರಿಗೂ ಜಿಎಸ್‌ಟಿ ಸಹಿತ ಬಿಲ್ ನೀಡಬೇಕು. ಬಿಲ್ ಇಲ್ಲದಿದ್ದರೆ ಪಾವತಿ ಮಾಡಬಾರದು. ಬಿಲ್ ಇದ್ದರೆ ಮಾತ್ರ ಪಾವತಿ.. ಇಲ್ಲದಿದ್ದರೆ ನಿಮ್ಮ ಆಹಾರ ಉಚಿತ ಎಂದು ಬಿಲ್‌ನ ಲೇಬಲ್ ಹೇಳುತ್ತದೆ!
.

Ads on article

Advertise in articles 1

advertising articles 2

Advertise under the article