-->
ಪಿಟಿಷನ್‌ನಲ್ಲಿ ಗಂಭೀರ ನ್ಯಾಯಾಂಗ ನಿಂದನೆ ವಿಚಾರ: ಮಾನಹಾನಿ, ನಿಂದನಾತ್ಮಕ ಬರಹಕ್ಕೆ ವಕೀಲರೂ ಬಾಧ್ಯಸ್ಥರೇ?

ಪಿಟಿಷನ್‌ನಲ್ಲಿ ಗಂಭೀರ ನ್ಯಾಯಾಂಗ ನಿಂದನೆ ವಿಚಾರ: ಮಾನಹಾನಿ, ನಿಂದನಾತ್ಮಕ ಬರಹಕ್ಕೆ ವಕೀಲರೂ ಬಾಧ್ಯಸ್ಥರೇ?

ಪಿಟಿಷನ್‌ನಲ್ಲಿ ಗಂಭೀರ ನ್ಯಾಯಾಂಗ ನಿಂದನೆ ವಿಚಾರ: ಮಾನಹಾನಿ, ನಿಂದನಾತ್ಮಕ ಬರಹಕ್ಕೆ ವಕೀಲರೂ ಬಾಧ್ಯಸ್ಥರೇ?





ಪಿಟಿಷನ್ ಯಾ ಫಿರ್ಯಾದು/ದೂರಿನಲ್ಲಿ ಬರೆಯಲಾದ ಅಕ್ಷರಗಳಿಗೆ ವಕೀಲರು ಜವಾಬ್ದಾರರೇ...? ಒಂದು ವೇಳೆ, ಈ ಫಿರ್ಯಾದು ಯಾ ಪಿಟಿಷನ್‌ನಲ್ಲಿ ನ್ಯಾಯಾಂಗ ನಿಂದನೆ ಯಾ ಮಾನಹಾನಿಕರ, ನಿಂದನಾತ್ಮಕ ಬರಹ ಇದ್ದರೆ ವಕೀಲರನ್ನು ಹೊಣೆಗಾರರನ್ನಾಗಿ ಮಾಡಬಹುದೇ...?



ಇಂತಹ ಒಂದು ಪ್ರಕರಣ ಮಾನ್ಯ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬಂತು. ಮೋಹನ್ ಚಂದ್ರ ಪಿ. Vs ಕರ್ನಾಟಕ ರಾಜ್ಯ (ಸುಪ್ರೀಂ ಕೋರ್ಟ್‌). ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ. ಬಿ.ಆರ್. ಗವಾಯಿ ಮತ್ತು ನ್ಯಾ. ಬಿ.ವಿ. ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠ ಅರ್ಜಿದಾರರು ಮತ್ತು ವಾದಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ವಕೀಲರು (Advocate on Record) ಇಬ್ಬರಿಗೂ ನೋಟೀಸ್ ಜಾರಿಗೊಳಿಸಿದೆ.



ಕರ್ನಾಟಕ ಹೈಕೋರ್ಟ್‌ ನ್ಯಾಯಪೀಠದ ಬಗ್ಗೆ ಗಂಭೀರ ನ್ಯಾಯಾಂಗ ನಿಂದನೆಯಂತಹ ಬರಹವನ್ನು ವಾದಪತ್ರ/ಪಿಟಿಷನ್ ಹೊಂದಿದ್ದು, ಇದಕ್ಕೆ ನಿಮ್ಮ ವಿರುದ್ಧ ಯಾಕೆ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ನಡೆಸಬಾರದು ಎಂಬುದಕ್ಕೆ ಕಾರಣ ನೀಡುವಂತೆ ವಕೀಲರಿಗೆ ಸುಪ್ರೀಂ ಕೋರ್ಟ್ ತನ್ನ ನೋಟೀಸ್‌ನಲ್ಲಿ ಸೂಚಿಸಲಾಯಿತು.



ಈ ಪ್ರಕರಣದಲ್ಲಿ ನ್ಯಾಯಪೀಠವು ಎಂ.ವೈ ಶರೀಫ್ Vs ಮಾನ್ಯ ನ್ಯಾಯಾಧೀಶರು, ನಾಗಪುರ ಹೈಕೋರ್ಟ್ (1955) 1 SCR 757 ಪ್ರಕರಣವನ್ನು ಉಲ್ಲೇಖಿಸಿದೆ. ಈ ತೀರ್ಪಿನಲ್ಲಿ ಹೇಳಿದಂತೆ, ಗಂಭೀರ ನ್ಯಾಯಾಂಗ ನಿಂದನೆಯನ್ನು ಹೊಂದಿರುವಂತಹ ವಾದಪತ್ರ, ಪಿಟಿಷನ್ ಯಾ ಫಿರ್ಯಾದಿಗೆ ಸಹಿ ಹಾಕಿದ ವಕೀಲರೂ ನ್ಯಾಯಾಂಗ ನಿಂದನೆಯ ಆರೋಪಕ್ಕೆ ಗುರಿಯಾಗುತ್ತಾರೆ.

ಈ ಹಿನ್ನೆಲೆಯಲ್ಲಿ ಅರ್ಜಿದಾರರೊಂದಿಗೆ ದಾಖಲೆಯಲ್ಲಿ ಇರುವ ವಕೀಲರಿಗೂ ನೋಟೀಸ್ ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿತು.



ಪ್ರಕರಣ: ಮೋಹನ್ ಚಂದ್ರ ಪಿ. Vs ಕರ್ನಾಟಕ ರಾಜ್ಯ (ಸುಪ್ರೀಂ ಕೋರ್ಟ್‌)

Dated: 11-11-2022 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200