-->
ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ: ಬೊಮ್ಮಾಯಿ ಬಜೆಟ್ ಪ್ರಸ್ತಾಪದಲ್ಲಿ ಏನೇನಿದೆ..?

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ: ಬೊಮ್ಮಾಯಿ ಬಜೆಟ್ ಪ್ರಸ್ತಾಪದಲ್ಲಿ ಏನೇನಿದೆ..?

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ: ಬೊಮ್ಮಾಯಿ ಬಜೆಟ್ ಪ್ರಸ್ತಾಪದಲ್ಲಿ ಏನೇನಿದೆ..?





ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಮಾಡುವ ರಾಜ್ಯ ಸರ್ಕಾರ ಭರವಸೆ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ಬಗ್ಗೆ ಸರ್ಕಾರಿ ನೌಕರರು ಭಾರೀ ಭರವಸೆ ಇರಿಸಿಕೊಂಡಿದ್ದರು.



ಕಳೆದ 2022ರ ನವೆಂಬರ್‌ ಮೊದಲ ವಾರದಲ್ಲಿ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಏಳನೇ ವೇತನ ಆಯೋಗವನ್ನು ಸರ್ಕಾರ ರಚಿಸಿತ್ತು. ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದ ವೇತನ ಆಯೋಗ ಮಾರ್ಚ್ ವೇಳೆಗೆ ತನ್ನ ವರದಿಯನ್ನು ನೀಡಲಿದೆ ಎಂಬ ಭರವಸೆಯನ್ನೂ ಸರ್ಕಾರ ನೀಡಿತ್ತು.



ಈ ಮಧ್ಯೆ, ಸರ್ಕಾರಿ ನೌಕರರಿಗೆ ಏಳನೇ ಆಯೋಗದ ಸೌಲಭ್ಯ ಕಲ್ಪಿಸಲು 6000 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.



ಬೊಮ್ಮಾಯಿ ಹೇಳಿದ ಮತ್ತೊಂದು ಸಿಹಿ ಸುದ್ದಿ ಎಂದರೆ, ಏಳನೇ ವೇತನ ಆಯೋಗ ತನ್ನ ವರದಿ ನೀಡಿದ ಬಳಿಕ ಹೆಚ್ಚುವರಿ ಹಣವನ್ನು ಪೂರಕ ಬಜೆಟ್‌ನಲ್ಲಿ ಒದಗಿಸಲಾಗುವುದು ಮತ್ತು ಇದೇ ವರ್ಷದಿಂದ ಪರಿಷ್ಕೃತ ವೇತನ ನೀಡಲಾಗುವುದು ಎಂದು ಭರವಸೆ ನೀಡಿದ್ದರು.



ಆದರೆ, ಸಿಎಂ ಮಂಡಿಸಿದ ಬಜೆಟ್‌ನ ಯಾವ ಪುಟದಲ್ಲೂ ಈ 6000 ಕೋಟಿ ರೂಪಾಯಿ ಮೀಸಲಿಡುವ ಬಗ್ಗೆ ಯಾವ ಅಂಶವನ್ನೂ ದಾಖಲಿಸಿಲ್ಲ. ಇದರಿಂದ ಸಿಎಂ ಭರವಸೆ ಸುತ್ತ ಸಂಶಯದ ಸುತ್ತ ಸುಳಿದಾಡುತ್ತಿದೆ ಎಂದು ಸರ್ಕಾರಿ ನೌಕರರೊಬ್ಬರು ತಿಳಿಸಿದ್ದಾರೆ.



ಫಿಟ್‌ಮೆಂಟ್ ಆಧರಿಸಿ ಏಳನೇ ವೇತನ ಶ್ರೇಣಿ ಅನುಷ್ಠಾನ ಮಾಡಿದರೆ ರಾಜ್ಯದ ಬೊಕ್ಕಸಕ್ಕೆ ಮೊದಲ ವರ್ಷ 12 ಸಾವಿರ ಕೋಟಿಯಿಂದ 18 ಸಾವಿರ ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದು ಮಧ್ಯಮಾವಧಿ ವಿತ್ತೀಯ ಯೋಜನೆ ಹೇಳಿದೆ.


ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷ ಷಡಕ್ಷರಿ ಅಸಮಾಧಾನ

ಬಜೆಟ್‌ನಲ್ಲಿ ಹಣ ನೀಡದಿರುವುದು ಅನ್ಯಾಯ ಎಂದು ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷ ಷಡಕ್ಷರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಬೊಮ್ಮಾಯಿ ಜೊತೆ ಚರ್ಚಿಸಿದ ನಂತರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಷಡಕ್ಷರಿ ಸ್ಪಷ್ಟಪಡಿಸಿದ್ದಾರೆ.




Ads on article

Advertise in articles 1

advertising articles 2

Advertise under the article