-->
ಆದಾಯ ಮೀರಿದ ಆಸ್ತಿ ಗಳಿಕೆ: ನಿವೃತ್ತ ನ್ಯಾಯಾಧೀಶರು, ಕುಟುಂಬ ಸಹಿತ ಮೂವರಿಗೆ ಜೈಲು ಶಿಕ್ಷೆ

ಆದಾಯ ಮೀರಿದ ಆಸ್ತಿ ಗಳಿಕೆ: ನಿವೃತ್ತ ನ್ಯಾಯಾಧೀಶರು, ಕುಟುಂಬ ಸಹಿತ ಮೂವರಿಗೆ ಜೈಲು ಶಿಕ್ಷೆ

ಆದಾಯ ಮೀರಿದ ಆಸ್ತಿ ಗಳಿಕೆ: ನಿವೃತ್ತ ನ್ಯಾಯಾಧೀಶರು, ಕುಟುಂಬ ಸಹಿತ ಮೂವರಿಗೆ ಜೈಲು ಶಿಕ್ಷೆ

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಡಿ ನಿವೃತ್ತ ನ್ಯಾಯಾಧೀಶ ಹಾಗೂ ಅವರ ಕುಟುಂಬದ ಮೂವರಿಗೆ ಸಿಬಿಐ ವಿಶೇಷ ಕೋರ್ಟ್ ಜೈಲು ಶಿಕ್ಷೆ ನೀಡಿ ತೀರ್ಪು ನೀಡಿದೆ.ಆದಾಯ ತೆರಿಗೆ ಮೇಲ್ಮನವಿ ನ್ಯಾಯ ಮಂಡಳಿಯ ನಿವೃತ್ತ ನ್ಯಾಯಾಧೀಶ ಜೆ.ಇ. ವೀರಭದ್ರಪ್ಪ ಜೈಲು ಶಿಕ್ಷೆಗೆ ಒಳಗಾದ ನ್ಯಾಯಾಧೀಶರು.ಅಕ್ರಮ ಆಸ್ತಿ ಗಳಿಕೆ ಆರೋಪದಡಿಯಲ್ಲಿ ನಿವೃತ್ತ ನ್ಯಾಯಾದೀಶರಾದ ವೀರಭದ್ರಪ್ಪ ವಿರುದ್ಧ 2013ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ಸಿಬಿಐ ಕೋರ್ಟ್‌ನಲ್ಲಿ ನಡೆಸಿತ್ತು.ಪ್ರಕರಣದ ಬಗ್ಗೆ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು 2014ರಲ್ಲಿ ಆರೋಪಿ ನಿವೃತ್ತ ನ್ಯಾಯಾಧೀಶರು ಮತ್ತು ಕುಟುಂಬ ಸದಸ್ಯರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.ನ್ಯಾ. ವೀರಭದ್ರಪ್ಪ 2002-2013ರ ಅವಧಿಯಲ್ಲಿ ಬೆಂಗಳೂರು, ಮುಂಬೈ ಹಾಗೂ ದೆಹಲಿ ವಿಭಾಗದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಸದಸ್ಯರು ಹಾಗೂ ಉಪಾಧ್ಯಕ್ಷ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು.ಈ ಅವಧಿಯಲ್ಲಿ ಅವರು ಹಲವು ಕಡೆ ಅಪಾರ ಪ್ರಮಾಣದ ಕೃಷಿ ಭೂಮಿ, ನಿವೇಶನ, ಮನೆ ಹಾಗೂ ಇತರೆ ಸ್ಥಿರ ಮತ್ತು ಚರ ಸೊತ್ತನ್ನು ಗಳಿಸಿಕೊಂಡಿದ್ದರು. ಈ ವಿಷಯವನ್ನು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿತ್ತು.ಪ್ರಕರಣದ ವಿಚಾರಣೆ ನಡೆಸಿದ 34ನೇ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್. ಮೋಹನ್ ನೇತೃತ್ವದ ನ್ಯಾಯಪೀಠ ನಿವೃತ್ತ ನ್ಯಾಯಧೀಶ ಜೆ.ಇ. ವೀರಭದ್ರಪ್ಪ ಹಾಗೂ ಅವರ ಕುಟುಂಬದ ಇಬ್ಬರು ಸದಸ್ಯರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 1.5 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.ಜೊತೆಗೆ ಆರೋಪಿಗಳಿಗೆ ಸೇರಿದ ಸುಮಾರು 1.25 ಕೋಟಿ ರೂ. ಬೆಲೆ ಬಾಳುವ ಜಮೀನು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸಿಬಿಐ ವಿಶೇಷ ನ್ಯಾಯಾಲಯದ ಆದೇಶಿದೆ.ಹಿರಿಯ ಸರಕಾರಿ ಅಭಿಯೋಜಕರಾಗಿ ಶಿವಾನಂದ ಪೆರ್ಲ ಸಿಬಿಐ ಪರ ವಾದ ಮಂಡಿಸಿದ್ದರು. 

Ads on article

Advertise in articles 1

advertising articles 2

Advertise under the article