-->
ಖಾಸಗಿ ವ್ಯವಹಾರ ನಡೆಸುತ್ತಿದ್ದ ಶಿಕ್ಷಕರು ಸಸ್ಪೆಂಡ್!- ಶಿಕ್ಷಕರು ಯಾವ ಚಟುವಟಿಕೆ ಮಾಡಿದರೆ ಅಕ್ರಮ ಗೊತ್ತೇ..?

ಖಾಸಗಿ ವ್ಯವಹಾರ ನಡೆಸುತ್ತಿದ್ದ ಶಿಕ್ಷಕರು ಸಸ್ಪೆಂಡ್!- ಶಿಕ್ಷಕರು ಯಾವ ಚಟುವಟಿಕೆ ಮಾಡಿದರೆ ಅಕ್ರಮ ಗೊತ್ತೇ..?

ಖಾಸಗಿ ವ್ಯವಹಾರ ನಡೆಸುತ್ತಿದ್ದ ಶಿಕ್ಷಕರು ಸಸ್ಪೆಂಡ್!- ಶಿಕ್ಷಕರು ಯಾವ ಚಟುವಟಿಕೆ ಮಾಡಿದರೆ ಅಕ್ರಮ ಗೊತ್ತೇ..?

ಸರ್ಕಾರಿ ಶಾಲೆಯ ಶಿಕ್ಷಕರು ಯಾವೆಲ್ಲ ಚಟುವಟಿಕೆಯಲ್ಲಿ ಭಾಗವಹಿಸಬಾರದು ಮತ್ತು ಈ ಕುರಿತು ಸರ್ಕಾರದ ಶಿಕ್ಷಣ ಇಲಾಖೆಯ ಸುತ್ತೋಲೆ ಏನು ಹೇಳುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರವಾಗಿ ಚರ್ಚಿಸಲಾಗಿದೆ.


ಸರ್ಕಾರಿ ಶಾಲೆಯ ಶಿಕ್ಷಕರು ಖಾಸಗಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಪ್ರಕರಣ ಶಿಕ್ಷಕರ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಂತರಿಕ ವಿಚಾರಣೆಯಲ್ಲಿ ಅವರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡುವ ಶಿಕ್ಷೆಯ ಮೂಲಕ ಶಿಕ್ಷಣ ಇಲಾಖೆ ಬಿಸಿ ಮುಟ್ಟಿಸಿದೆ.


ಅಮಾನತು ಶಿಕ್ಷೆಗೆ ಒಳಗಾದ 8 ಮಂದಿ ಶಿಕ್ಷಕರು ಮೋದಿ ಕೇರ್ ವ್ಯವಹಾರದಲ್ಲಿ ತೊಡಗಿದ್ದರು ಎನ್ನಲಾಗಿದೆ.ಅಮಾನತಿಗೆ ಒಳಗಾದವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಶಿಕ್ಷಕರಾಗಿದ್ದರು. ಇವರನ್ನು ಅಮಾನತುಗೊಳಿಸಿ ಚಿತ್ರದುರ್ಗದ ಡಿಡಿಪಿಐ ಅಧಿಕಾರಿ ರವಿಶಂಕರ್ ರೆಡ್ಡಿ ಈ ಆದೇಶ ಹೊರಡಿಸಿದ್ದಾರೆ.ಶಿಕ್ಷಕರಾದ ರವಿಕುಮಾರ್, ಶ್ರೀನಿವಾಸ್, ಸಿದ್ದಮ್ಮ, ಇಂದ್ರಾಣಿ, ಮಂಜುಳಾ ಸೇರಿ ಎಂಟು ಮಂದಿ ಶಿಕ್ಷಕರು ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ. ಈ ಎಂಟು ಮಂದಿ ಶಿಕ್ಷಕರ ವಿರುದ್ಧ ಮಲ್ಲಿಕಾರ್ಜುನ ಎಂಬವರು ದೂರು ನೀಡಿದ್ದರು.


ಈ ದೂರನ್ನು ವಿಚಾರಣೆಗೆ ಕೈಗೆತ್ತಿಕೊಂಡ ಶಿಕ್ಷಣ ಇಲಾಖೆ 16 ಶಿಕ್ಷಕರನ್ನು ವಿಚಾರಣೆಗೊಳಪಡಿಸಿತ್ತು. ಶಿಕ್ಷಕರ ಚೈನ್ ಲಿಂಕ್ ಮಾದರಿಯ ವ್ಯವಹಾರದ ಮೂಲಕ ಮೋದಿ ಕೇರ್ ಉತ್ಪನ್ನಗಳ ವ್ಯವಹಾರ ನಡೆಸುತ್ತಿದ್ದರು ಎಂಬುದು ವಿಚಾರಣೆಯಲ್ಲಿ ಸಾಬೀತಾಗಿತ್ತು. ಈ ಅಕ್ರಮದಲ್ಲಿ ಭಾಗಿಯಾಗಿದ್ದ ಎಂಟು ಮಂದಿಯನ್ನು ಮಾಡಲಾಗಿದೆ.


ಸರ್ಕಾರಿ ಶಿಕ್ಷಕರು ಯಾವ ಚಟುವಟಿಕೆಯಲ್ಲಿ ಭಾಗವಹಿಸಬಾರದು..?

ಶಿಕ್ಷಣ ಇಲಾಖೆಯ ನಿಯಮ ಮತ್ತು ಸುತ್ತೋಲೆ ಪ್ರಕಾರ, 

# ಸರಕಾರಿ ಶಿಕ್ಷಕರು ತಮ್ಮ ಅಧಿಕಾರ ವ್ಯಾಪ್ತಿಯ ಪ್ರದೇಶವನ್ನು ಬಿಟ್ಟು ಹೋಗಬಾರದು. ಒಂದು ವೇಳೆ, ಇತರ ಪ್ರದೇಶಕ್ಕೆ ತೆರಳುವುದಿದ್ದರೆ ಮೇಲಾಧಿಕಾರಿಯ ಗಮನಕ್ಕೆ ತಂದು ಅವರ ಅನುಮತಿ ಪಡೆಯಬೇಕು.

# ವೈಯಕ್ತಿಕ ಉದ್ದೇಶಕ್ಕೆ ಯಾ ಖಾಸಗಿಯಾಗಿ ವಿದೇಶ ಪ್ರಯಾಣ ಮಾಡುವಂತಿಲ್ಲ.

ಯಾವುದೇ ಖಾಸಗಿ ವ್ಯಕ್ತಿ ಯಾ ಸಂಸ್ಥೆಯಿಂದ ವಂತಿಗೆ ಮತ್ತು ಉಡುಗೊರೆಗಳನ್ನು ಪಡೆಯುವಂತಿಲ್ಲ

#  ನೇರವಾಗಿ ಯಾ ಪರೋಕ್ಷವಾಗಿ ಖಾಸಗಿ ವ್ಯಾಪಾರ ನಡೆಸುವುದು ಮತ್ತು ಅಂತಹ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ.

# ಕಚೇರಿಯ ಕರ್ತವ್ಯದ ಆಚೆಗೆ ಖಾಸಗಿ ಕೆಲಸ ಮಾಡುವುದು ಮುಂತಾದ ಕೆಲಸಗಳನ್ನು ಮಾಡಬಾರದು

Ads on article

Advertise in articles 1

advertising articles 2

Advertise under the article