-->
ಪ್ರತ್ಯೇಕ ಕ್ರಿಮಿನಲ್ ಪ್ರಕರಣವಾದರೂ ಶಿಕ್ಷೆ ಏಕಕಾಲಕ್ಕೆ ಜಾರಿ: ಹೈಕೋರ್ಟ್ ತೀರ್ಪು

ಪ್ರತ್ಯೇಕ ಕ್ರಿಮಿನಲ್ ಪ್ರಕರಣವಾದರೂ ಶಿಕ್ಷೆ ಏಕಕಾಲಕ್ಕೆ ಜಾರಿ: ಹೈಕೋರ್ಟ್ ತೀರ್ಪು

ಪ್ರತ್ಯೇಕ ಕ್ರಿಮಿನಲ್ ಪ್ರಕರಣವಾದರೂ ಶಿಕ್ಷೆ ಏಕಕಾಲಕ್ಕೆ ಜಾರಿ: ಹೈಕೋರ್ಟ್ ತೀರ್ಪು





ಜೀವಾವಧಿ ಶಿಕ್ಷೆಯ ಅವಧಿಯೊಳಗೆ ಉಳಿದ ಶಿಕ್ಷೆಯ ಅವಧಿಯನ್ನೂ ಸೇರಿಸತಕ್ಕದ್ದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹಾಗೂ ದರೋಡೆ ಪ್ರಕರಣದಲ್ಲಿ ನಗದಿತ ಅವಧಿಯೊಳಗೆ ಶಿಕ್ಷೆ ವಿಧಿಸಲಾಗಿದ್ದರೆ, ಜೀವಾವಧಿ ಶಿಕ್ಷೆಯ ಅವಧಿಯೊಳಗೆ ಉಳಿದ ಶಿಕ್ಷೆಯ ಅವಧಿ ಸೇರಿಸಿ ಜೈಲು ಶಿಕ್ಷೆಯನ್ನು ಅನುಭವಿಸಬೇಕು. ಒಂದು ಶಿಕ್ಷೆಯ ಅವಧಿ ಮುಗಿದ ಮೇಲೆ ಇನ್ನೊಂದನ್ನು ಅನುಭವಿಸಲು ಅವಕಾಶ ಇಲ್ಲ ಎಂದು ನ್ಯಾಯಪೀಠ ಹೇಳಿದೆ.



ರಾಮಚಂದ್ರ ರೆಡ್ಡಿ ಮತ್ತು ಕೆ.ಆರ್. ಸುಕುಮಾರ್ ಎಂಬವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು ದರೋಡೆ ನಡೆಸುವಾಗ ನೋವು ಉಂಟು ಮಾಡಿದ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. 



ಈ ಎರಡು ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕೆ ಅಥವಾ ಪ್ರತ್ಯೇಕವಾಗಿ ಅನುಭವಿಸಬೇಕೆ ಎಂಬ ಬಗ್ಗೆ ತೀರ್ಪಿನಲ್ಲಿ ಸ್ಪಷ್ಟನೆ ನೀಡಿರಲಿಲ್ಲ. ಇದರಿಂದ ಅರ್ಜಿದಾರ ಅಪರಾಧಿಗಳು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.


ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರ ನ್ಯಾಯಪೀಠ, ಅರ್ಜಿದಾರರು ಎರಡೂ ಶಿಕ್ಷೆಗಳ ಅವಧಿಯನ್ನು ಏಕಕಾಲಕ್ಕೆ ಅನುಭವಿಸಬೇಕು ಎಂದು ಸ್ಪಷ್ಟನೆ ನೀಡಿತು.

ಅರ್ಜಿದಾರರು ಕಳೆದ 22 ವರ್ಷಗಳಿಂದ ಜೈಲಿನಲ್ಲಿ ಇರುವ ಕಾರಣ, ಈ ಇಬ್ಬರು ಅಪರಾಧಿಗಳಿಗೆ ಕ್ಷಮಾದಾನ ಅಥವಾ ಅವಧಿಪೂರ್ವ ಬಿಡುಗಡೆಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಅವಕಾಶವನ್ನು ಕಲ್ಪಿಸಿದೆ.


ಪ್ರಕರಣದ ವಿವರ

ಕೊಲೆ ಆರೋಪದ ಅಡಿಯಲ್ಲಿ ಬಾಗೆಪಲ್ಲಿ ರಾಮಚಂದ್ರಾ ರೆಡ್ಡಿ ಮತ್ತು ಚಿಂತಾಮಣಿಯ ಸುಕುಮಾರ್ ವಿರುದ್ಧ 2002ರ ಸೆ. 3ರಂದು ಕೇಸು ದಾಖಲಾಗಿತ್ತು. 


ಈ ಪ್ರಕರಣಗಳ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯ, ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ ತಲಾ 50 ಸಾವಿರ ರೂ. ದಂಡದ ಶಿಕ್ಷೆ ವಿಧಿಸಿತ್ತು. ದರೋಡೆ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಿತ್ತು.

Ads on article

Advertise in articles 1

advertising articles 2

Advertise under the article