ಇನ್ನು ಮುಂದೆ ಕನ್ನಡದಲ್ಲೇ ಸಿಗಲಿದೆ ನ್ಯಾಯಾಲಯದ ತೀರ್ಪುಗಳು!
ಇನ್ನು ಮುಂದೆ ಕನ್ನಡದಲ್ಲೇ ಸಿಗಲಿದೆ ನ್ಯಾಯಾಲಯದ ತೀರ್ಪುಗಳು!
ಆಂಗ್ಲ ಭಾಷೆಯಲ್ಲಿ ಇರುವ ತೀರ್ಪುಗಳನ್ನು ಕೃತಕ ಬುದ್ದಿಮತ್ತೆ (ಆರ್ಟಿಫೀಷಿಯಲ್ ಇಂಟೆಲಿಜೆನ್ಸ್) ಸಹಕಾರದಿಂದ ಕನ್ನಡಕ್ಕೆ ಅನುವಾದ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನು ಕನ್ನಡದಲ್ಲೇ ನ್ಯಾಯಾಲಯಗಳ ಪ್ರಮುಖ ತೀರ್ಪುಗಳು ದೊರೆಯಲಿದೆ.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಸಿ.ಎಂ. ಜೋಷಿ ಅವರ ನೇತೃತ್ವದ ಸಲಹಾ ಸಮಿತಿಯನ್ನು ರಚಿಸಲಾಗಿತ್ತು.
ಈ ಸಮಿತಿ ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದು, ಅನುವಾದ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ.
ಸುಪ್ರೀಂ ಕೋರ್ಟ್ ವಿಧಿಕ್ ಅನುವಾದ್ ಸಾಫ್ಟ್‌ವೇರ್ ಆಧರಿಸಿದ ಸುವಾಸ್ ತಂತ್ರಾಂಶವನ್ನು ಹೈಕೋರ್ಟ್‌ನಲ್ಲಿ ಲಭ್ಯವಿರುವ ಕಂಪ್ಯೂಟರ್‌ಗಳಲ್ಲಿ ಅಳವಡಿಸಲಾಗಿದ್ದು, ತೀರ್ಪುಗಳನ್ನು ಅನುವಾದ ಮಾಡಲು ಈಗಾಗಲೇ ನಿಯುಕ್ತರಾಗಿರುವ ಕನ್ನಡ ತೀರ್ಪುಗಳ ಅನುವಾದಕರ ತಂಡವನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಈ ಅನುವಾದಕರಿಗೆ ಬುದ್ದಿಮತ್ತೆ ತಜ್ಞರು ತರಬೇತಿ ಹಾಗೂ ಮಾರ್ಗದರ್ಶನವನ್ನು ನೀಡುತ್ತಿದ್ದು, ಸುವಾಸ್‌ನಲ್ಲಿ ಕನ್ನಡ ಪದಗಳನ್ನು ಸೇರಿಸುವ ಕೆಲಸ ನಡೆಯುತ್ತಿದೆ ಎಂದು ಹೈಕೋರ್ಟ್ ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಎನ್. ಜಿ. ದಿನೇಶ್ ಮಾಹಿತಿ ನೀಡಿದ್ದಾರೆ.