ವಾಟ್ಸ್ಯಾಪ್, ಇಮೇಲ್ ಮೂಲಕ ಸಮನ್ಸ್ ನೋಟೀಸ್ ಜಾರಿ: ಕಾನೂನು ದೃಷ್ಟಿಯಲ್ಲಿ ನೂತನ ಪದ್ಧತಿ
ವಾಟ್ಸ್ಯಾಪ್, ಇಮೇಲ್ ಮೂಲಕ ಸಮನ್ಸ್ ನೋಟೀಸ್ ಜಾರಿ: ಕಾನೂನು ದೃಷ್ಟಿಯಲ್ಲಿ ನೂತನ ಪದ್ಧತಿ
ಎದುರುವಾದಿ ಯಾ ಪ್ರತಿವಾದಿಗೆ ಸಮನ್ಸ್ ಜಾರಿಗೊಳಿಸಿದ ಬಳಿಕವೇ ಪ್ರಕರಣದ ವಿಚಾರಣೆ ನಡೆಯುವುದು ಕಾನೂನಿನ ನಿಯಮ. ಆದರೆ, ಬದಲಾದ ಕಾಲಘಟ್ಟದಲ್ಲಿ ಅಂಚೆ ಮೂಲಕ ಎದುರುವಾದಿಗೆ ಸಮನ್ಸ್ ಸೇವೆ ಪೂರ್ಣಗೊಳ್ಳದಿದ್ದರೆ ಏನು ಮಾಡುವುದು..?
ಆಧುನಿಕ ತಂತ್ರಜ್ಙಾನಕ್ಕೆ ಕಾನೂನು ಅಳವಡಿಕೆಯನ್ನು ಮಾಡಬಹುದೇ..? ಕಾನೂನು ಇದನ್ನು ಒಪ್ಪಬಹುದೇ..? ಎಂಬುದು ಉದ್ಭವಗೊಂಡ ಪ್ರಶ್ನೆ.
ಕಾನೂನು ಪಂಡಿತರ ಅಂಗಳದಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೊಳಗಾಗಿದೆ. ಆದರೆ, ಇದೀಗ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಕೋರ್ಟ್ ವಾಟ್ಸ್ಯಾಪ್ ಅಥವಾ ಇ-ಮೇಲ್ ವೇದಿಕೆಯ ಮೂಲಕ ಸಮನ್ಸ್ ಜಾರಿಗೊಳಿಸಿರುವ ಕ್ರಮವನ್ನು ಕಾನೂನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ ಇಂತಹ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ಸಮ್ಸ್ ಸೇವೆಯನ್ನು ಒಪ್ಪಲಾಗದು ಎಂದು ರಿಜಿಸ್ಟ್ರಾರ್ ಪರ್ವೇಶ್ ಡಿ. ಹೇಳಿದ್ದು, ದಾವೆಯ ವಿಚಾರಣೆ ನಡೆಸಲು ಪ್ರತಿವಾದಿಗೆ ಸಮನ್ಸ್ ಜಾರಿಗೊಳಿಸಲು ಹೊಸ ಆದೇಶ ಹೊರಡಿಸಿದರು.
ಆದರೆ, 2017ರಲ್ಲಿ ದೆಹಲಿಯ ರೋಹಿಣಿ ಕೋರ್ಟ್ ವಾಟ್ಸ್ಯಾಪ್ ಮೂಲಕ ಕಾಸ್ ನೋಟೀಸ್ ಜಾರಿಗೊಳಿಸಿರುವುದನ್ನು ಅಂಗೀಕರಿಸಿ ಸಮ್ಮತಿಸಿತ್ತು. ಅದೊಂದು ದಾವಾ ಆಸ್ತಿಗೆ ಎದುರುದಾಋರ ಅತಿಕ್ರಮ ಪ್ರವೇಶ ಕುರಿತ ಪ್ರಕರಣವಾಗಿತ್ತು. ವಾದಿಯು ಸಮನ್ಸ್ ಜಾರಿಯಾದ ಬಗ್ಗೆ ವಾಟ್ಸ್ಯಾಪ್ ಪ್ರತಿ ಜಾರಿಗೊಳಿಸಿರುವ ಬಗ್ಗೆ ಕಲರ್ ಪ್ರಿಂಟ್‌ಔಟ್‌ನ್ನು ನ್ಯಾಯಪೀಠದ ಮುಂದಿರಿಸಿದ್ದರು. ತುರ್ತಿನ ಜರೂರು ಸಂದರ್ಭದಲ್ಲಿ ಇದೊಂದು ಸಮರ್ಪಕ ಜ್ಯಾರಿ ಎಂದು ನ್ಯಾಯಪೀಠ ಪರಿಗಣಿಸಿದರೂ ಪ್ರತಿವಾದಿಗೆ ಮತ್ತೆ ಸಮನ್ಸ್ ಜಾರಿಗೊಳಿಸಲು ಆದೇಶ ಹೊರಡಿಸಿದ್ದರು.
2018ರಲ್ಲಿ ಎಸ್‌ಬಿಐ ಕಾರ್ಡ್ಸ್ ಎಂಡ್ ಪೇಮೆಂಟ್ ಸರ್ವಿಸ್ Vs ರೋಹಿದಾಸ್ ಜಾಧವ್ ಪ್ರಕರಣದಲ್ಲಿ ವಾಟ್ಸ್ಯಾಪ್ ಮೂಲಕ ಅಮಲ್ಜಾರಿ ಪ್ರಕರಣದ ನೋಟೀಸ್ ಜಾರಿಗೊಳಿಸಿರುವುದನ್ನು ಬಾಂಬೆ ಹೈಕೋರ್ಟ್ ಸಮ್ಮತಿಸಿತ್ತು.
2020ರ ಜನವರಿ ತಿಂಗಳಿನಲ್ಲಿ ಪಕ್ಷಕಾರರಿಗೆ ವಾಟ್ಸ್ಯಾಪ್, ಇಮೇಲ್ ಮತ್ತು ಫ್ಯಾಕ್ಸ್ ಸಂದೇಶ ಇದರಲ್ಲಿ ಯಾವುದು ಪ್ರಾಯೋಗಿಕವೋ ಆ ಮಾದರಿ ಮೂಲಕ ನೋಟೀಸ್ ಜಾರಿಗೊಳಿಸುವುದಕ್ಕೆ ವಕೀಲ ಆಯುಕ್ತರಿಗೆ ಕೇರಳ ಹೈಕೋರ್ಟ್ ಅನುಮತಿ ನೀಡಿತ್ತು.
2020ರ ಜುಲೈ ತಿಂಗಳಿನಲ್ಲಿ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ನೋಟೀಸ್ ಮತ್ತು ಸಮನ್ಸ್ ಜ್ಯಾರಿಯನ್ನು ವಾಟ್ಸ್ಯಾಪ್ ಮತ್ತು ಇಮೇಲ್ ಮೂಲಕ ಜಾರಿ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ನೀಡಿತ್ತು. ಆ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಮತ್ತು ಸಾರ್ವಜನಿಕರ ಮುಕ್ತ ಸಂಚಾರಕ್ಕೆ ನಿರ್ಬಂಧ ಇತ್ತು ಎಂಬುದು ಗಮನಿಸಬೇಕಾದ ಅಂಶ.