-->
ದೇವಾಲಯದಲ್ಲಿ ಯಾವ ಬಣ್ಣ ಬಳಕೆ ಮಾಡಬೇಕು ಎಂದು ಯಾರೂ ಒತ್ತಾಯಿಸಲಾಗದು: ಕೇರಳ ಹೈಕೋರ್ಟ್ ತೀರ್ಪು

ದೇವಾಲಯದಲ್ಲಿ ಯಾವ ಬಣ್ಣ ಬಳಕೆ ಮಾಡಬೇಕು ಎಂದು ಯಾರೂ ಒತ್ತಾಯಿಸಲಾಗದು: ಕೇರಳ ಹೈಕೋರ್ಟ್ ತೀರ್ಪು

ದೇವಾಲಯದಲ್ಲಿ ಯಾವ ಬಣ್ಣ ಬಳಕೆ ಮಾಡಬೇಕು ಎಂದು ಯಾರೂ ಒತ್ತಾಯಿಸಲಾಗದು: ಕೇರಳ ಹೈಕೋರ್ಟ್ ತೀರ್ಪು





ದೇವಸ್ಥಾನದಲ್ಲಿ ಕೇಸರಿ ಬಣ್ಣವನ್ನೇ ಬಳಕೆ ಮಾಡಬೇಕು ಎಂದು ಒತ್ತಾಯಿಸಲು ಭಕ್ತರಿಗೆ ಕಾನೂನಾತ್ಮಕ ಅಧಿಕಾರವಿಲ್ಲ. ಅದೇ ರೀತಿ, ರಾಜಕೀಯವಾಗಿ ತಟಸ್ಥ ಬಣ್ಣದ ಅಲಂಕಾರ ವಸ್ತುಗಳನ್ನು ಬಳಸಬೇಕು ಎಂದು ಜಿಲ್ಲಾಡಳಿತ ಯಾ ಪೊಲೀಸರು ಸೂಚಿಸಲೂ ಅಧಿಕಾರವಿಲ್ಲ.



ಹೀಗೆಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ತಿರುವಾಂಕೂರು ದೇವಸ್ವಂ ಮಂಡಳಿ ಆಡಳಿತದ ವೆಲ್ಲಾಯಾನಿ ಭದ್ರಕಾಳಿ ದೇವಸ್ಥಾನದಲ್ಲಿ ಎದ್ದ ಅಲಂಕಾರ ಬಣ್ಣದ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.



ನ್ಯಾ. ಅನಿಲ್ ಕೆ. ನರೇಂದ್ರನ್ ಹಾಗೂ ನ್ಯಾ. ಪಿ.ಜಿ. ಅಜಿತ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಈ ತೀರ್ಪು ನೀಡಿದ್ದು, ಹಬ್ಬವನ್ನು ಆಚರಿಸಲು ಕಾನೂನಾತ್ಮಕವಾಗಿ ತೊಡಕುಂಟಾದರೆ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರನ್ನು ಸಂಪರ್ಕಿಸಲು ಸ್ವತಂತ್ರವಾಗಿದೆ ಎಂದು ಸ್ಪಷ್ಟಪಡಿಸಿದೆ.



ಸದ್ರಿ ಭದ್ರಕಾಳಿ ದೇವಾಲಯದಲ್ಲಿ ನಡೆಯುವ ಹಬ್ಬಕ್ಕೆ ರಾಜಕೀಯವಾಗಿ "ತಟಸ್ಥ"ವಾಗಿರುವ ಬಣ್ಣದ ಅಲಂಕಾರ ಮಾತ್ರ ಮಾಡಬೇಕು ಎಂದು ಜಿಲ್ಲಾ ದಂಡಾಧಿಕಾರಿ ಮತ್ತು ಪೊಲೀಸ್ ಇಲಾಖೆ ಆದೇಶ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ದೇವಸ್ಥಾನದ ಸಲಹಾ ಸಮಿತಿ ಮತ್ತು ಮೇಜರ್‌ ವೆಲ್ಲಾಯನಿ ಭದ್ರಕಾಳಿ ದೇವಿ ದೇವಸ್ಥಾನದ ಒಬ್ಬ ಭಕ್ತರು ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದರು.



ಇದರ ಜೊತೆಗೆ ದೇವಾಲಯದ ಉತ್ಸವದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಮಾಡುವಂತೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.



Ads on article

Advertise in articles 1

advertising articles 2

Advertise under the article