
ಜಯನಗರ ವಿಧಾನಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ವಿವೇಕ್ ಸುಬ್ಬಾರೆಡ್ಡಿ ಪ್ರಚಾರ ಶುರು
ಜಯನಗರ ವಿಧಾನಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ವಿವೇಕ್ ಸುಬ್ಬಾರೆಡ್ಡಿ ಪ್ರಚಾರ ಶುರು
2023ರ ಚುನಾವಣೆಯ ಕಾವು ಏರತೊಡಗಿದೆ. ಬೆಂಗಳೂರಿನ ಅತಿದೊಡ್ಡ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಯುವ ವಕೀಲ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಬಿಜೆಪಿ ಪರ ಪ್ರಚಾರ ಆರಂಭಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಯಾಗಿರುವ ವಿವೇಕ್ ಸುಬ್ಬಾರೆಡ್ಡಿ ಈಗಾಗಲೇ ಪ್ರಚಾರ ಕಾರ್ಯ ಶುರು ಮಾಡಿದ್ದಾರೆ.
ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆ.ಪಿ.ನಗರದ ಎಂ.ಟಿ.ಆರ್. ಪಾರ್ಕ್, ಮಾಧವನ್ ಪಾರ್ಕ್ ಸೇರಿದಂತೆ ವಿವಿಧ ಜನವಸತಿ ಪ್ರದೇಶಗಳಲ್ಲಿ ವಿವೇಕ್ ಸುಬ್ಬಾರೆಡ್ಡಿ ಅವರು ತಮ್ಮ ಅಭಿಮಾನಿಗಳು ಮತ್ತು ಹಿತೈಶಿಗಳ ಜೊತೆಗೆ ಸೇರಿ ಪ್ರಚಾರ ಕಾರ್ಯ ನಡೆಸಿದರು.
ವಿವೇಕ್ ಸುಬ್ಬಾರೆಡ್ಡಿ ಅವರ ಪ್ರಚಾರದ ಭರಾಟೆಗೆ ಜನರಲ್ಲೂ ಉತ್ತಮ ಸ್ಪಂದನೆ ಕಂಡುಬಂತು.