ನಿಯಮ ಮೀರಿ ಕಡತ ವಿಲೇವಾರಿಗೆ ಒತ್ತಡ: ದ.ಕ. ಡಿಸಿ ವಿರುದ್ಧ ಸಿಬ್ಬಂದಿ ದೂರು- ವಿಚಾರಣೆ ಆರಂಭ
Monday, March 6, 2023
ನಿಯಮ ಮೀರಿ ಕಡತ ವಿಲೇವಾರಿಗೆ ಒತ್ತಡ: ದ.ಕ. ಡಿಸಿ ವಿರುದ್ಧ ಸಿಬ್ಬಂದಿ ದೂರು- ವಿಚಾರಣೆ ಆರಂಭ
ದಕ್ಷಿಣ ಕನ್ನಡ ಜಿಲ್ಲಾದಿಕಾರಿ ರವಿಕುಮಾರ್ ಎಂ. ಆರ್. ಈಗ ನಿಯಮ ಮೀರಿ ಕಡತ ವಿಲೇವಾರಿ ಮಾಡಲು ಒತ್ತಡ ಹೇರಿದ ಆರೋಪ ಎದುರಿಸುತ್ತಿದ್ದಾರೆ.
ಈ ಬಗ್ಗೆ ಅವರ ಅಧೀನ ಸಿಬ್ಬಂದಿ ಹಾಗೂ ಅಧಿಕಾರಿಗಳೇ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದು, ಇದೀಗ ಡಿಸಿ ಪ್ರಾದೇಶಿಕ ಅಧಿಕಾರಿಯ ವಿಚಾರಣೆ ಎದುರಿಸಬೇಕಾಗಿದೆ.
ದ.ಕ. ಡಿಸಿ ರವಿಕುಮಾರ್ ಅವರು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕಡತಗಳನ್ನು ನಿಯಮ ಮೀರಿ ವಿಲೇ ಮಾಡಲು ಒತ್ತಡ ಹೇರುತ್ತಿದ್ದಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಜಿಲ್ಲೆಯ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ದೂರು ಸಲ್ಲಿಸಿದ್ದರು.