-->
ಹೋಳಿ ಆಚರಣೆ: ಮಾರ್ಚ್ 8ಕ್ಕೆ ಕೋರ್ಟ್ ರಜೆ, ನಾಲ್ಕನೇ ಶನಿವಾರ ರಜೆ ರದ್ದು..

ಹೋಳಿ ಆಚರಣೆ: ಮಾರ್ಚ್ 8ಕ್ಕೆ ಕೋರ್ಟ್ ರಜೆ, ನಾಲ್ಕನೇ ಶನಿವಾರ ರಜೆ ರದ್ದು..

ಹೋಳಿ ಆಚರಣೆ: ಮಾರ್ಚ್ 8ಕ್ಕೆ ಕೋರ್ಟ್ ರಜೆ, ನಾಲ್ಕನೇ ಶನಿವಾರ ರಜೆ ರದ್ದು..




ರಾಜ್ಯಾದ್ಯಂತ ಹೈಕೋರ್ಟ್ ಸೂಚನೆಯಂತೆ ಮಾರ್ಚ್ 8ರಂದು ಹೋಳಿ ಹಬ್ಬಕ್ಕೆ ನ್ಯಾಯಾಲಯಗಳಿಗೆ ರಜೆ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೋರ್ಟ್ ಕಲಾಪಗಳು ನಡೆಯುವುದಿಲ್ಲ.



ಆದರೆ, ಈ ರಜೆಗೆ ಬದಲು ಮಾರ್ಚ್‌ ತಿಂಗಳ ನಾಲ್ಕನೇ ಶನಿವಾರ (ಮಾರ್ಚ್ 25ರಂದು)ದಂದು ಪೂರ್ಣ ಕರ್ತವ್ಯದ ದಿನವಾಗಿ ಪರಿಗಣಿಸಲಿದ್ದು, ಆ ದಿನ ಕೋರ್ಟ್ ಕಲಾಪಗಳು ಪೂರ್ಣ ಕರ್ತವ್ಯದ ದಿನದಂತೆ ನಡೆಯಲಿದೆ.



2023ರ ಈ ಕ್ಯಾಲೆಂಡರ್ ವರ್ಷದಲ್ಲಿ ಐದು ದಿನಗಳು ಪೂರ್ಣ ರಜೆ ಘೋಷಣೆಯಾಗಿದ್ದು, ಇದಕ್ಕೆ ಪ್ರತಿಯಾಗಿ ಆಯಾ ತಿಂಗಳ ನಾಲ್ಕನೇ ಶನಿವಾರ ಕರ್ತವ್ಯದ ದಿನವಾಗಿ ಕಲಾಪಗಳು ನಡೆಯಲಿವೆ.




08-03-2023 ಹೋಳಿ ಹಬ್ಬ

25-08-2023 ವರ ಮಹಾಲಕ್ಷ್ಮಿ ಹಬ್ಬ

06-09-2023 ಶ್ರೀ ಕೃಷ್ಣ ಜನ್ಮಾಷ್ಟಮಿ

13-11-2023 ದೀಪಾವಳಿ ಅಮಾವಾಸ್ಯೆ

01-01-2024 ನೂತನ ವರ್ಷ


ಈ ಮೇಲ್ಕಂಡ ದಿನಗಳಿಗೆ ರಜೆ ಘೋಷಿಸಲಾಗಿದ್ದು, ಇದಕ್ಕೆ ಬದಲಾಗಿ ಈ ಕೆಳಕಂಡ ನಾಲ್ಕನೇ ಶನಿವಾರದಂದು ಕೋರ್ಟ್ ಕಲಾಪಗಳು ಪೂರ್ಣಾವಧಿ ಕಾರ್ಯನಿರ್ವಹಿಸಲಿದೆ.


25-03-2023

26-08-2023

23-09-2023

25-11-2023

Ads on article

Advertise in articles 1

advertising articles 2

Advertise under the article