ಕಳವಾದ ಮೊಬೈಲ್ ಪತ್ತೆಗೆ ಬಂದಿದೆ ಹೊಸ ಪೋರ್ಟಲ್!
Thursday, March 2, 2023
ಕಳವಾದ ಮೊಬೈಲ್ ಪತ್ತೆಗೆ ಬಂದಿದೆ ಹೊಸ ಪೋರ್ಟಲ್!
ಕಳೆದುಹೋದ ಯಾ ಕಳವಾದ ಮೊಬೈಲ್ ಪತ್ತೆಗೆ ಈಗ ಹೊಸ ಪೋರ್ಟಲ್ ಬಂದಿದೆ. ಸಿಇಐಆರ್ ಪೋರ್ಟಲ್ ಮೂಲಕ ಕಳವಾದ ಮೊಬೈಲ್‌ನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
ಈ ಪೋರ್ಟಲ್ ಬಳಸಿ ದಕ್ಷಿಣ ಕನ್ನಡ ಪೊಲೀಸರು ಕೇವಲ 10 ದಿನದಲ್ಲಿ 110 ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಿಕೊಟ್ಟಿದ್ದಾರೆ.
ಕಳವು ಮಾಡಲಾದ, ಕಳೆದುಹೋದ, ಯಾ ಸುಲಿಗೆಯಾದ ಮೊಬೈಲ್ ಫೋನ್‌ಗಳ ದುರ್ಬಳಕೆಯನ್ನು ಈ ತಂತ್ರಜ್ಞಾನದಿಂದ ತಡೆಗಟ್ಟಬಹುದು.
ಇದೊಂದು ಪರಿಣಾಮಕಾರಿ ಪೋರ್ಟಲ್ ಆಗಿದ್ದು,ದಕ್ಷಿಣ ಕನ್ನಡ ಪೊಲೀಸರು ಈ ಪೋರ್ಟಲ್ ಬಳಸಿ ಮೊಬೈಲ್‌ಗಳ ಪತ್ತೆಯಲ್ಲಿ ಗಣನೀಯ ಪ್ರಗತಿ ದಾಖಲಿಸಿದ್ದಾರೆ ಎಂದು ಎಸ್‌ಪಿ ಡಾ. ಅಮಟೆ ವಿಕ್ರಮ್ ಮಾಹಿತಿ ನೀಡಿದ್ದಾರೆ.
ಒಂದೇ ದಿನದಲ್ಲಿ 15 ಫೋನ್‌ಗಳನ್ನು ಪತ್ತೆ ಹಚ್ಚಿ ಆ ಫೋನ್‌ಗಳ ವಾರಿಸುದಾರರಿಗೆ ವಾಪಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.