ಸ್ಟಾರ್ ನಟ ಅರ್ಷದ್ ವಾರ್ಸಿ, ಪತ್ನಿ ಸಹಿತ 44 ಮಂದಿಗೆ ಶೇರು ಮಾರುಕಟ್ಟೆ ನಿರ್ಬಂಧ
ಸ್ಟಾರ್ ನಟ ಅರ್ಷದ್ ವಾರ್ಸಿ, ಪತ್ನಿ ಸಹಿತ 44 ಮಂದಿಗೆ ಶೇರು ಮಾರುಕಟ್ಟೆ ನಿರ್ಬಂಧ
ಜಾಲಿ ಎಲ್‌ಎಲ್‌ಬಿ, ಮುನ್ನಾಬಾಯಿ ಎಂಬಿಬಿಎಸ್‌ನ ಸ್ಟಾರ್ ನಟ ಅರ್ಷದ್ ವಾರ್ಸಿಗೆ ಶೇರು ಮಾರುಕಟ್ಟೆಯಲ್ಲಿ ನಿರ್ಬಂಧ ವಿಧಿಸಲಾಗಿದೆ. ಜೊತೆಗೆ ಆತನ ಪತ್ನಿ ಮಾರಿಯ ಗೊರೆಟ್ಟಿ ಸಹಿತ ಒಟ್ಟು 45 ಮಂದಿಗೆ ಬ್ಯಾನ್ ಬಿಸಿ ತಟ್ಟಿದೆ.
ಏಕೆ ಹೀಗೆ ಗೊತ್ತೇ..?
ಅರ್ಷದ್ ವಾರ್ಸಿ ಹಾಗೂ ಈ 45 ಮಂದಿ ಶಾರ್ಪ್‌ಲೈನ್ ಬ್ರಾಡ್‌ಕಾಸ್ಟ್ ಲಿಮಿಟೆಡ್ ಮತ್ತು ಸದ್ನ ಬ್ರಾಡ್‌ಕಾಸ್ಟ್ ಲಿಮಿಟೆಡ್ ಬಗ್ಗೆ ಯೂಟ್ಯೂಬ್‌ನಲ್ಲಿ ದಾರಿತಪ್ಪಿಸುವ ಮಾಹಿತಿ ಇರುವ ಸುದ್ದಿ ವಿಡಿಯೋವನ್ನು ಯೂಟ್ಯೂನ್‌ನಲ್ಲಿ ಹಾಕಿ ಶೇರು ಮಾರುಕಟ್ಟೆಯಲ್ಲಿ ಅಡ್ಡದಾರಿಯ ವ್ಯಾಪಾರ ನಡೆಸುತ್ತಿದ್ದರು ಎನ್ನಲಾಗಿದೆ.
ಲಾಭದಲ್ಲಿದೆ ಎಂದು ಬಿಂಬಿಸಿ ಶಾರ್ಪ್‌ಲೈನ್ ಬ್ರಾಡ್‌ಕಾಸ್ಟ್ ಮತ್ತು ಸದ್ನ ಬ್ರಾಡ್‌ಕಾಸ್ಟ್ ಸ್ಟಾಕ್‌ಗಳನ್ನು ಖರೀದಿ ಮಾಡಲು ಪ್ರೋತ್ಸಾಹಿಸುವ ವೀಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿದೆ.
ಇದನ್ನು ಗಮನಿಸಿದ ಸ್ಟಾರ್ ನಟ ಮತ್ತು ಆತನ ಪತ್ನಿ, ಸಂಗಡಿಗರಿಗೆ ಬ್ಯಾನ್ ಮಾಡುವ ಮೂಲಕ ಬಿಸಿ ಮುಟ್ಟಿಸಿದೆ.
ಅಷ್ಟೇ ಅಲ್ಲ, ಈ ದೃಶ್ಯವನ್ನು ಅಪ್‌ಲೋಡ್ ಮಾಡಿದ ಬಳಿಕ ಗಳಿಸಿದ 54 ಕೋಟಿ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದೆ.