-->
ಇ-ಖಾತಾ 30 ದಿನದಲ್ಲಿ ನೀಡಬೇಕು: ಪೌರಾಡಳಿತ ಅಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್‌ ತಾಕೀತು

ಇ-ಖಾತಾ 30 ದಿನದಲ್ಲಿ ನೀಡಬೇಕು: ಪೌರಾಡಳಿತ ಅಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್‌ ತಾಕೀತು

ಇ-ಖಾತಾ 30 ದಿನದಲ್ಲಿ ನೀಡಬೇಕು: ಪೌರಾಡಳಿತ ಅಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್‌ ತಾಕೀತು






ಅರ್ಜಿ ಸಲ್ಲಿಸಿದ 30 ದಿನದಲ್ಲಿ ಇ-ಖಾತಾ ನೀಡಬೇಕು. ಇಲ್ಲದಿದ್ದರೆ ಕಾರಣ ಸಹಿತ ವಿವರಣೆಯನ್ನು ವೆಬ್‌ಸೈಟಿನಲ್ಲಿ ಪ್ರಕಟಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ತಾಕೀತು ಮಾಡಿದೆ.



ಕರ್ನಾಟಕ ಹೈಕೋರ್ಟ್‌ನ ನ್ಯಾ. ಸೂರಜ್ ಗೋವಿಂದ ರಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.



ಇ-ಸುಗಮ ನಿಯಮಗಳ ಪ್ರಕಾರ ಇ-ಖಾತೆ ಕೋರಿ ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ನೀಡಬೇಕು. ಕೈಬರಹದ ಖಾತೆ(ಈ ಹಿಂದೆ ಚಾಲ್ತಿಯಲ್ಲಿ ಇದ್ದ ಆಸ್ತಿಯ ದಾಖಲೆ) ನೀಡಿ ಇ-ಖಾತೆಗಾಗಿ ಅರ್ಜಿ ಸಲ್ಲಿಸಿದ ಅಲ್ಪ ಅವಧಿಯಲ್ಲೇ ಇ-ಖಾತೆಯನ್ನು ನೀಡಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಸೂಚಿಸಿದೆ.



ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಅರ್ಜಿಯ ಪರಿಗಣನೆ, ಮುಂದುವರಿಕೆ, ವಿಲೇವಾರಿಗೆ ಸೂಕ್ತ ವಿಧಾನವನ್ನು ಅಭಿವೃದ್ದಿಪಡಿಸಿ ಅದನ್ನು ಜಾರಿಗೊಳಿಸಬೇಕು ಎಂದು ಇ-ಆಡಳಿತ ಇಲಾಖೆಯ ಕಾರ್ಯದರ್ಶಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ನ್ಯಾಯಪೀಠ ನಿರ್ದೇಶನ ನೀಡಿದೆ.



ಪ್ರಕರಣದ ವಿವರ:

ಪ್ರಕರಣ: ರೇಣುಕಾ ಮಂಗ್ನಾನಿ Vs ಕರ್ನಾಟಕ ಸರ್ಕಾರ

ಕರ್ನಾಟಕ ಹೈಕೋರ್ಟ್, WP 4821/2023 Dated 02-03-2023




Ads on article

Advertise in articles 1

advertising articles 2

Advertise under the article