-->
ಕೈದಿಗಳ ಸಾವು: ಕರ್ತವ್ಯ ಲೋಪಕ್ಕೆ ಜೈಲಾಧಿಕಾರಿಗೆ ಶಿಕ್ಷೆ- ನ್ಯಾಯಮಂಡಳಿ ತೀರ್ಪು ಎತ್ತಿ ಹಿಡಿದ ಹೈಕೋರ್ಟ್

ಕೈದಿಗಳ ಸಾವು: ಕರ್ತವ್ಯ ಲೋಪಕ್ಕೆ ಜೈಲಾಧಿಕಾರಿಗೆ ಶಿಕ್ಷೆ- ನ್ಯಾಯಮಂಡಳಿ ತೀರ್ಪು ಎತ್ತಿ ಹಿಡಿದ ಹೈಕೋರ್ಟ್

ಕೈದಿಗಳ ಸಾವು: ಕರ್ತವ್ಯ ಲೋಪಕ್ಕೆ ಜೈಲಾಧಿಕಾರಿಗೆ ಶಿಕ್ಷೆ- ನ್ಯಾಯಮಂಡಳಿ ತೀರ್ಪು ಎತ್ತಿ ಹಿಡಿದ ಹೈಕೋರ್ಟ್





ಕರ್ತವ್ಯ ಲೋಪದಿಂದ ಇಬ್ಬರು ಖೈದಿಗಳ ಸಾವಿಗೆ ಕಾರಣನಾಗಿದ್ದ ವಾರ್ಡನ್‌ಗೆ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.



ಕೈದಿಗಳು ಕಾರಾಗೃಹಕ್ಕೆ ಮಾರಕಾಸ್ತ್ರಗಳನ್ನು ತಂದು ಇಬ್ಬರು ಸಹ ಕೈದಿಗಳನ್ನು ಕೊಲೆ ಮಾಡಿದ್ದರು. ಇದಕ್ಕೆ ಜೈಲು ಅಧಿಕಾರಿಗಳ ಕರ್ತವ್ಯ ಲೋಪ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆದು ಕರ್ತವ್ಯ ಲೋಪ ಎಸಗಿದ್ದ ಕಾರಾಗೃಹದ ವಾರ್ಡರ್ ಗೆ ವೇತನ ಹೆಚ್ಚಳ (ಇನ್ಕ್ರಿಮೆಂಟ್) ಕಡಿತಗೊಳಿಸಲಾಗಿತ್ತು.



ಸರ್ಕಾರ ನೀಡಿರುವ ಈ ಶಿಕ್ಷೆಯನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದು, ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಪೀಠ ಅರ್ಜಿಯನ್ನು ತಿರಸ್ಕರಿಸಿದ್ದು, ಅಧಿಕಾರಿಯ ಶಿಕ್ಷೆಯನ್ನು ಎತ್ತಿ ಹಿಡಿದಿದೆ.


ಘಟನೆಯ ವಿವರ:

ಕೋಲಾರ ಜಿಲ್ಲಾ ಕಾರಾಗೃಹದ ಮುಖ್ಯ ವಾರ್ಡರ್ ಆಗಿರುವ ಜಿ.ಬಿ.ಮುಲ್ಕಿ ಪಾಟೀಲ್ ಕರ್ತವ್ಯ ಲೋಪದ ಅಡಿಯಲ್ಲಿ ಇಂಕ್ರಿಮೆಂಟ್ ಕಡಿತಗೊಳಿಸಿ ಆದೇಶಿಸಿದ್ದ ಸರ್ಕಾರದ ಆದೇಶ ಪ್ರಶ್ನಿಸಿ ಕೆಎಟಿ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಸರ್ಕಾರದ ಆದೇಶವನ್ನು ಪುರಸ್ಕರಿಸಿತ್ತು.



ಈ ಹಿನ್ನೆಲೆಯಲ್ಲಿ ಪಾಟೀಲ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ಪೀಠ, ಅರ್ಜಿದಾರರ ಮನವಿಯನ್ನು ವಜಾಗೊಳಿಸಿದೆ. ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಕೆಎಟಿ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆದೇಶ ನೀಡಿದೆ.



ಈ ಆದೇಶದಲ್ಲಿ ಯಾವುದೇ ಉಲ್ಲಂಘನೆಯಾಗಿರುವ ಅಂಶ ಕಾಣಿಸುತ್ತಿಲ್ಲ. ಹೀಗಾಗಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದಿದೆ.


ಘಟನೆಯ ಸಂದರ್ಭದಲ್ಲಿ ಜೈಲಾಧಿಕಾರಿ ಪಾಟೀಲ್ ಬೆಂಗಳೂರು ಕೇಂದ್ರ ಕಾರಾಗೃಹದ ವಾರ್ಡನ್ ಆಗಿದ್ದರು. ಆಗ ಜೈಲಿನಲ್ಲಿ ಕೈದಿಗಳು ಮೊಬೈಲ್ ಫೋನ್ ಬಳಸುತ್ತಿದ್ದು, ಸಹಚರರ ಮೂಲಕ ಹೊರಗಿನಿಂದ ಮಾರಕಾಸ್ತ್ರಗಳನ್ನು ಪಡೆದಿದ್ದರು. ಬಳಿಕ ಪರಸ್ಪರ ದ್ವೇಷ ಹೊಂದಿದ್ದ ಇಬ್ಬರು ಸಹ ಕೈದಿಗಳನ್ನು ಕೊಲೆ ಮಾಡಿದ್ದರು.



ಈ ಸಂಬಂಧ ಇಲಾಖಾ ತನಿಖೆ ನಡೆಸಿದ್ದ ಅಧಿಕಾರಿಗಳು, ಕೈದಿಗಳು ಮೊಬೈಲ್ ಫೋನ್ ಮತ್ತು ಮಾರಕಾಸ್ತ್ರಗಳನ್ನು ಹೊಂದಲು, ಜೈಲಾಧಿಕಾರಿಯ ನಿರ್ಲಕ್ಷ್ಯವೇ ಕಾರಣ ಎಂದು ವರದಿ ನೀಡಿದ್ದರು. ಈ ವರದಿ ಆಧಾರದಲ್ಲಿ ಸರ್ಕಾರ ಅರ್ಜಿದಾರರಿಗೆ ಒಂದು ವರ್ಷದ ಇಂಕ್ರಿಮೆಟ್ ಕಡಿತಗೊಳಿಸಿ ಆದೇಶಿಸಿತ್ತು.




Ads on article

Advertise in articles 1

advertising articles 2

Advertise under the article