ವಕೀಲರಿಗೆ ಸಿವಿಲ್ ನ್ಯಾಯಾಧೀಶರಾಗುವ ಅವಕಾಶ: ಇಲ್ಲಿದೆ ಉಪಯುಕ್ತ ಮಾಹಿತಿ
ವಕೀಲರಿಗೆ ಸಿವಿಲ್ ನ್ಯಾಯಾಧೀಶರಾಗುವ ಅವಕಾಶ: ಇಲ್ಲಿದೆ ಉಪಯುಕ್ತ ಮಾಹಿತಿ
ವಕೀಲರಿಗೆ ಸಿವಿಲ್ ನ್ಯಾಯಾಧೀಶರಾಗುವ ಅವಕಾಶ ಇದೀಗ ಲಭ್ಯವಾಗಿದೆ. ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 57 ಸಿವಿಲ್ ನ್ಯಾಯಾಧೀಶರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಹೈಕೋರ್ಟ್ ನೇಮಕಾತಿ ವಿಭಾಗದಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಎಪ್ರಿಲ್ 10, 2023ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಹ ಅಭ್ಯರ್ಥಿಗಳು ಹೈಕೋರ್ಟ್ ಪ್ರಕಟಿಸಿರುವ ಅಧಿಸೂಚನೆಯನ್ನು ಪಡೆದುಕೊಂಡು ಸೂಕ್ತ ಅರ್ಜಿ ಶುಲ್ಕ ಪಾವತಿಸಿ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಯು ಎಲ್‌ಎಲ್‌ಬಿ ಪದವಿ ಕಡ್ಡಾಯವಾಗಿ ಹೊಂದಿರಬೇಕು ಮತ್ತು ವಕೀಲರಾಗಿ ನೋಂದಣಿ ಮಾಡಿರಬೇಕು. ವಯೋಮಿತಿ 35 ವರ್ಷ ದಾಟಿರಬಾರದು. ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಹುದ್ದೆಗಳಿಗೆ ಲಿಖಿತ ಮತ್ತು ಮೌಖಿಕವಾಗಿ ಪರೀಕ್ಷೆ ನಡೆಯಲಿದೆ. ಒಟ್ಟು ಅಂಕಗಳ ಆಧಾರದಲ್ಲಿ ಈ ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ. ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಲು ವಕೀಲ ಸಮುದಾಯಕ್ಕೆ ಇದೊಂದು ಸುಸಂದರ್ಭವಾಗಿದೆ.
ಹೆಚ್ಚಿನ ಮಾಹಿತಿಗೆ ಈ ಲಿಂಕ್ ಬಳಸಿ:
ಕರ್ನಾಟಕ ಹೈಕೋರ್ಟ್‌ನಿಂದ 57 ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಆಹ್ವಾನ