ಕಾನೂನು ಸಚಿವರಿಗೆ ಕಾನೂನು ಪಾಠ ಕಲಿಸಿದ ವಕೀಲರು: ಕಿರೆನ್ ಹೇಳಿಕೆಯಲ್ಲಿ ಅಂಥದ್ದೇನಿತ್ತು..?
ಕಾನೂನು ಸಚಿವರಿಗೆ ಕಾನೂನು ಪಾಠ ಕಲಿಸಿದ ವಕೀಲರು: ಕಿರೆನ್ ಹೇಳಿಕೆಯಲ್ಲಿ ಅಂಥದ್ದೇನಿತ್ತು..?
# ಹಾಲಿ ಸರ್ಕಾರವು ದೇಶವಲ್ಲ; ದೇಶವು ಸರ್ಕಾರವಲ್ಲ
# ಕೇಂದ್ರವನ್ನು ಟೀಕಿಸಿದ ಮಾತ್ರಕ್ಕೆ ದೇಶ ವಿರೋಧಿಯಾಗಲ್ಲ
# ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜುಗೆ ವಕೀಲರ ಬುದ್ದಿವಾದ
# ಕಾನೂನು ಸಚಿವರಿಗೆ ಕಾನೂನು ಪಾಠ ಕಲಿಸಿದ ವಕೀಲರ ಸಮುದಾಯ
ನಿವೃತ್ತ ನ್ಯಾಯಮೂರ್ತಿಗಳ ವಿರುದ್ಧ ಹೇಳಿಕೆ ನೀಡಿದ್ದ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರಿಗೆ 62 ಹಿರಿಯ ವಕೀಲರೂ ಸೇರಿದಂತೆ 300ಕ್ಕೂ ಅಧಿಕ ವಕೀಲರು ಮೂಲಭೂತ ಕಾನೂನಿನ ಪಾಠ ಮಾಡಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಕೀಲರ ಸಮುದಾಯ, ಕೇಂದ್ರ ಕಾನೂನು ಸಚಿವರ ಹೇಳಿಕೆಯನ್ನು ಖಂಡಿಸಿ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಕಿರೆನ್ ರಿಜಿಜು ಹೇಳಿದ ಮಾತೇನು..?
ಕೆಲವು ನಿವೃತ್ತ ನ್ಯಾಯಾಧೀಶರು ರಾಜಕೀಯ ಪಕ್ಷಗಳ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಅವರು ಭಾರತ ವಿರೋಧಿ ಗ್ಯಾಂಗ್‌ನ ಭಾಗವಾಗಿದ್ದು, ಪ್ರತಿಪಕ್ಷಗಳಂತೆ ನ್ಯಾಯಾಂಗವನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಜನ ಕಾರ್ಯಾಂಗವನ್ನು ಹೇಗೆ ನಿಯಂತ್ರಿಸಬೇಕು ಎಂದು ಹೇಗೆ ಹೇಳಬಲ್ಲರು..? ಯಾರು ದೇಶದ ವಿರುದ್ಧ ತಿರುಗಿಬೀಳುತ್ತಾರೋ ಅವರು ಬೆಲೆ ತೆರಬೇಕಾಗುತ್ತದೆ ಎಂದು ಕಿರೆನ್ ಸುದ್ದಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು.
ಕಾನೂನು ಸಚಿವ ಕಿರೆನ್ ಹೇಳಿಕೆಯನ್ನು ನಾವು ಖಡಾಖಂಡಿತವಾಗಿ ವಿರೋಧಿಸುತ್ತೇವೆ. ಇದು ಬೆದರಿಕೆಯ ಸ್ವರೂಪದಿಂದ ಕೂಡಿದ ಹೇಳಕೆಯಾಗಿದೆ ಮತ್ತು ಕಾನೂನು ಸಚಿವರ ಸ್ಥಾನಕ್ಕೆ ತಕ್ಕುದಾದ ಹೇಳಿಕೆಯಲ್ಲ ಎಂದು ವಕೀಲರು ಕಾನೂನು ಸಚಿವರಿಗೆ ಉಪದೇಶ ನೀಡಿದ್ದಾರೆ.
ಸರ್ಕಾರವನ್ನು ಟೀಕಿಸುವುದು ದೇಶ ವಿರೋಧಿಯಾಗುವುದಿಲ್ಲ ಮತ್ತು ಕೇಂದ್ರದ ಕ್ರಮವನ್ನು ಟೀಕಿಸಿದ ಮಾತ್ರಕ್ಕೆ ರಾಷ್ಟ್ರ ಪ್ರೇಮಕ್ಕೆ ವಿರುದ್ಧವಾಗಲೀ, ಭಾರತ ವಿರೋಧಿಯಾಗಲೀ ಆಗುವುದಿಲ್ಲ ಎಂಬುದನ್ನು ಕೇಂದ್ರ ಕಾನೂನು ಸಚಿವರಿಗೆ ವಕೀಲರು ಬುದ್ದಿವಾದ ಹೇಳಿದ್ದಾರೆ.
,