-->
ನೈಜ ವಯಸ್ಸನ್ನು ಮರೆಮಾಚಿದ ಪತ್ನಿ: ವಿವಾಹ ಅಸಿಂಧು ಎಂದು ಮದುವೆ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌

ನೈಜ ವಯಸ್ಸನ್ನು ಮರೆಮಾಚಿದ ಪತ್ನಿ: ವಿವಾಹ ಅಸಿಂಧು ಎಂದು ಮದುವೆ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌

ನೈಜ ವಯಸ್ಸನ್ನು ಮರೆಮಾಚಿದ ಪತ್ನಿ: ವಿವಾಹ ಅಸಿಂಧು ಎಂದು ಮದುವೆ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌

ವಧು ಮತ್ತು ಆಕೆಯ ಕುಟುಂಬ ಸದಸ್ಯರು ಮದುವೆ ಸಂದರ್ಭದಲ್ಲಿ ವಧುವಿನ ನೈಜ ವಯಸ್ಸನ್ನು ಮರೆಮಾಚಿದ್ದಾರೆ ಎಂಬ ಕಾರಣಕ್ಕೆ ವಿವಾಹ ಅಸಿಂಧು ಎಂದು ಕರ್ನಾಟಕ ಹೈಕೋರ್ಟ್ ಘೋಷಿಸಿದೆ.ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾ. ವಿಜಯಕುಮಾರ್ ಪಾಟೀಲ್ ನೇತೃತ್ವದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.ಭಾರತೀಯ ವಿಚ್ಚೇದನ ಕಾಯ್ದೆ ಸೆಕ್ಷನ್ 18ರ ಅನ್ವಯ ಪತಿ ಶಿವಮೊಗ್ಗದ ಕೌಟುಂಬಿಕ ನ್ಯಾಯಾಲಯ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರ ಪತಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.ಸದ್ರಿ ಪ್ರಕರಣದಲ್ಲಿ ಪ್ರತಿವಾದಿ ಪತ್ನಿಗೆ 41 ವರ್ಷ ವಯಸ್ಸಾಗಿದ್ದರೂ ತನ್ನನ್ನು 36 ವರ್ಷ ವಯಸ್ಸಿನವರು ಎಂದು ಬಿಂಬಿಸಿದ್ದರು. ಅಲ್ಲದೆ, ವಾಸಿಯಾಗದ ಖಾಯಿಲೆಯಿಂದ ಅವರು ಬಳಲುತ್ತಿದ್ದರು. ಈ ಖಾಯಿಲೆ ಅವರಿಗೆ ಸುದೀರ್ಘ ಸಮಯದಿಂದ ಇತ್ತು. ಈ ಎಲ್ಲ ಮಾಹಿತಿಯನ್ನು ಮರೆಮಾಚಿ ಪ್ರಕರಣದ ಅರ್ಜಿದಾರರಾದ ಪತಿಯ ಸಮ್ಮತಿಯನ್ನು ಪಡೆದುಕೊಂಡಿದ್ದರು.ಮದುವೆಯ ಪ್ರಸ್ತಾಪವನ್ನು ತಂದಿದ್ದ ವಧುವಿನ ಸಹೋದರ ಆಕೆಯ ವಯಸ್ಸನ್ನು 36 ಎಂದು ಹೇಳಿದ್ದ. ಈ ಮಾಹಿತಿಯನ್ನು ನಂಬಿದ ವರ ಮದುವೆಗೆ ಸಮ್ಮತಿ ನೀಡಿದ್ದರು. ತಪ್ಪು ಮಾಹಿತಿಯಿಂದ ಮದುವೆಗೆ ಸಮ್ಮತಿ ಪಡೆಯಲಾಗಿದೆ ಎಂಬ ಅಂಶವನ್ನು ಗಮನಿಸಿದ ಹೈಕೋರ್ಟ್, ಶಿವಮೊಗ್ಗ ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಬದಿಗಿರಿ ಈ ವಿವಾಹವನ್ನು ಅಸಿಂಧು ಎಂದು ಘೋಷಿಸಿದೆ.


ಪ್ರಕರಣ: ABC Vs XYZ (MFA 5183/2016) ಕರ್ನಾಟಕ ಹೈಕೋರ್ಟ್, ದಿನಾಂಕ 1-03-2023

Ads on article

Advertise in articles 1

advertising articles 2

Advertise under the article