ಚುನಾವಣಾ ಆಯೋಗದ ಮೇಲೆ ಕೇಂದ್ರದ ಪ್ರಭಾವಕ್ಕೆ ಬ್ರೇಕ್...?: ಸುಪ್ರೀಂ ಕೋರ್ಟ್ ಸಂವಿಧಾನಿಕ ನ್ಯಾಯಪೀಠದ ಮಹತ್ವದ ನಿರ್ದೇಶನ ಏನು..?
ಚುನಾವಣಾ ಆಯೋಗದ ಮೇಲೆ ಕೇಂದ್ರದ ಪ್ರಭಾವಕ್ಕೆ ಬ್ರೇಕ್...?: ಸುಪ್ರೀಂ ಕೋರ್ಟ್ ಸಂವಿಧಾನಿಕ ನ್ಯಾಯಪೀಠದ ಮಹತ್ವದ ನಿರ್ದೇಶನ ಏನು..?
ಮಹತ್ವದ ನಿರ್ಧಾರವೊಂದಲ್ಲಿ ಚುನಾವಣಾ ಆಯೋಗದ ನೇಮಕಾತಿ ಪ್ರಕ್ರಿಯೆ ಮೇಲೆ ಕೇಂದ್ರದಲ್ಲಿ ಆಡಳಿತಾರೂಢ ಪಕ್ಷದ ಪ್ರಭಾವವನ್ನು ತಗ್ಗಿಸುವ ನಿಟ್ಟಿನಲ್ಲಿ ನೇಮಕಾತಿ ಸಲಹಾ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರು ಅಥವಾ ಅತಿದೊಡ್ಡ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿರುವ ಸಲಹಾ ಸಮಿತಿಯನ್ನು ರಚಿಸಬೇಕು ಮತ್ತು ಆ ಸಲಹಾ ಸಮಿತಿಯ ಸಲಹೆ ಮೇರೆಗೆ ಭಾರತದ ಚುನಾವಣಾ ಆಯೋಗದ ಸದಸ್ಯರ ನೇಮಕಾತಿ ನಡೆಯಬೇಕು ಎಂದು ಸುಪ್ರೀಂ ಬಯಸಿದೆ.
ಈ ನೇಮಕಾತಿ ಪ್ರಕ್ರಿಯೆ ಕುರಿತಂತೆ ಕೇಂದ್ರ ಸರ್ಕಾರ ಸೂಕ್ತ ಕಾನೂನು ರಚಿಸುವ ವರೆಗೆ ಈ ಪದ್ಧತಿಯನ್ನು ಜಾರಿಗೆ ತರುವಂತೆ ನ್ಯಾ. ಕೆ.ಎಂ. ಜೋಸೆಫ್, ಅಜೋಯ್ ರಸ್ತೋಗಿ, ಆನಿರುದ್ಧ್ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ. ಟಿ. ರವಿ ಕುಮಾರ್ ಅವರ ಸಂವಿಧಾನಿಕ ಪೀಠ ಹೇಳಿದೆ.
ಸಂವಿಧಾನದ ವಿಧಿ 324(2) ನ್ನು ಉಲ್ಲಂಘಿಸಿ ಕಾರ್ಯಾಂಗವು ಚುನಾವಣಾ ಆಯೋಗದ ನೇಮಕಾತಿ ಮಾಡುವ ಅಧಿಕಾರವನ್ನು ಅನುಭವಿಸುತ್ತಿದೆ ಎಂಬ ಆಧಾರದಲ್ಲಿ ಸುಪ್ರೀಂ ನ್ಯಾಯಪೀಠ ಈ ಮಹತ್ವದ ನಿರ್ಧಾರ ಕೈಗೊಂಡಿದೆ.