-->
ಅವಮಾನ ಮಾಡುವ ಉದ್ದೇಶವಿಲ್ಲದೆ ಕೇವಲ ಜಾತಿ ಹೆಸರಿಸುವುದು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್

ಅವಮಾನ ಮಾಡುವ ಉದ್ದೇಶವಿಲ್ಲದೆ ಕೇವಲ ಜಾತಿ ಹೆಸರಿಸುವುದು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್

ಅವಮಾನ ಮಾಡುವ ಉದ್ದೇಶವಿಲ್ಲದೆ ಕೇವಲ ಜಾತಿ ಹೆಸರಿಸುವುದು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್


  ಯಾವುದೇ ವ್ಯಕ್ತಿಯನ್ನು ಅಪಮಾನ ಮಾಡಬೇಕು ಎಂಬ ಉದ್ದೇಶವಿಲ್ಲದೆ ಅವರ ಜಾತಿಯ ಹೆಸರಿಸುವುದು ಎಸ್‌ಎಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ 1989ರ ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.ವಿ. ಶೈಲೇಶ್ ಕುಮಾರ್ ಎಂಬವರು ತಮ್ಮ ವಿರುದ್ಧ ದಾಖಲಾದ ದೂರನ್ನು ರದ್ದುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.ಕಾಯ್ದೆಯ ಸೆಕ್ಷನ್ ಸೆಕ್ಷನ್ 3 (1) (ಆರ್) ಮತ್ತು (ಎಸ್) ಅಡಿಯಲ್ಲಿ ಅವರ ವಿರುದ್ಧ ಹೊರಿಸಲಾದ ಆರೋಪಗಳನ್ನು ರದ್ದುಗೊಳಿಸಿತು. ಆದರೆ, ಅವರ ವಿರುದ್ಧ ಹೊರಿಸಲಾದ ಹಲ್ಲೆ ಮತ್ತು ಅಪರಾಧಿಕ ಬೆದರಿಕೆ ಮುಂತಾದ ಇತರ ಆರೋಪಗಳ ಬಗ್ಗೆ ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಅನುಮತಿ ನೀಡಿತು.


ಆನೇಕಲ್ ತಾಲೂಕಿನ ಜಯಮ್ಮ ಎಂಬವರು ಸೂರ್ಯನಗರ ಪೊಲೀಸ್ ಠಾಣೆಗೆ ನೀಡಿದ್ದ ದೂರಿನಲ್ಲಿ ಶೈಲೇಶ್ ವಿರುದ್ಧ ಈ ಆರೋಪ ಮಾಡಿದ್ದರು. ಈ ದೂರಿಗೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯ ಅಪರಾಧದ ಸಂಜ್ಞೇಯತೆ ತೆಗೆದುಕೊಂಡಿತ್ತು. ಈ ಸಂಜ್ಞೇಯತೆಯ ಆದೇಶವನ್ನು ಪ್ರಶ್ನಿಸಿ ಆರೋಪಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.


ಪ್ರಕರಣ: ಶೈಲೇಶ್ ಕುಮಾರ್ Vs ಕರ್ನಾಟಕ ಸರ್ಕಾರ

ಕರ್ನಾಟಕ ಹೈಕೋರ್ಟ್, Dated 17-01-2023Ads on article

Advertise in articles 1

advertising articles 2

Advertise under the article