22 ವರ್ಷಗಳ ಸರ್ಕಾರಿ ಸೇವೆ ನಂತರ ಜನ್ಮ ದಿನಾಂಕ ಬದಲಾವಣೆ ತಿದ್ದುಪಡಿ ಮಾಡಲಾಗದು: ಬಾಂಬೆ ಹೈಕೋರ್ಟ್
Monday, April 24, 2023
22 ವರ್ಷಗಳ ಸರ್ಕಾರಿ ಸೇವೆ ನಂತರ ಜನ್ಮ ದಿನಾಂಕ ಬದಲಾವಣೆ ತಿದ್ದುಪಡಿ ಮಾಡಲಾಗದು: ಬಾಂಬೆ ಹೈಕೋರ್ಟ್
22 ವರ್ಷಗಳ ಕಾಲ ಸರ್ಕಾರಿ ಸೇವೆ ಮಾಡಿದ ನಂತರ ತಮ್ಮ ಜನ್ಮ ದಿನಾಂಕ ಬದಲಾವಣೆ ತಿದ್ದುಪಡಿ ಮಾಡುವಂತೆ ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋದ ಅರ್ಜಿದಾರರ ಅರ್ಜಿಯನ್ನು ತಿರಸ್ಕರಿಸಲಾಗಿದೆ.
ಸುದೀರ್ಘ ಅವಧಿ ಬಳಿಕ ಜನ್ಮ ದಿನದಲ್ಲಿ ತಿದ್ದುಪಡಿ ಮಾಡಲಾಗದು ಎಂದು ಬಾಂಬೈ ಹೈಕೋರ್ಟ್ ತೀರ್ಪು ನೀಡಿದೆ.
ಸೇವೆಗೆ ಸೇರ್ಪಡೆಗೊಂಡ ಐದು ವರ್ಷದೊಳಗೆ ಅರ್ಜಿದಾರರು ತಮ್ಮ ಜನ್ಮ ದಿನಾಂಕ ತಿದ್ದುಪಡಿ ಕೋರಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ, 22 ವರ್ಷಗಳ ಸೇವಾವಧಿ ಪೂರೈಸಿದ ಬಳಿಕ ತಿದ್ದುಪಡಿ ಮಾಡಲಾಗದು ಎಂದು ಎದುರುದಾರ ವಕೀಲರು ವಾದ ಮಂಡಿಸಿದರು.
ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿದಾರರ ಜನ್ಮ ದಿನ ತಿದ್ದುಪಡಿಗೆ ಆದೇಶ ನೀಡಲು ನಿರಾಕರಿಸಿತು.
ಪ್ರಕರಣ: ರಾಮದಾಸ್ ಮಹಾದೇವ್ ಖೇಡ್ಕರ್ Vs ಮಹಾರಾಷ್ಟ್ರ ಸರ್ಕಾರ
ಬಾಂಬೆ ಹೈಕೋರ್ಟ್ WP 8670/2021 Dated 5-04-2023