ಬಜಾಜ್ ಅಲಯನ್ಸ್, ICICI ಪ್ರುಡೆನ್ಸಿಯಲ್‌ಗೆ ನೋಟೀಸ್ ನೀಡಿದ ಕೇಂದ್ರ ಸರ್ಕಾರ
ಬಜಾಜ್ ಅಲಯನ್ಸ್, ICICI ಪ್ರುಡೆನ್ಸಿಯಲ್‌ಗೆ ನೋಟೀಸ್ ನೀಡಿದ ಕೇಂದ್ರ ಸರ್ಕಾರ
ಬಜಾಜ್ ಅಲಯನ್ಸ್, ICICI ಪ್ರುಡೆನ್ಸಿಯಲ್ ಲೈಫ್ ಇನ್ಶೂರೆನ್ಸ್‌ಗೆ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ನೋಟೀಸ್ ಜಾರಿಗೊಳಿಸಿದೆ.
ಈ ಎರಡು ಕಂಪೆನಿಗಳು ಬೃಹತ್ ಪ್ರಮಾಣದ ತೆರಿಗೆ ವಂಚಿಸಿದೆ ಎಂದು ಆರೋಪಿಸಲಾಗಿದ್ದು, ಸುಮಾರು 5000 ಕೋಟಿ ರೂ. ಮೌಲ್ಯದ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಈ ನೋಟೀಸ್ ಜಾರಿಗೊಳಿಸಲಾಗಿದೆ.
ಅಂದಾಜು 5000 ಕೋಟಿ ರೂ. ಮೌಲ್ಯದ ತೆರಿಗೆ ಪಾವತಿಗೆ ಸಂಬಂಧಿಸಿದಂತೆ 16 ವಿಮಾ ಕಂಪೆನಿಗಳ ವಿರುದ್ಧ ತನಿಖೆ ನಡೆಸಲಾಗಿದ್ದು, ಇದರ ಭಾಗವಾಗಿ ಈ ನೋಟೀಸ್ ಜಾರಿಗೊಳಿಸಲಾಗಿದೆ.
2022ರ ಸೆಪ್ಟೆಂಬರ್‌ನಲ್ಲಿ ತನಿಖೆ ಆರಂಭವಾಗಿದ್ದು, ಕಾನೂರು ಜಾರಿ ಸಂಸ್ಥೆಗಳು ನಿಗದಿಪಡಿಸಿರುವ ಮಟ್ಟಕ್ಕಿಂತ ಹೆಚ್ಚಿನ ಮಾರಾಟ ಕಮಿಷನ್‌ನ್ನು ಕಂಪೆನಿಗಳು ತಮ್ಮ ಜಾಹೀರಾತು ಮತ್ತು ಮಾರಾಟ ವೆಚ್ಚ ಎಂದು ತೋರಿಸಿ ತೆರಿಗೆ ವಿನಾಯಿತಿ ಪಡೆದುಕೊಂಡಿತ್ತು ಎಂದು ಹೇಳಲಾಗಿದೆ.
ಸರಕು ಮತ್ತು ಸೇವಾ ತೆರಿಗೆ ಗುಪ್ತದಳದ ಮಹಾನಿರ್ದೇಶನಾಲಯದ ಮೂಲಕ ಈ ನೋಟೀಸ್ ಜಾರಿಗೊಳಿಸಲಾಗಿದೆ.
.