ಇನ್ಮುಂದೆ "ಡೆತ್ ಸರ್ಟಿಫಿಕೇಟ್"ಗಾಗಿ ಈ ಕಾಲಂ ಭರ್ತಿ ಮಾಡುವುದು ಕಡ್ಡಾಯ ...!
Thursday, April 13, 2023
ಇನ್ಮುಂದೆ "ಡೆತ್ ಸರ್ಟಿಫಿಕೇಟ್"ಗಾಗಿ ಈ ಕಾಲಂ ಭರ್ತಿ ಮಾಡುವುದು ಕಡ್ಡಾಯ ...!
ಇನ್ನು ಮುಂದೆ ಮರಣ ಪ್ರಮಾಣ ಪತ್ರ (ಡೆತ್ ಸರ್ಟಿಫಿಕೇಟ್)ಕ್ಕಾಗಿ ಈ ಒಂದು ಕಾಲಂ ಖಾಲಿ ಬಿಡುವ ಹಾಗಿಲ್ಲ. ಈ ಕಾಲಂ ಕಡ್ಡಾಯವಾಗಿ ಭರ್ತಿ ಮಾಡಲೇಬೇಕು. ಅದನ್ನು ಭರ್ತಿ ಮಾಡಿದರೆ ಮಾತ್ರ ಡೆತ್ ಸರ್ಟಿಫಿಕೇಟ್ ಪರಿಪೂರ್ಣವಾಗಲಿದೆ.
ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಮರಣ ಕಾರಣವನ್ನು ಕಡ್ಡಾಯವಾಗಿ ಭರ್ತಿ ಮಾಡುವಂತೆ ಆರೋಗ್ಯ ಇಲಾಖೆ ಮತ್ತು ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಯವರು ಜಂಟಿ ಸುತ್ತೋಲೆ ಹೊರಡಿಸಿದ್ದಾರೆ.
ತಾವು ಉಪಚರಿಸಿದ ವ್ಯಕ್ತಿ ಸಾವನ್ನಪ್ಪಿದರೆ ಅದರ ಕಾರಣವನ್ನು ವೈದ್ಯಕೀಯ ಪ್ರಮಾಣ ಪತ್ರದಲ್ಲಿ ನಮೂದಿಸಬೇಕು. ಮರಣ ಕಾರಣ ಸಂಗ್ರಹಣ, ವಿಶ್ಲೇಷಣೆಯು ಸರ್ಕಾರಿ ಮತ್ತು ಆರೋಗ್ಯ ಸಂಶೋಧಕರಿಗೆ ಹಾಗೂ ನೀತಿ ನಿರೂಪಕರಿಗೆ ವಿವಿಧ ನಿರ್ಧಾರ ಮತ್ತು ಕ್ರಮಗಳನ್ನು ಕೈಗೊಳ್ಳಲು ಅಗತ್ಯವಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.