ಸರ್ಕಾರಿ ನೌಕರರಿಗೆ ಇನ್ನೊಂದು ಭರ್ಜರಿ ಗಿಫ್ಟ್!- ಜುಲೈನಿಂದ ಮತ್ತೊಂದು ಭತ್ಯೆಯಲ್ಲಿ ಏರಿಕೆ
Thursday, April 13, 2023
ಸರ್ಕಾರಿ ನೌಕರರಿಗೆ ಇನ್ನೊಂದು ಭರ್ಜರಿ ಗಿಫ್ಟ್!- ಜುಲೈನಿಂದ ಮತ್ತೊಂದು ಭತ್ಯೆಯಲ್ಲಿ ಏರಿಕೆ
ಕೇಂದ್ರ ಸರ್ಕಾರಿ ನೌಕರರಿಗೆ ಒಂದು ಭರ್ಜರಿ ಸಂತಸದ ಸುದ್ದಿ. ಜುಲೈ 2023ರಿಂದ ಸರ್ಕಾರಿ ನೌಕರರ ವೇತನದಲ್ಲಿ ಇನ್ನೊಂದು ಭತ್ಯೆಯಲ್ಲಿ ಗಣನೀಯ ಹೆಚ್ಚಳ ಕಾಣಲಿದೆ.
ತುಟ್ಟಿ ಭತ್ಯೆಯ ಜೊತೆಗೆ ಪ್ರಯಾಣ ಭತ್ಯೆಯಲ್ಲೂ ಗಣನೀಯ ಏರಿಕೆ ಕಂಡುಬರಲಿದೆ. ಜುಲೈ ತಿಂಳಿನಲ್ಲಿ ಏರಿಕೆಯಾಗುವ ಭತ್ಯೆಯನ್ನು ಅಕ್ಟೋಬರ್ ತಿಂಗಳಿನಲ್ಲಿ ನೀಡಲಾಗುವುದು ಎಂದು ಹೇಳಲಾಗಿದೆ.
ಇದರೊಂದಿಗೆ ಜುಲೈ ತಿಂಗಳಿನಿಂದ ಸರ್ಕಾರಿ ನೌಕರರು ಫುಲ್ ಖುಷ್ ಆಗಲಿದ್ದಾರೆ. ಜುಲೈ ತಿಂಗಳಿನಲ್ಲಿ ತುಟ್ಟಿ ಭತ್ಯೆ ಮಾತ್ರವಲ್ಲದೆ, ಪ್ರಯಾಣ ಭತ್ಯೆ ಜಾಸ್ತಿ ಆಗುವುದರಿಂದ ಮತ್ತಷ್ಟು ಯೋಜನೆಗಳೂ ನೌಕರರ ಜೇಬು ತುಂಬಲಿದೆ.
ಡಿಎ ಹೆಚ್ಚಳದ ಜೊತೆಗೆ ಪಿಂಚಣಿ ಪ್ರಯೋಜನಗಳು, ಭವಿಷ್ಯ ನಿಧಿ ಹಾಗೂ ಗ್ರಾಚ್ಯುಟಿಯಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡುಬರಲಿದೆ.
ಈ ಪರಿಸ್ಥಿತಿಯಿಂದಾಗಿ ಈ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಏರಿಕೆಯಾಗುವುದು ಖಚಿತವಾಗಿದೆ.