-->
CrPC Sec 167 (Default Bail): ತನಿಖೆ ಪೂರ್ತಿಗೊಳಿಸದೆ ಚಾರ್ಜ್‌ಶೀಟ್‌, ಆರೋಪಿಯ ಜಾಮೀನು ಹಕ್ಕನ್ನು ಕಸಿಯಲಾಗದು: ಸುಪ್ರೀಂ ಕೋರ್ಟ್‌

CrPC Sec 167 (Default Bail): ತನಿಖೆ ಪೂರ್ತಿಗೊಳಿಸದೆ ಚಾರ್ಜ್‌ಶೀಟ್‌, ಆರೋಪಿಯ ಜಾಮೀನು ಹಕ್ಕನ್ನು ಕಸಿಯಲಾಗದು: ಸುಪ್ರೀಂ ಕೋರ್ಟ್‌

ತನಿಖೆ ಪೂರ್ತಿಗೊಳಿಸದೆ ಚಾರ್ಜ್‌ಶೀಟ್‌, ಆರೋಪಿಯ ಜಾಮೀನು ಹಕ್ಕನ್ನು ಕಸಿಯಲಾಗದು: ಸುಪ್ರೀಂ ಕೋರ್ಟ್‌

ಪೊಲೀಸರು ಸೇರಿದಂತೆ ತನಿಖಾ ಸಂಸ್ಥೆಗಳು ತನಿಖೆ ಮುಗಿಸದೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ (ಅಂತಿಮ ವರದಿ) ಸಲ್ಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.ಆರೋಪಿಗಳಿಗೆ ಡಿಫಾಲ್ಟ್‌ ಬೇಲ್‌ ಸಿಗುತ್ತದೆ ಎಂಬ ಕಾರಣಕ್ಕೆ ಅತ್ಯವಸರವಾಗಿ ತನಿಖೆ ಪೂರ್ಣಗೊಳಿಸದೆ ಚಾರ್ಜ್ ಶೀಟ್ ಸಲ್ಲಿಸಿದರೆ ಅದು ಆರೋಪಿಯ ಡಿಫಾಲ್ಟ್ ಜಾಮೀನು ಪಡೆಯುವ ಹಕ್ಕನ್ನು ಹೊಸಕಿ ಹಾಕಿದಂತಾಗದು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.ಸುಪ್ರೀಂ ಕೋರ್ಟ್‌ನ ನ್ಯಾ. ಕೃಷ್ಣಮುರಾರಿ ಹಾಗೂ ನ್ಯಾ. ಸಿ.ಟಿ. ರವಿಕುಮಾರ್ ಅವರಿದ್ದ ದ್ವಿಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.ಅಪರಾಧ ಪ್ರಕ್ರಿಯಾ ಸಂಹಿತೆಯ ಕಲಂ 167ರ ಪ್ರಕಾರ ಡಿಫಾಲ್ಟ್ ಬೇಲ್ ಆರೋಪಿಯ ಹಕ್ಕು. ಇದನ್ನು ತಪ್ಪಿಸಲು ತನಿಖಾ ಸಂಸ್ಥೆಗಳು ತಮ್ಮ ಕರ್ತವ್ಯದಿಂದ ವಿಮುಖರಾಗುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.ಡಿಫಾಲ್ಟ್ ಬೇಲ್ ಕೇವಲ ಕಾನೂನು ಹಕ್ಕಲ್ಲ, ಬದಲಾಗಿ ಅದು ಆರೋಪಿಗೆ ದೊರೆಯುವ ಸಂವಿಧಾನಿಕ ಹಕ್ಕು ಎಂದು ಬಲವಾಗಿ ಪ್ರತಿಪಾದಿಸಿದ ನ್ಯಾಯಪೀಠ, ಸತೇಂದ್ರ ಕುಮಾರ್ ಆಂಟಿಲ್ Vs ಸಿಬಿಐ ಪ್ರಕರಣವನ್ನು ಉಲ್ಲೇಖಿಸಿ ಡಿಫಾಲ್ಟ್‌ ಬೇಲ್‌ ಕುರಿತು ಮಾರ್ಗಸೂಚಿಗೆ ವ್ಯಾಖ್ಯಾನ ನೀಡಿತು.ಪ್ರಕರಣ: ರಿತು ಛಬ್ರಿಯಾ Vs ಭಾರತ ಸರ್ಕಾರ ಮತ್ತಿತರರು

ಸುಪ್ರೀಂ ಕೋರ್ಟ್‌, WP(Cr) 60/2023 Dated 26-04-2023Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200