Advocates Dress Code in Summer- ಬೇಸಿಗೆ ರಜೆಯಲ್ಲಿ ಕಪ್ಪು ಕೋಟು ವಿಚಾರಣಾ ನ್ಯಾಯಾಲಯದಲ್ಲಿ ಕಡ್ಡಾಯವಲ್ಲ: ವಕೀಲರ ಪರಿಷತ್ತು
Wednesday, April 26, 2023
ಬೇಸಿಗೆ ರಜೆಯಲ್ಲಿ ಕಪ್ಪು ಕೋಟು ವಿಚಾರಣಾ ನ್ಯಾಯಾಲಯದಲ್ಲಿ ಕಡ್ಡಾಯವಲ್ಲ: ವಕೀಲರ ಪರಿಷತ್ತು
ವಿಚಾರಣಾ ನ್ಯಾಯಾಲಯದ (ಟ್ರಯಲ್ ಕೋರ್ಟ್) ಮುಂದೆ ಹಾಜರಾಗುವ ವಕೀಲರು ಬೇಸಿಗೆ ರಜೆಯಲ್ಲಿ ಇನ್ನು ಮುಂದೆ ಕರಿ ಕೋಟು ಕಡ್ಡಾಯವಾಗಿ ಧರಿಸಬೇಕೆಂದಿಲ್ಲ. ಹಾಗಂತ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (KSBC) ರಾಜ್ಯದ ಎಲ್ಲ ವಕೀಲರ ಸಂಘಗಳಿಗೆ ಪತ್ರ ಬರೆದಿದೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಎಚ್.ಎಲ್. ರಘು ಅವರು ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿರುವುದನ್ನು ಉಲ್ಲೇಖಿಸಲಾಗಿದೆ.
ಭಾರತೀಯ ವಕೀಲರ ಪರಿಷತ್ತು(IBC) ನಿಯಮಗಳ ಅಧ್ಯಾಯ 6ರ ಭಾಗ 4ರಲ್ಲಿ ವಿವರಿಸುವಂತೆ ವಕೀಲರ ಸಮುದಾಯಕ್ಕೆ ಈ ಮಾಹಿತಿ ಒದಗಿಸಲು ಈ ನೋಟೀಸನ್ನು ಎಲ್ಲ ವಕೀಲರ ಸಂಘದ ನೋಟೀಸ್ ಫಲಕಕ್ಕೆ ಹಾಕುವಂತೆ ವಕೀಲರ ಸಂಘದ ಅಧ್ಯಕ್ಷರಿಗೆ ಕೋರಲಾಗಿದೆ.
ಮಹಿಳಾ ವಕೀಲರು ಸೀರೆ ಅಥವಾ ಉದ್ದನೆಯ ಸ್ಕರ್ಟ್‌ಗಳಲ್ಲಿ (ಬಿಳಿ ಅಥವಾ ಕಪ್ಪು ಅಥವಾ ಯಾವುದೇ ಮುದ್ರೆ ಅಥವಾ ವಿನ್ಯಾಸವಿಲ್ಲದ) ಕಲಾಪದಲ್ಲಿ ಭಾಗವಹಿಸಬಹುದು.
ಅಥವಾ ಪಂಜಾಬಿ ಉಡುಗೆ ಅಥವಾ ಚೂಡಿದಾರ್, ಕುರ್ತಾ ಅಥವಾ ಸಲ್ವಾರ್ (ಬಿಳಿ ಅಥವಾ ಕಪ್ಪು ಬಣ್ಣದ್ದು) ಜೊತೆಗೆ ಬಿಳಿ ಬ್ಯಾಂಡ್‌ನೊಂದಿಗೆ ಕಾಣಿಸಿಕೊಳ್ಳಬಹುದಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.