NI Act: ಜಂಟಿ ಖಾತೆಯ ಚೆಕ್ ಅಮಾನ್ಯ ಬೌನ್ಸ್ ಪ್ರಕರಣ- ಸಹಿ ಹಾಕದ ವ್ಯಕ್ತಿಯ ವಿಚಾರಣೆ ಮಾಡಬಹುದೇ..?
NI Act: ಜಂಟಿ ಖಾತೆಯ ಚೆಕ್ ಅಮಾನ್ಯ ಬೌನ್ಸ್ ಪ್ರಕರಣ- ಸಹಿ ಹಾಕದ ವ್ಯಕ್ತಿಯ ವಿಚಾರಣೆ ಮಾಡಬಹುದೇ..?
ಚೆಕ್ ಅಮಾನ್ಯ ಪ್ರಕರಣದಲ್ಲಿ ಚೆಕ್‌ಗೆ ಸಹಿ ಹಾಕದ ಜಂಟಿ ಖಾತೆದಾರರನ್ನು ವಿಚಾರಣೆಗೆ ಒಳಪಡಿಸಬಹುದೇ..? ಈ ವಿಚಾರವನ್ನು ಪರಿಶೀಲನೆ ಮಾಡಲು ಸುಪ್ರೀಂ ಕೋರ್ಟ್ ನ್ಯಾಯಪೀಠ ಸಮ್ಮತಿಸಿದೆ.
ಹಣದ ಕೊರತೆಯಿಂದ ಜಂಟಿ ಖಾತೆಗೆ ಸೇರಿದ ಚೆಕ್ ಅಮಾನ್ಯ ಪ್ರಕರಣದಲ್ಲಿ ಚೆಕ್‌ಗೆ ಸಹಿ ಹಾಕದ ಖಾತೆದಾರರ ವಿರುದ್ಧ ವಿಚಾರಣಾ ಪ್ರಕ್ರಿಯೆಯನ್ನು ನಡೆಸಲು ಮುಂದಾಗಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ. ಕೆ.ಎಂ. ಜೋಸೆಫ್ ಮತ್ತು ನ್ಯಾ. ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಎದುರುದಾರರಿಗೆ ನೋಟೀಸ್ ಜಾರಿಗೊಳಿಸಿದೆ.
ಚೆಕ್ ಕುರಿತಾಗಿ ಅರ್ಜಿದಾರರು ಯಾವುದೇ ತಕರಾರು ಆಕ್ಷೇಪಣೆ ಮಾಡಿಲ್ಲ. ಆದರೆ, ಪ್ರಕರಣವು ವಿಚಾರಣೆಯಿಂದ ಸಾಬೀತಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಪ್ರಕ್ರಿಯೆ ವಜಾ ಮಾಡಲು ನಿರಾಕರಿಸಿತ್ತು.
ಅರ್ಜಿದಾರ ನಂ.1 ರವರು ಕಾಟನ್ ಮಿಲ್ ಮಾಲಕರು. ಎರಡನೇ ಅರ್ಜಿದಾರರು ಅವರ ಮಗಳು. ರೂ. 20 ಲಕ್ಷ ಸಾಲ ಪಾವತಿಗೆ ಸಂಬಂಧಿಸಿದಂತೆ 2016ರಲ್ಲಿ ಪ್ರತಿವಾದಿಗಳು ಇಬ್ಬರ ವಿರುದ್ಧವೂ ಎನ್.ಐ. ಕಾಯ್ದೆಯ ಸೆಕ್ಷನ್ 138ರ ಅನ್ವಯ ಕೇಸು ದಾಖಲಿಸಿದ್ದರು.
ಇದು ಜಂಟಿ ಖಾತೆ. ಪ್ರತಿವಾದಿ ಹಣ ಸ್ವೀಕರಿಸಿದ ಸಂದರ್ಭದಲ್ಲಿ ಅರ್ಜಿದಾರರ ಪುತ್ರಿ ಇದ್ದರು. ಬಡ್ಡಿ ಸಹಿತ ಅಸಲನ್ನು ಸೇರಿಸಿ ಚೆಕ್‌ನ್ನು ಅರ್ಜಿದಾರರು ನೀಡಿದ್ದರು. ಅದು ಅಮಾನ್ಯಗೊಂಡಿತ್ತು.
ಪ್ರಕರಣ: ಕೆ. ವೆಂಕಿಡಾಪತಿ Vs ಕೆ.ಎಸ್. ಸೇನಾಥಿಪತಿ (ಸುಪ್ರೀಂ ಕೋರ್ಟ್)
.