-->
POCSO: ಸಂತ್ರಸ್ತರ ವಯಸ್ಸು ಸಾಬೀತಾದರೆ ಮಾತ್ರ ಶಿಕ್ಷೆ- ಪಾಟ್ನಾ ಹೈಕೋರ್ಟ್

POCSO: ಸಂತ್ರಸ್ತರ ವಯಸ್ಸು ಸಾಬೀತಾದರೆ ಮಾತ್ರ ಶಿಕ್ಷೆ- ಪಾಟ್ನಾ ಹೈಕೋರ್ಟ್

POCSO: ಸಂತ್ರಸ್ತರ ವಯಸ್ಸು ಸಾಬೀತಾದರೆ ಮಾತ್ರ ಶಿಕ್ಷೆ- ಪಾಟ್ನಾ ಹೈಕೋರ್ಟ್





ಸಂತ್ರಸ್ತರ ವಯಸ್ಸು ಸಾಬೀತಾಗದೇ ಹೋದರೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (POCSO Act)ಯಡಿ ಶಿಕ್ಷೆ ನೀಡಲಾಗದು ಎಂದು ಪಾಟ್ನಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ನ್ಯಾ. ಅಲೋಕ್ ಕುಮಾರ್ ಪಾಂಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 164ರಡಿಯಲ್ಲಿ ಸಂತ್ರಸ್ತರ ಹೇಳಿಕೆಯನ್ನು ವಸ್ತುನಿಷ್ಟ ಸಾಕ್ಷ್ಯವಾಗಿ ಪರಿಗಣಿಸಲಾಗದು ಎಂದು ಹೇಳಿದೆ.



ಸಂತ್ರಸ್ತೆಯ ವಯಸ್ಸನ್ನು ಸಾಬೀತುಪಡಿಸಲು ನ್ಯಾಯಾಲಯ ಯಾವುದೇ ಯತ್ನ ಮಾಡಿಲ್ಲ ಎಂಬ ಅಂಶವನ್ನು ಪರಿಗಣಿಸಿದ ನ್ಯಾಯಪೀಠ, ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.



ಸುಪ್ರೀಂ ಕೋರ್ಟ್‌ನ ಜರ್ನೈಲ್ ಸಿಂಗ್ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಪೀಠ, ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಡಿಸಿದ ನಿರ್ದೇಶನಗಳನ್ನು ಪಾಲಿಸಿ, ಕಾಯ್ದೆಯ ಅಡಿಯಲ್ಲಿ ಸೂಚಿಸಲಾದ ಕಾರ್ಯವಿಧಾನವನ್ನು ಪ್ರಾಸಿಕ್ಯೂಷನ್ ಪಾಲಿಸಬೇಕಿತ್ತು ಎಂಬುದನ್ನು ಗಮನಿಸಿತು. ಘಟನೆ ನಡೆದ ದಿನಾಂಕಕ್ಕೆ ಹೋಲಿಸಿದರೆ ಸಂತ್ರಸ್ತೆ ಅಪ್ರಾಪ್ತೆ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಪ್ರಯತ್ನಿಸಿಲ್ಲ ಎಂದು ನ್ಯಾಯಪೀಠ ಹೇಳಿತು.



ಸುಮಾರು 14 ವರ್ಷ ವಯಸ್ಸಿನ ಸಂತ್ರಸ್ತೆಯನ್ನು ಮದುವೆಯ ಉದ್ದೇಶದಿಂದ ಮೇಲ್ಮನವಿದಾರ ಅಪಹರಿಸಿದ್ದರು ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು. ಆದರೆ, ಸಂತ್ರಸ್ತೆ ಸಾಕ್ಷಿ ನುಡಿದಾಗ ತನ್ನ ವಯಸ್ಸನ್ನು 20 ವರ್ಷ ಎಂದು ಹೇಳಿಕೊಂಡಿದ್ದಾಳೆ. ವಿಚಾರಣಾ ನ್ಯಾಯಾಲಯವು ಸಂತ್ರಸ್ತೆಯ ವಯಸ್ಸನ್ನು ಖಚಿತಪಡಿಸಿಲ್ಲ. ತೀರ್ಪಿನಲ್ಲಿ ಆಕೆಯ ವಯಸ್ಸಿನ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂಬುದಾಗಿ ಮೇಲ್ಮನವಿದಾರರು ವಾದಿಸಿದ್ದರು.



ಘಟನೆ ನಡೆದಾಗ ಸಂತ್ರಸ್ತೆ ಅಪ್ರಾಪ್ತೆ ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಲು ವಿಫಲವಾಗಿದೆ ಎಂಬ ಮೇಲ್ಮನವಿದಾರರ ವಾದವನ್ನು ಪರಿಗಣಿಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ಶಿಕ್ಷೆಯ ಆದೇಶವನ್ನು ರದ್ದುಪಡಿಸಿತು.


ಪ್ರಕರಣ: ದೀಪಕ್ ಕುಮಾರ್ Vs ಸರ್ಕಾರ (ಪಾಟ್ನಾ ಹೈಕೋರ್ಟ್‌)

.

Ads on article

Advertise in articles 1

advertising articles 2

Advertise under the article