ಮಹಿಳೆಯರಿಗೆ ಬಿಗ್ ಆಫರ್!- ಪಾನ್ ಮತ್ತು ಆಧಾರ್ ಲಿಂಕ್ ತಡ ಮಾಡಿದರೆ ದಂಡ ಖಚಿತ!
Tuesday, April 18, 2023
ಮಹಿಳೆಯರಿಗೆ ಬಿಗ್ ಆಫರ್!- ಪಾನ್ ಮತ್ತು ಆಧಾರ್ ಲಿಂಕ್ ತಡ ಮಾಡಿದರೆ ದಂಡ ಖಚಿತ!
ಪಾನ್ ಕಾರ್ಡನ್ನು ಆಧಾರ್ ಜೊತೆಗೆ ಲಿಂಕ್ ಮಾಡಬೇಕು ಎಂಬ ಸುದ್ದಿಗೆ ಈಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಈ ಲಿಂಕ್ ಮಾಡಲು ಈಗಿರುವ ಡೆಡ್ ಲೈನ್ ವಿಸ್ತರಿಸಲಾಗಿದೆ.
ಅಂದ ಹಾಗೆ, ಪಾನ್ ಮತ್ತು ಆಧಾರ್ ಲಿಂಕ್ ಮಾಡುವ ಮೊದಲು 1,000/- ದಂಡವನ್ನು ಪಾವತಿಸಲೇ ಬೇಕು. 30-06-2023ರ ಒಳಗೆ ದಂಡ ಪಾವತಿ ಮಾಡಿ ಲಿಂಕ್ ಮಾಡಬೇಕು. ಇಲ್ಲದಿದ್ದರೆ 1-07-2023ರಿಂದ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ.
ಆದರೆ, ಈ ದಂಡದಿಂದ ಮಹಿಳೆಯರಿಗೆ ರಿಯಾಯಿತಿ ನೀಡಲಾಗಿದೆ. ಇನ್ನು ಎರಡೂವರೆ ತಿಂಗಳು ಮಹಿಳೆಯರು ಈ ರಿಯಾಯಿತಿಯ ಲಾಭವನ್ನು ಪಡೆದುಕೊಳ್ಳಬಹುದು.
ಮಾರ್ಚ್ 31ರೊಳಗೆ ಆಧಾರ್ ಪಾನ್ ಲಿಂಕ್ ಮಾಡಲು ಡೆಡ್ ಲೈನ್ ವಿಧಿಸಲಾಗಿತ್ತು. ಆದರೆ, ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಗಡುವನ್ನು ಜೂನ್ 30ರ ತನಕ ವಿಸ್ತರಿಸಿದೆ.
ಯಾವುದೇ ದಂಡವಿಲ್ಲದೆ ಜೂನ್ 30ರ ಒಳಗೆ ನಿಮ್ಮ ಆಧಾರ್ ಜೊತೆಗೆ ಪಾನ್ ಲಿಂಕ್ ಮಾಡಿ.