-->
ಜೈಲು ಶಿಕ್ಷೆ ಪ್ರಶ್ನಿಸಿ ರಾಹುಲ್ ಗಾಂಧಿ ಮೇಲ್ಮನವಿ: ಸೆಷನ್ಸ್ ನ್ಯಾಯಾಲಯದಲ್ಲಿ ಕೈ ನಾಯಕನ ವಾದವೇನು..?

ಜೈಲು ಶಿಕ್ಷೆ ಪ್ರಶ್ನಿಸಿ ರಾಹುಲ್ ಗಾಂಧಿ ಮೇಲ್ಮನವಿ: ಸೆಷನ್ಸ್ ನ್ಯಾಯಾಲಯದಲ್ಲಿ ಕೈ ನಾಯಕನ ವಾದವೇನು..?

ಜೈಲು ಶಿಕ್ಷೆ ಪ್ರಶ್ನಿಸಿ ರಾಹುಲ್ ಗಾಂಧಿ ಮೇಲ್ಮನವಿ: ಸೆಷನ್ಸ್ ನ್ಯಾಯಾಲಯದಲ್ಲಿ ಕೈ ನಾಯಕನ ವಾದವೇನು..?





ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ವಿರುದ್ಧ ಸೂರತ್ ಕೋರ್ಟ್ ಹೊರಡಿಸಿರುವ ಜೈಲು ಶಿಕ್ಷೆ ತೀರ್ಪನ್ನು ಪ್ರಶ್ನಿಸಿ ಸೂರತ್ ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.


ಕರ್ನಾಟಕದ ಕೋಲಾರದಲ್ಲಿ 2019ರಲ್ಲಿ ಮಾಡಿದ ಭಾಷಣದ ಒಂದು ಭಾಗವನ್ನು ಉಲ್ಲೇಖಿಸಿ ತಮ್ಮ ವಿರುದ್ಧ ಮಾಡಲಾದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು.


ಸೂರತ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪಿನ ಬಗ್ಗೆ ಅವರು ವಿವಿಧ ಆಕ್ಷೇಪಗಳನ್ನು ಎತ್ತಿದ್ದಾರೆ. ತಮ್ಮ ವಿರುದ್ಧದ ತೀರ್ಪನ್ನು ಮರುಪರಿಶೀಲಿಸಿ ಅಪರಾಧ ಮುಕ್ತರನ್ನಾಗಿ ಘೋಷಿಸಬೇಕು ಎಂದು ಅವರು ಮೇಲ್ಮನವಿಯಲ್ಲಿ ಕೋರಿಕೊಂಡಿದ್ದಾರೆ.


ಅವರ ಆಕ್ಷೇಪದ ಕೆಲವು ಮುಖ್ಯ ಭಾಗಗಳು ಹೀಗಿವೆ..

ನನ್ನ ಭಾಷಣದಲ್ಲಿ ಮಾಡಿದ್ದೇನೆ ಎನ್ನಲಾದ ಆರೋಪಗಳು ನಿರ್ದಿಷ್ಟ ವ್ಯಕ್ತಿಗಳಿಗೆ ಸಂಬಂಧಿಸಿದ್ದು, ಅವರು ಮಾತ್ರ ಇಲ್ಲಿ ಬಾಧಿತ ವ್ಯಕ್ತಿ (Aggrived Person) ಎಂದು ಪರಿಗಣಿಸಬೇಕು.


ನನ್ನ ಭಾಷಣದಲ್ಲಿ ಮೋದಿ ಸಮುದಾಯದ ಸದಸ್ಯ ಎನ್ನುವ ಕಾರಣಕ್ಕೆ ನಾನು ಹೆಸರಿಸುವ ಮೋದಿಗಳನ್ನು ನಿಂದಿಸಿಲ್ಲ... (ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ). ಹಾಗಾಗಿ ಇದು ಸಮುದಾಯಕ್ಕೆ ಬಾಧಕವಾಗುವ ಹೇಳಿಕೆಯಲ್ಲ.


# ನರೇಂದ್ರ ಮೋದಿ ವಿರುದ್ಧದ ಹೇಳಿಕೆಯನ್ನು ರಾಜಕೀಯ ಭಾಷಣವಾಗಿ ಪರಿಗಣಿಸಬೇಕು. 

#  ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಹೇಳಿಕೆಗಳು ವೈಯಕ್ತಿಕ ದ್ವೇಷದಿಂದ ಕೂಡಿರುವುದಿಲ್ಲ.

# ನರೇಂದ್ರ ಮೋದಿ ಸಹಿತ ಹೆಸರಿಸಲಾದ ಕೆಲವೇ ವ್ಯಕ್ತಿಗಳು ಬಾಧಿತ ವ್ಯಕ್ತಿಗಳಾಗಿರುವ ಕಾರಣ ಅವರು ಮಾತ್ರ ದೂರು ಸಲ್ಲಿಸಲು ಅರ್ಹರು. 

# ಪೂರ್ಣೇಶ್ ಮೋದಿ ಅವರಿಗೆ ತಮ್ಮ ವಿರುದ್ಧ ಈ ಪ್ರಕರಣದಲ್ಲಿ ದೂರು ಸಲ್ಲಿಸುವ ಅರ್ಹತೆ ಇಲ್ಲ.

#  ದೂರುದಾರರಿಗೆ ಆಘಾತವಾಗಿದೆ ಎಂಬ ಕಾರಣಕ್ಕೆ ಅವರನ್ನು ಬಾಧಿತ ವ್ಯಕ್ತಿಯನ್ನಾಗಿ ಪರಿಗಣಿಸಲಾಗದು.

#  ಈ ಪ್ರಕರಣವು ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು, ಎದುರಾಳಿಗಳನ್ನು ಹತ್ತಿಕ್ಕಬೇಕು, ಪ್ರತಿಪಕ್ಷಗಳ ಧ್ವನಿ ಅಡಗಿಸಬೇಕು ಎಂಬ ಏಕೈಕ ಉದ್ದೇಶದಿಂದ ಈ ದೂರು ದಾಖಲಿಸಲಾಗಿದೆ.

# ಎರಡು ವರ್ಷಗಳ ಶಿಕ್ಷೆಯು ತಮ್ಮ ಸಂಸದ ಸ್ಥಾನದ ಅನರ್ಹತೆಗೆ ಕಾರಣವಾಗುತ್ತದೆ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಬೇಕಿತ್ತು.


ಏನಿದು ಪ್ರಕರಣ:

2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ಪ್ರಧಾನ ಭಾಷಣಕಾರರಾಗಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ಮಾಡಿದ್ದರು.


ಹಗರಣ ನಡೆಸಿ ದೇಶ ಬಿಟ್ಟು ಪರಾರಿಯಾಗಿದ್ದ ನೀರವ್ ಮೋದಿ, ಲಲಿತ್ ಮೋದಿ ಅವರಿಗೆ ಪ್ರಧಾನಿ ಮೋದಿಯನ್ನು ಹೋಲಿಸಿದ್ದರು. ಎಲ್ಲ ಕಳ್ಳರ ಹೆಸರಿನ ಹಿಂದೆ ಮೋದಿ ಉಪನಾಮ ಏಕೆ ಇದೆ ಎಂದು ಪ್ರಶ್ನಿಸಿದ್ದರು.


ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಹದಿರಾಶ್ ಶರ್ಮಾ 168 ಪುಟಗಳ ತೀರ್ಪು ಪ್ರಕಟಿಸಿ ಎರಡು ವರ್ಷಗಳ ಶಿಕ್ಷೆಗೆ ಗುರಿಪಡಿಸಿದರು. ಸಂಸದರೂ ಆಗಿರುವ ರಾಹುಲ್ ಅವರ ಹೇಳಿಕೆಯಿಂದ ಗಂಭೀರ ಪರಿಣಾಮ ಬೀರುತ್ತದೆ ಎಂಬ ಕಾರಣವೊಡ್ಡಿ ತಮ್ಮ ತೀರ್ಪನ್ನು ಸಮರ್ಥಿಸಿಕೊಂಡಿದ್ದರು.




Ads on article

Advertise in articles 1

advertising articles 2

Advertise under the article