ಕೋವಿಡ್ ಆತಂಕ: ವರ್ಚುಲ್ ಕಲಾಪಕ್ಕೆ ಒತ್ತು ನೀಡಿ- ವಕೀಲರಿಗೆ ಸಿಜೆಐ ಚಂದ್ರಚೂಡ್ ಸಲಹೆ
ಕೋವಿಡ್ ಆತಂಕ: ವರ್ಚುಲ್ ಕಲಾಪಕ್ಕೆ ಒತ್ತು ನೀಡಿ- ವಕೀಲರಿಗೆ ಸಿಜೆಐ ಚಂದ್ರಚೂಡ್ ಸಲಹೆ
ಮತ್ತೆ ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಆತಂಕ ಎದುರಾಗಿದೆ.
ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ವರ್ಚುಲ್ ಕಲಾಪಕ್ಕೆ ಹೆಚ್ಚಿನ ಒತ್ತು ನೀಡುವಂತೆ ವಕೀಲರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಸಲಹೆ ನೀಡಿದ್ದಾರೆ.
ಪತ್ರಿಕೆಗಳಲ್ಲಿ ಬರುತ್ತಿರುವ ವರದಿಗಳ ಪ್ರಕಾರ ಕೋವಿಡ್ ಪ್ರಕರಣಗಳಲ್ಲಿ ವ್ಯಾಪಕ ಏರಿಕೆ ಕಂಡುಬರುತ್ತಿದೆ. ಇದನ್ನು ಗಮನಿಸಿದರೆ, ವಕೀಲರು ಹೈಬ್ರೀಡ್ ಮೋಡ್ (ವರ್ಚುವಲ್ ಕಲಾಪ) ನ್ನು ಬಳಸಲು ಹೆಚ್ಚು ಆಸಕ್ತಿ ತೋರಿಸಬೇಕು ಎಂದು ಅವರು ಹೇಳಿದರು.
ನೀವು ಆನ್‌ಲೈನ್‌ನಲ್ಲಿ ವಾದ ಮಾಡಲು ಮುಂದಾದರೆ, ಆಗ ನಾವು ನಿಮ್ಮ ವಾದವನ್ನು ಆಲಿಸಲು ಮುಂದಾಗುತ್ತೇವೆ. ನಮ್ಮಲ್ಲಿ ಹೈಬ್ರೀಡ್ ಮೋಡ್ ಆರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ವಕೀಲರು ಆನ್‌ಲೈನ್ ಕಲಾಪದತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು ಅವರು ಹೇಳಿದರು.