ಹಣ ಸಂಪಾದನೆಗೆ ಮಹಿಳೆಯ ಅಶ್ಲೀಲ ಚಾಟ್: ವಿಚ್ಚೇದನ ಕೋರಿದ ಅಪರೂಪದ ಪ್ರಸಂಗ !
ಹಣ ಸಂಪಾದನೆಗೆ ಮಹಿಳೆಯ ಅಶ್ಲೀಲ ಚಾಟ್: ವಿಚ್ಚೇದನ ಕೋರಿದ ಅಪರೂಪದ ಪ್ರಸಂಗ !
- ಸೆಕ್ಸ್ ಚಾಟ್ ಮಾಡುವವರು ಈ ಸುದ್ದಿಯನ್ನು ಓದಲೇಬೇಕು..
- ಆಕೆಯ ಅಕ್ರಮ ಆದಾಯ ಬದುಕಿಗೇ ಕೊಳ್ಳಿ ಇಟ್ಟದ್ದು ಹೇಗೆ..?
- ವಿಚ್ಚೇನ ಕೋರಲು ಕಾರಣವಾದ ಆಘಾತಕಾರಿ ಘಟನೆ ಇದು..
ಸೋಶಿಯಲ್ ಮೀಡಿಯಾ ಆಪ್‌ಗಳ ಮೂಲಕ ಅಶ್ಲೀಲ ಚಾಟಿಂಗ್ ಮಾಡುತ್ತಿದ್ದ ಮಹಿಳೆಯನ್ನು ಆಕೆಯ ಗಂಡನೇ ವ್ಯಭಿಚಾರಕ್ಕೆ ತಳ್ಳಲು ಪ್ರಯತ್ನಿಸಿದ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.
ವಿವಾಹಿತ ಮಹಿಳೆ ತನ್ನ ಅಕ್ರಮ ಹಣ ಗಳಿಕೆಗಾಗಿ ಅಶ್ಲೀಲ ಚಾಟ್ ಮಾಡುತ್ತಿದ್ದಳು. ಇದೇ ವಿಷಯ ಆಕೆಯ ಸಾಂಸಾರಿಕ ಬದುಕಿಗೆ ಹುಳಿ ಹಿಂಡಿದೆ.
ಪತಿ ಬ್ಯಾಂಕ್ ಉದ್ಯೋಗಿಯಾಗಿದ್ದರೂ ವಿವಾಹಿತ ಮಹಿಳೆ ತನ್ನ ಪತಿಗೆ ತಿಳಿಯದಂತೆ ಸೋಶಿಯಲ್ ಮೀಡಿಯಾ ಆಪ್‌ಗಳಲ್ಲಿ ಆನ್‌ಲೈನ್ ಚಾಟ್ ಸೇರಿದಂತೆ ಸೆಕ್ಸ್ ಚಾಟ್ ಮಾಡುತ್ತಿದ್ದಳು. ಇದರಿಂದ ಆಕೆಗೆ ಸಾವಿರಾರು ರೂಪಾಯಿಗಳ ಆದಾಯ ಬರುತ್ತಿತ್ತು. ಈ ನೀಚ ಕೃತ್ಯ ಒಂದು ದಿನ ಮಹಿಳೆಯ ಪತಿಗೆ ಗೊತ್ತಾಯಿತು.
ಆ ಪಾಪಿ ಗಂಡ ತನ್ನ ಪತ್ನಿಯನ್ನು ಅಕ್ರಮ ಮುಂದುವರಿಸದಂತೆ ತಡೆಯುವ ಬದಲು ಹಣದಾಸೆಗೆ ತುತ್ತಾಗಿ ಇಂತಹ ನೀಚ ಕೃತ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಲು ಆರಂಭಿಸಿದ. ಇದರಿಂದ ಬೇಸತ್ತ ವಿವಾಹಿತ ಮಹಿಳೆ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾಳೆ.
ನ್ಯಾಯಾಲಯದಲ್ಲಿ ಸಾಮಾನ್ಯವಾಗಿ ಕಾಣಬರುವ ವಿಚ್ಚೇದನ ಅರ್ಜಿಗಿಂತ ಇದೊಂದು ಅಪರೂಪದ ಹಾಗೂ ಆಘಾತಕಾರಿ ಪ್ರಕರಣ ಇದಾಗಿದೆ. ತನ್ನ ವೃತ್ತಿ ಜೀವನದ 36 ವರ್ಷಗಳಲ್ಲಿ ಇಂತಹ ಪ್ರಕರಣ ಬಂದದ್ದು ಇದೇ ಮೊದಲು ಎಂದು ಹಿರಿಯ ವಕೀಲ ಸಿದ್ದಾಂತ್ ಕುಮಾರ್ ಹೇಳಿದ್ದಾರೆ.
ಪ್ರಕರಣದ ಸಂಪೂರ್ಣ ಮಾಹಿತಿ:
ವಿವಾಹಿತ ಮಹಿಳೆ ಹುಡುಗರೊಂದಿಗೆ ಆನ್‌ಲೈನ್ ಸೆಕ್ಸ್ ಚಾಟ್ ಮಾಡುತ್ತಿದ್ದಳು. ಇದಕ್ಕೆ ಪ್ರತಿಯಾಗಿ ಆಕೆಗೆ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ನಿಂದ ಪ್ರತಿ ತಿಂಗಳು 80 ಸಾವಿರದಿಂದ 10 ಲಕ್ಷ ರೂ. ವರೆಗೆ ಆದಾಯ ಸಿಗುತ್ತಿತ್ತು. ಆದರೆ, ಈ ಹಣದ ಮೂಲದ ವಿಷಯವನ್ನು ತನ್ನ ಗಂಡನಿಗೆ ಗೊತ್ತಾಗದಂತೆ ರಹಸ್ಯವಾಗಿ ಇಟ್ಟಿದ್ದಳು.
ಸೋಶಿಯಲ್ ಮೀಡಿಯಾದಲ್ಲಿ ತನ್ನ ಹೆಂಡತಿ ಹೇಗೆ ಕೆಲಸ ಮಾಡುತ್ತಿದ್ದಾಳೆ ಎಂಬುದು ಪತಿಗೆ ಸಹ ಗೊತ್ತಿರಲಿಲ್ಲ. ಇಲ್ಲದ ಸಬೂಬು ಹೇಳಿ, ವಿಚಾರ ಮರೆಸಿ ಮಹಿಳೆಯೂ ತನ್ನ ಪತಿಯನ್ನು ದಾರಿ ತಪ್ಪಿಸುತ್ತಿದ್ದಳು. ಆದರೆ, ತನ್ನ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿವೆ ಎಂದು ಮಾತ್ರ ಪತಿಗೆ ಹೇಳುತ್ತಿದ್ದಳು.
ಈ ವೀಡಿಯೋಗಳಿಗೆ ಬರುವ ಲೈಕ್, ಕಮೆಂಟ್‌ಗಳು ಮತ್ತು Viewಗಳ ಆಧಾರದಲ್ಲಿ ಆಪ್‌ನವರು ತನಗೆ ಹಣ ಪಾವತಿಸುತ್ತಿದ್ಧಾರೆ ಎಂದು ಆಕೆ ಸುಳ್ಳು ಹೇಳಿ ಪತಿಯನ್ನು ಯಾಮಾರಿಸುತ್ತಿದ್ದಳು. ಆದರೆ, ವಾಸ್ತವವಾಗಿ ಆಕೆ ಅಶ್ಲೀಲ ಆನ್‌ಲೈನ್ ವೀಡಿಯೋ ಚಾಟಿಂಗ್ ಆಪ್‌ಗಳ ಮೂಲಕ ಗ್ರಾಹಕರ ಜೊತೆಗೆ ಅಶ್ಲೀಲ ಮಾತುಕತೆಯಲ್ಲಿ ತೊಡಗುತ್ತಿದ್ದಳು. ಹೆಚ್ಚು ಸಮಯ ಇದ್ದಷ್ಟು ಆಕೆಗೆ ಹೆಚ್ಚು ಹಣ ಸಿಗುತ್ತಿತ್ತು.
ನಗ್ನ ವೀಡಿಯೋ ಶೇರ್ ಮಾಡಿದ್ದೇ ಸಂಕಷ್ಟ...:
ಇದರ ನಡುವೆ ಈ ಮಹಿಳೆ ಓರ್ವ ಗ್ರಾಹಕನ ಜೊತೆಗೆ ಭಾವನಾತ್ಮಕವಾಗಿ ಬೆರೆತುಕೊಂಡಿದ್ದಳು. ಅಲ್ಲದೆ, ಇವರ ಇಬ್ಬರ ನಡುವೆ ಪ್ರೀತಿಯೂ ಹುಟ್ಟಿಕೊಂಡಿತ್ತು. ಇಷ್ಟು ದಿನಗಳ ಕಾಲ ಅಶ್ಲೀಲ ಆಪ್ ನಲ್ಲಿ ಮಾತುಕತೆ ನಡೆಸಿ ಪುರುಷರನ್ನು ಸೆಳೆಯುತ್ತಿದ್ದಳು. ಆದರೆ, ಯಾವತ್ತೂ ಆಕೆ ತನ್ನ ನಗ್ನ ಫೋಟೋ ಅಥವಾ ವೀಡಿಯೋ ಆಪ್‌ನಲ್ಲಿ ಪೋಸ್ಟ್ ಮಾಡಿರಲಿಲ್ಲ.
ಆದರೆ, ಸಲುಗೆ ಹೊಂದಿದ್ದ ಆ ಯುವಕ ಒಂದು ದಿನ ಚಾಟ್ ಮಾಡುವಾಗ ಆಕೆಗೆ ನರೆ ನಗ್ನವಾಗಲು ಕೋರಿಕೊಂಡಿದ್ದಾನೆ. ಅಂತೆಯೇ ಆಕೆ ವೀಡಿಯೋ ಕಾಲ್‌ನಲ್ಲಿ ಅರೆ ನಗ್ನವಾಗಿದ್ದಾಳೆ. ಇತ್ತ ಆ ಯುವಕ ಮಹಿಳೆಯ ಅರೆನಗ್ನ ದೃಶ್ಯಗಳನ್ನು ತನ್ನ ಮೊಬೈಲ್ ಮೂಲಕ ಸ್ಕ್ರೀನ್ ರೆಕಾರ್ಡಿಂಗ್ ಮಾಡಿಕೊಂಡಿದ್ದಾನೆ. ಅಲ್ಲಿಂದ ಆಕೆಗೆ ಭೇಟಿಯಾಗುವಂತೆ ಕಾಡಲು ಆರಂಭಿಸಿದ್ದಾನೆ.
ಇದನ್ನೇ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಶುರುಮಾಡಿದ ಯುವಕ ಭೇಟಿಯಾಗದಿದ್ದರೆ ನಗ್ನ ವೀಡಿಯೋವನ್ನು ಪತಿಗೆ ಕಳಿಸುವಂತೆ ಬೆದರಿಕೆ ಹಾಕಿದ್ದಾನೆ. ಆದರೆ, ಯಾವುದಕ್ಕೂ ಆಕೆ ಒಪ್ಪಿಕೊಂಡಿಲ್ಲ. ಕೊನೆಗೆ ಆ ಯುವಕ ಆಕೆಯ ಅರೆ ನಗ್ನ ವೀಡಿಯೋವನ್ನು ಪತಿಗೆ ಕಳುಹಿಸಿದ್ದಾನೆ.
ಇದನ್ನು ನೋಡಿದ ಪತಿಗೆ ಹೊಳೆದದ್ದೇ ವಿಕೃತ ಐಡಿಯಾ..!
ಈ ದೃಶ್ಯವನ್ನು ನೋಡಿ ಪಾಪಿ ಪತಿ ಮನದಲ್ಲಿ ನೀಚ ಬುದ್ದಿ ಮೊಳೆದಿದೆ. ವೀಡಿಯೋ ಮೂಲಕ ತನ್ನ ಪತ್ನಿ ಪರ ಪುರುಷರನ್ನು ಟಾರ್ಗೆಟ್ ಮಾಡಿದ್ದಳು ಎಂದು ತಿಳಿದುಕೊಂಡಿದ್ದಾನೆ. ಅಲ್ಲಿಂದ ತನ್ನ ಹೆಂಡತಿಯನ್ನೇ ಸಂಪಾದನೆಯ ಸಾಧನವಾಗಿಸಲು ಬಯಸಿದ್ದಾನೆ. ಅಂದಿನಿಂದ ಆಕೆಯನ್ನು ತನ್ನ ಸ್ನೇಹಿತರ ಜೊತೆಗೆ ರಾತ್ರಿ ಕಳೆಯುವಂತೆ ಒತ್ತಡ ಹೇರಲು ಆರಂಭಿಸಿದ್ದಾನೆ.
ಬ್ಯಾಂಕ್ ಉದ್ಯೋಗಿಯಾಗಿರುವ ಆತ ಪತ್ನಿಗೆ ಸೇರಿದ್ದ ಎಲ್ಲ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಿಸಿದ್ದಾನೆ. ಜೊತೆಗೆ ಬೇರೊಬ್ಬರ ಜೊತೆಗೆ ಸೆಕ್ಸ್‌ನಲ್ಲಿ ಸಹಕರಿಸಬೇಕು ಎಂಬ ಒತ್ತಡ ಪತ್ನಿಯಿಂದ ಹೆಚ್ಚತೊಡಗಿದೆ.
ಇದರಿಂದ ಬೇಸತ್ತ ಪತ್ನಿ ಫೈಜಾಬಾದ್ ಕೋರ್ಟ್ ಮೊರೆ ಹೋಗಿದ್ದು, ಪತಿಯಿಂದ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮಹಿಳೆಯ ಕಥೆ ಕೇಳಿ ನ್ಯಾಯಾಲಯವೇ ಹೌಹಾರಿದೆ. ನ್ಯಾಯಾಲಯದಿಂದ ನಡೆದ ಕೌನ್ಸಿಲಿಂಗ್ ವೇಳೆ, ಆಕೆ ಹಣದ ವಿಚಾರದಲ್ಲಿ ತಾನು ದೊಡ್ಡ ತಪ್ಪು ಮಾಡಿದೆ ಎಂದು ಒಪ್ಪಿಕೊಂಡಿದ್ದಾಳೆ.