-->
ವಾಟ್ರ್ಯಾಪ್ ಗ್ರೂಪ್ ಅಡ್ಮಿನ್ ಮೇಲೆ ಕ್ರಮ: ಚುನಾವಣಾ ಆಯೋಗದ ಎಚ್ಚರಿಕೆ ಗಮನವಿಟ್ಟು ಓದಿ...

ವಾಟ್ರ್ಯಾಪ್ ಗ್ರೂಪ್ ಅಡ್ಮಿನ್ ಮೇಲೆ ಕ್ರಮ: ಚುನಾವಣಾ ಆಯೋಗದ ಎಚ್ಚರಿಕೆ ಗಮನವಿಟ್ಟು ಓದಿ...

ವಾಟ್ರ್ಯಾಪ್ ಗ್ರೂಪ್ ಅಡ್ಮಿನ್ ಮೇಲೆ ಕ್ರಮ: ಚುನಾವಣಾ ಆಯೋಗದ ಎಚ್ಚರಿಕೆ ಗಮನವಿಟ್ಟು ಓದಿ...

ಚುನಾವಣೆ ವೇಳೆ ವಾಟ್ಸ್ಯಾಪ್ ಸಹಿತ ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಇದಕ್ಕಾಗಿ ಚುನಾವಣಾ ಆಯೋಗ ವಿಶೇಷ ವ್ಯವಸ್ಥೆ ಮಾಡಿಕೊಂಡಿದೆ.ಪೊಲೀಸ್ ಇಲಾಖೆ ಹಾಗೂ ವಿಶೇಷ ತಂಡಗಳನ್ನು ಈ ಕಾರ್ಯಕ್ಕೆ ರಚನೆ ಮಾಡಲಾಗಿದ್ದು, ಆಕ್ಷೇಪ ಹಾಗೂ ಅನುಮಾನ ಇರುವ ಗುಂಪುಗಳಲ್ಲಿ ನಡೆಯುವ ಸಂದೇಶ, ಮಾತುಕತೆಗಳ ಮೇಲೆ ದೂರುಗಳ ಆಧಾರದಲ್ಲಿ ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ.ಬೆಂಗಳೂರು ಜಿಲ್ಲಾ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ತಗಳ ಪೈಕಿ ಈಗಾಗಲೇ 24 x 7 ಮಾದರಿಯಲ್ಲಿ ತಂಡದ ಕಾರ್ಯನಿರ್ವಹಣೆ ನಡೆಯುತ್ತಿದ್ದು, ವಾಟ್ಸ್ಯಾಪ್, ಫೇಸ್ ಬುಕ್ ಹಾಗೂ ಇನ್ಸ್‌ಟಗ್ರಾಮ್ ಬಗ್ಗೆ ಕೆಲವೊಂದು ದೂರುಗಳು ಬಂದಿದ್ದು, ಸಂಬಂಧಪಟ್ಟವರಿಗೆ ನೋಟೀಸ್ ನೀಡಲಾಗಿದೆ.ಚುನಾವಣಾ ನೀತಿ ಸಂಹಿತೆ ಗಾಳಿಗೆ ತೂರಿದರೆ ಅಡ್ಮಿನ್ ಮೇಲೆ ಕ್ರಮ ಜರುಗಿಸುವ ಸಾಧ್ಯತೆ ಇದೆ. ಮತ ಕೇಳಿ ಸಂದೇಶ ಕಳಿಸಿದರೆ, ಮತದಾರನ ಮೇಲೆ ಪಕ್ಷಗಳ ಯಾ ಅಭ್ಯರ್ಥಿಯ ಪರವಾದ ಪ್ರಭಾವ ಬೀರಿದರೆ ಕಾನೂನು ಕ್ರಮ ಜರುಗಿಸಬಹುದಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.ಆಸ್ಪದಕ್ಕೆ ಎಡೆ ಮಾಡಿಕೊಡದೆ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸಲು ಎಲ್ಲರ ಸಹಕಾರವನ್ನು ಯಾಚಿಸಿದ್ದು, ಅಡ್ಮಿನ್ ಮತ್ತು ಸದಸ್ಯರು ಈ ಬಗ್ಗೆ ಜಾಗರೂಕತೆಯಿಂದ ಸಾಮಾಜಿಕ ಜಾಲತಾಣವನ್ನು ಬಳಸುವಂತೆ ಚುನಾವಣಾ ಆಯೋಗ ಸೂಚಿಸಿದೆ.

.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200