-->
ಬ್ಯಾಂಕ್ ನೌಕರರಿಗೆ ಸಿಹಿ ಸುದ್ದಿ: ವಾರಕ್ಕೆ 2 ದಿನ ರಜೆ, ಕೆಲಸದ ಅವಧಿಯಲ್ಲೂ ಬದಲಾವಣೆ!

ಬ್ಯಾಂಕ್ ನೌಕರರಿಗೆ ಸಿಹಿ ಸುದ್ದಿ: ವಾರಕ್ಕೆ 2 ದಿನ ರಜೆ, ಕೆಲಸದ ಅವಧಿಯಲ್ಲೂ ಬದಲಾವಣೆ!

ಬ್ಯಾಂಕ್ ನೌಕರರಿಗೆ ಸಿಹಿ ಸುದ್ದಿ: ವಾರಕ್ಕೆ 2 ದಿನ ರಜೆ, ಕೆಲಸದ ಅವಧಿಯಲ್ಲೂ ಬದಲಾವಣೆ!





ಬ್ಯಾಂಕ್ ನೌಕರರಿಗೆ ಇದೊಂದು ಭಾರೀ ಸಿಹಿ ಸುದ್ದಿ. ಇನ್ನು ಮುಂದೆ ವಾರದಲ್ಲಿ ಐದು ದಿನ ಮಾತ್ರ ಕೆಲಸದ ದಿನವಾಗಿದ್ದು, ಉಳಿದ ಎರಡು ದಿನ ರಜೆ ಆಗಲಿದೆ. ಹೊಸ ನಿಯಮದ ಪ್ರಕಾರ ಕೆಲಸದ ಅವಧಿಯಲ್ಲೂ ಬದಲಾವಣೆಯಾಗಲಿದೆ. ಆ ಹೊಸ ನಿಯಮದ ಕುರಿತ ಮಾಹಿತಿ ಇಲ್ಲಿದೆ....


ಬ್ಯಾಂಕ್ ನೌಕರರಿಗೆ ಇನ್ನು ವಾರದಲ್ಲಿ ಐದೇ ದಿನಗಳ ಕರ್ತವ್ಯ. ಈ ಬಗ್ಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಜಾರಿಗೆ ತರಲಿರುವ ನೂತನ ನಿಯಮಗಳು ಹೀಗಿವೆ.


ಐದು ದಿನಗಳ ಕೆಲಸದ ಪದ್ಧತಿ ಜಾರಿಗೊಳಿಸಬೇಕು ಎಂಬುದು ಬ್ಯಾಂಕ್‌ ಸಿಬ್ಬಂದಿಯ ಬಹುದಿನಗಳ ಬೇಡಿಕೆಯಾಗಿತ್ತು. ಈ ಬೇಡಿಕೆಗೆ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ಮತ್ತು ಭಾರತೀಯ ಬ್ಯಾಂಕ್‌ಗಳ ಸಂಘವೂ ಸಮ್ಮತಿ ಸೂಚಿಸಿದೆ. ಬ್ಯಾಂಕ್ ಸಿಬ್ಬಂದಿಯ ಬೇಡಿಕೆಗೆ ಕೇಂದ್ರ ಸರ್ಕಾರ ಪೂರಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಹೊಸ ನಿಯಮ ಜಾರಿಗೆ ತರುವುದಾಗಿ ಹಣಕಾಸು ಸಚಿವಾಲಯ ಭರವಸೆ ನೀಡಿದೆ.


ನೂತನ ವ್ಯವಸ್ಥೆಯ ಪ್ರಕಾರ ನೌಕರರ ಸೇವಾ ದಿನದ ಅವಧಿಯಲ್ಲೂ ಬದಲಾವಣೆ ಆಗಲಿದೆ. ಈಗಿರುವ ಕೆಲಸದ ಅವಧಿಗಿಂತಲೂ 40 ನಿಮಿಷಗಳ ಕಾಲ ಹೆಚ್ಚಳವಾಗಲಿದೆ. ಬೆಳಿಗ್ಗೆ 9-45ಕ್ಕೆ ಬ್ಯಾಂಕ್‌ ಸೇವೆ ಆರಂಭವಾಗಲಿದ್ದು, ಸಂಜೆ 5-30ರ ತನಕ ಬ್ಯಾಂಕ್ ಸಿಬ್ಬಂದಿ ಕೆಲಸ ಮಾಡಬೇಕಾಗುತ್ತದೆ.


ಈ ನಿಯಮದ ಪ್ರಕಾರ, ವಾರದ ಎರಡು ದಿನ ಅಂದರೆ ಶನಿವಾರ ಮತ್ತು ಭಾನುವಾರ ರಜೆ ಇರುತ್ತದೆ. ಈ ಹಿಂದಿನ ನಿಯಮಗಳ ಪ್ರಕಾರ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್‌ಗೆ ರಜೆ ಇತ್ತು. ಹೊಸ ನಿಯಮದ ಪ್ರಕಾರ ವಾರದ ಎಲ್ಲ ಶನಿವಾರ ಮತ್ತು ಭಾನುವಾರ ರಜೆ ಇರಲಿದೆ.


ವಾರಾಂತ್ಯದಲ್ಲಿ ಎರಡು ದಿನ ರಜೆ ಸಿಗುವುದರಿಂದ ಉದ್ಯೋಗಿಗಳು ಒತ್ತಡ ಕಳೆದುಕೊಂಡು ಲವಲವಿಕೆಯಿಂದ ಕೆಲಸದಲ್ಲಿ ತೊಡಗಿ ಉತ್ತಮ ಸೇವೆ ನೀಡಬಹುದು. ಇದರಿಂದ ಬ್ಯಾಂಕ್‌ನ ಕಾರ್ಯದಕ್ಷತೆಯಲ್ಲೂ ಗಣನೀಯ ಪರಿಣಾಮ ಉಂಟಾಗಲಿದೆ ಎಂಬುದು ಹೊಸ ನಿಯಮದ ಆಶಯ.


ಕೊರೋನಾ ಕಾಲದ ಲಾಕ್‌ಡೌನ್ ಸಂದರ್ಭದಲ್ಲಿ ವಾರದಲ್ಲಿ ಐದು ದಿನ ಕೆಲಸದ ಪದ್ಧತಿ ಜಾರಿಗೆ ತನ್ನಿ ಎಂದು ಬೇಡಿಕೆ ಸಲ್ಲಿಸಲಾಗಿತ್ತು.



Ads on article

Advertise in articles 1

advertising articles 2

Advertise under the article