-->
ಮಂಗಳೂರು: ಮೂವರು ಪೊಲೀಸರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌

ಮಂಗಳೂರು: ಮೂವರು ಪೊಲೀಸರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌

ಮಂಗಳೂರು: ಮೂವರು ಪೊಲೀಸರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌
ಮಂಗಳೂರಿನ ನ್ಯಾಯಾಲಯವೊಂದು ಮೂವರು ಪೊಲೀಸರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ. ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾರೆಂಟ್ ಹೊರಡಿಸಲಾಗಿದೆ.


ಐದನೇ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಈ ಆದೇಶ ಹೊರಡಿಸಿದ್ದು, ಮೂವರು ಪೊಲೀಸ್ ಸಿಬ್ಬಂದಿಗೆ ಈ ವಾರೆಂಟ್‌ನಿಂದ ಸಂಕಷ್ಟ ಎದುರಾಗಿದೆ.


ಈ ಮೂರು ಮಂದಿ ಪೊಲೀಸರು ಮಂಗಳೂರಿನ ಹಣಕಾಸು ಸಂಸ್ಥೆಯಿಂದ ವೇತನಾಧಾರಿತ ಸಾಲ ಪಡೆದುಕೊಂಡಿದ್ದರು. ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಸುಸ್ತಿದಾರರಾಗಿದ್ದರು.


ಈ ಬಗ್ಗೆ ಹಣಕಾಸು ಸಂಸ್ಥೆ ಸಿಬ್ಬಂದಿ ಫೋನ್ ಮೂಲಕ ಸಂಪರ್ಕಿಸಿದಾಗ ಸಾಲ ತೀರುವಳಿಗಾಗಿ ಬ್ಯಾಂಕಿಗೆ ಬಂದು ಚೆಕ್ ನೀಡಿದ್ದರು ಎನ್ನಲಾಗಿದೆ. ಆ ಚೆಕ್ ಅಮಾನ್ಯಗೊಂಡಿದ್ದು, ಹಣಕಾಸು ಸಂಸ್ಥೆ ಈ ಮೂವರ ವಿರುದ್ಧ ಸೂಕ್ತ ಕಾನೂನು ಪ್ರಕ್ರಿಯೆ ಆರಂಭಿಸಿತ್ತು.


ಈ ಮೂವರು ಪೊಲೀಸರ ವಿರುದ್ಧದ ಬಂಧನ ವಾರೆಂಟನ್ನು ಮಂಗಳೂರು ಪೊಲೀಸರೇ ಜಾರಿಗೊಳಿಸಬೇಕಾಗಿದೆ. ತಮ್ಮ ಸಹೋದ್ಯೋಗಿ ವಿರುದ್ಧವೇ ವಾರೆಂಟ್ ಜಾರಿಗೊಳಿಸುತ್ತಾರೆಯೇ ಎಂಬುದು ಇದೀಗ ಭಾರೀ ಕುತೂಹಲ ಮೂಡಿಸಿದೆ.Ads on article

Advertise in articles 1

advertising articles 2

Advertise under the article