-->
ಸಿಸಿಟಿವಿಯಿಂದ ಬಯಲಾಯ್ತು ಗಂಡನ ಪರಸಂಗ: ಜೈಲು ಕಂಬಿ ಎಣಿಸಿದ ಪತಿರಾಯ!

ಸಿಸಿಟಿವಿಯಿಂದ ಬಯಲಾಯ್ತು ಗಂಡನ ಪರಸಂಗ: ಜೈಲು ಕಂಬಿ ಎಣಿಸಿದ ಪತಿರಾಯ!

ಸಿಸಿಟಿವಿಯಿಂದ ಬಯಲಾಯ್ತು ಗಂಡನ ಪರಸಂಗ: ಜೈಲು ಕಂಬಿ ಎಣಿಸಿದ ಪತಿರಾಯ!

ಗಂಡನ ಪರಸ್ತ್ರೀ ಸಂಗ ಸಿಸಿಟಿವಿ ಮೂಲಕ ಬಯಲಾಗಿ ಗಂಡ ಜೈಲು ಕಂಬಿ ಎಣಿಸಬೇಕಾದ ಅಪರೂಪದ ಪ್ರಸಂಗ ಕೇರಳದಲ್ಲಿ ನಡೆದಿದೆ.ಇಡುಕ್ಕಿಯ 32 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಹೆಲ್ಮೆಟ್ ಧರಿಸದೆ ಪರಸ್ತ್ರೀಯೊಬ್ಬರೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿದ್ದರು. ಈ ದೃಶ್ಯ ರಸ್ತೆ ಸುರಕ್ಷತೆಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.ಕಾನೂನು ಪ್ರಕಾರ ಪೊಲೀಸರು ವಾಹನದ ಮಾಲೀಕರಾದ ಆ ವ್ಯಕ್ತಿಯ ಪತ್ನಿಗೆ ನೋಟೀಸ್ ಜಾರಿಗೊಳಿಸಲಾಗಿತ್ತು.ಇದನ್ನು ಗಮನಿಸಿದ ಪತ್ನಿ ತನ್ನ ಗಂಡನಲ್ಲಿ ಈ ಫೋಟೋದಲ್ಲಿ ಇರುವ ಮಹಿಳೆ ಯಾರು ಎಂದು ವಿಚಾರಿಸಿದ್ದಾರೆ. ಅದಕ್ಕೆ ಸಮಜಾಯಿಷಿ ನೀಡಿದ ಪತಿರಾಯ, ಇದು ತನ್ನ ಸ್ನೇಹಿತೆ. ಆಕೆಗೆ ಕೇವಲ ಡ್ರಾಪ್ ನೀಡಿರುವೆ ಎಂದು ಹೇಳಿದ್ದಾರೆ.ಆದರೆ, ಇದನ್ನು ನಂಬದ ಪತ್ನಿ, ಪತಿಯ ಜೊತೆಗೆ ಜಗಳವಾಡಿದ್ದರು. ಅಷ್ಟಕ್ಕೂ ಸುಮ್ಮನಾಗದ ಪತ್ನಿ, ಮೇ 5ರಂದು ಕರಮನ ಪೊಲೀಸ್ ಠಾಣೆಗೆ ತೆರಳಿ ಪತಿಯು ತನ್ನ ಮೇಲೆ ಹಾಗೂ ತನ್ನ ಮೂರು ವರ್ಷದ ಮಗನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದ್ದರು.ದೂರು ಆಧರಿಸಿದ ಪೊಲೀಸರು ಮಹಿಳೆಯ ಪತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ ಕಾರಣ ಆತ ಕಂಬಿ ಎಣಿಸುವಂತಾಗಿದೆ.ಒಂದು ಕ್ಯಾಮರಾ ದೃಶ್ಯದ ವಿವಾದ ಒಂದು ಕುಟುಂಬದ ನೆಮ್ಮದಿಯನ್ನೇ ಕೆಡಿಸಿತು ಎಂಬ ವಿಚಾರ ಕೇರಳದ ರಾಜಕೀಯ ವಲಯದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ.

.

Ads on article

Advertise in articles 1

advertising articles 2

Advertise under the article