-->
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ: ಮಹತ್ವದ ತೀರ್ಪಿಗೆ ಸುಪ್ರೀಂ ಸಜ್ಜು!

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ: ಮಹತ್ವದ ತೀರ್ಪಿಗೆ ಸುಪ್ರೀಂ ಸಜ್ಜು!

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ: ಮಹತ್ವದ ತೀರ್ಪಿಗೆ ಸುಪ್ರೀಂ ಸಜ್ಜು!





ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ಕುರಿತು ಮಹತ್ವದ ತೀರ್ಪಿಗೆ ಸುಪ್ರೀಂ ಕೋರ್ಟ್ ಸಂವಿಧಾನಿಕ ಪೀಠ ಸಿದ್ಧತೆ ನಡೆಸಿದೆ.


ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಸಂಜಯ್ ಕಿಶನ್ ಕೌಲ್, ನ್ಯಾ. ಎಸ್. ರವೀಂದ್ರ ಭಟ್, ನ್ಯಾ. ಹಿಮಾ ಕೊಹ್ಲಿ, ನ್ಯಾ. ಪಿ.ಎಸ್. ನರಸಿಂಹ ಅವರನ್ನೊಳಗೊಂಡ ಸಂವಿಧಾನಿಕ ಪೀಠ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ಪ್ರಕರಣದ ವಾದ ಪ್ರತಿವಾದವನ್ನು ಆಲಿಸಿ ವಿಚಾರಣೆಯನ್ನು ಮುಕ್ತಾಯಗೊಳಿಸಿ ತೀರ್ಪಿಗೆ ಕಾಯ್ದಿರಿಸಿತು.


ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ರಾಜು ರಾಮಚಂದ್ರನ್, ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡದಿದ್ದರೆ ಕಾನೂನಿನ ಸಮಾನ ರಕ್ಷಣೆ ನಿರಾಕರಿಸಿದಂತಾಗುತ್ತದೆ ಎಂದು ಹೇಳಿದರು.


ಅರ್ಜಿಯನ್ನು ತಿರಸ್ಕರಿಸಿದರೆ ಇದು ಸಮಾನತೆಯ ತತ್ವದ ಉಲ್ಲಂಘನೆ ಆಗುತ್ತದೆ. ತಾರತಮ್ಯ ಕ್ಕೆ ದಾರಿ ಮಾಡಿಕೊಡುತ್ತದೆ. ವಿಶೇಷ ವಿವಾಹ ಕಾಯ್ದೆಯಲ್ಲಿ ಇರುವ ನಿಬಂಧನೆಗಳು ಒಬಿಸಿ ವರ್ಗಕ್ಕೆ ಸೇರಿದ ಹುಡುಗಿ ಮತ್ತು ದಲಿತ ಸಮುದಾಯಕ್ಕೆ ಸೇರಿದ ಅರ್ಜಿದಾರರಿಗೆ ನೀಡಲಾದ ಹಕ್ಕುಗಳು ಕನ್ನಡಿಯೊಳಗಿನ ಗಂಟು ಆಗುತ್ತದೆ ಎಂದು ಹೇಳಿದರು.


ಪ್ರಕರಣದಿಂದ ಸಿಜೆಐ ಹಿಂದೆ ಸರಿಯಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾ!

ಸಲಿಂಗ ಮದುವೆಯ ಕಾನೂನು ಮಾನ್ಯತೆ ಕುರಿತ ಅರ್ಜಿ ವಿಚಾರಣೆಯಿಂದ ಸಿಜೆಐ ಡಿವೈ ಚಂದ್ರಚೂಡ್ ಹಿಂದೆ ಸರಿಯಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿತು.


ವರ್ಚುವಲ್ ಮೂಲಕ ಹಾಜರಾದ ಅರ್ಜಿದಾರ ಅನ್ಸನ್ ಥಾಮಸ್, ತಾವು ಈ ಬಗ್ಗೆ ಮಾರ್ಚ್ 13 ಮತ್ತು ಎಪ್ರಿಲ್ 17ರಂದು ಚಂದ್ರಚೂಡ್ ಅವರಿಗೆ ಪತ್ರ ಬರೆದು ಅರ್ಜಿ ಸಲ್ಲಿಸಿದ್ದೆ ಎಂದು ತಿಳಿಸಿದರು. ಮತ್ತು ಈ ಅರ್ಜಿ ವಿಚಾರಣೆಯಿಂದ ನ್ಯಾ. ಚಂದ್ರಚೂಡ್ ಹಿಂದೆ ಸರಿಯಬೇಕು ಎಂದು ಕೋರಿಕೊಂಡರು.


ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾ. ಚಂದ್ರಚೂಡ್, "ಧನ್ಯವಾದ ಥಾಮಸ್, ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗಿದೆ" ಎಂದು ಹೇಳಿದರು.


ಸಲಿಂಗ ಮದುವೆಗೆ ಕಾನೂನು ಮಾನ್ಯತೆ ನೀಡಿದರೆ, ಇದೊಂದು ಸಾಂಸ್ಕೃತಿಕ ಲೋಕವೇ ಕಂಪಿಸುವ ವಿಚಾರ ಆಗಲಿದೆ ಎಂದು RSS ಅಂಗ ಸಂಸ್ಥೆಯಾದ ಸಂವರ್ಧಿನಿ ನ್ಯಾಸ್ ಹೇಳಿದೆ. 


ಸಲಿಂಗಿ ಜೋಡಿಯ ಆರೈಕೆಯಲ್ಲಿ ಬೆಳೆದ ಮಗುವಿನ ವ್ಯಕ್ತಿತ್ವ ಮತ್ತು ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ, ಯುವ ಸಮುದಾಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ನ್ಯಾಸ್ ಹೇಳಿದೆ. ಈ ಕುರಿತ ಅರ್ಜಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಸಲ್ಲಿಸಲಾಗಿದೆ.

.

Ads on article

Advertise in articles 1

advertising articles 2

Advertise under the article