-->
NI Act Sec 138: ಚೆಕ್ ಅಮಾನ್ಯ ಪ್ರಕರಣ: ದೂರುದಾರರ ಒಪ್ಪಿಗೆಯಿಲ್ಲದಿದ್ದರೂ ರಾಜಿ ಮಾಡಬಹುದೇ..?

NI Act Sec 138: ಚೆಕ್ ಅಮಾನ್ಯ ಪ್ರಕರಣ: ದೂರುದಾರರ ಒಪ್ಪಿಗೆಯಿಲ್ಲದಿದ್ದರೂ ರಾಜಿ ಮಾಡಬಹುದೇ..?

ಚೆಕ್ ಅಮಾನ್ಯ ಪ್ರಕರಣ: ದೂರುದಾರರ ಒಪ್ಪಿಗೆಯಿಲ್ಲದಿದ್ದರೂ ರಾಜಿ ಮಾಡಬಹುದೇ..?



ಚೆಕ್ ಅಮಾನ್ಯ ಪ್ರಕರಣದ ಆಯ್ದ ಕೆಲವು ಸಂದರ್ಭಗಳಲ್ಲಿ ದೂರುದಾರರ ನೇರ ಒಪ್ಪಿಗೆ ಪಡೆಯದೆ ಫಿರ್ಯಾದಿ ಸಲ್ಲಿಸಿದ ಚೆಕ್ ಬೌನ್ಸ್ ಪ್ರಕರಣವನ್ನು ವಿಲೇವಾರಿ ಮಾಡಬಹುದು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.


ಚೆಕ್ ಬೌನ್ಸ್ ಪ್ರಕರಣವನ್ನು ದೂರುದಾರರ ಒಪ್ಪಿಗೆ ಇಲ್ಲದಿದ್ದರೂ ರಾಜಿ ಮಾಡಿಕೊಳ್ಳಬಹುದು. ಆದರೆ, ರಾಜಿ ಮಾಡುವಾಗ ಆರೋಪಿ ನ್ಯಾಯಯುತ ಮತ್ತು ಸ್ವೀಕಾರಾರ್ಹ ಯೋಗ್ಯ ಮೊತ್ತವನ್ನು ಪರಿಹಾರವಾಗಿ ನೀಡಬೇಕಾಗುತ್ತದೆ ಎಂದು ನ್ಯಾ. ಜ್ಯೋತ್ಸ್ನಾ ಶರ್ಮಾ ಅವರಿದ್ದ ನ್ಯಾಯಪೀಠ ತೀರ್ಪು ನೀಡಿದೆ.


ದೂರುದಾರರಿಗೆ ಸೂಕ್ತ ಪರಿಹಾರದ ಮೊತ್ತವನ್ನು ನ್ಯಾಯಯುತ ಮತ್ತು ಸ್ವೀಕಾರಾರ್ಹವಾಗಿ ನೀಡುವ ಕೆಲವು ಸಂದರ್ಭಗಳಲ್ಲಿ ನ್ಯಾಯಾಲಯವು ಫಿರ್ಯಾದಿಯ ನೇರ ಒಪ್ಪಿಗೆಯ ಹೊರತಾಗಿಯೂ ನಿರ್ಧಾರ ಕೈಗೊಳ್ಳಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.



ಪ್ರಕರಣದ ವಿವರ:

ಚೆಕ್ ಅಮಾನ್ಯ ಪ್ರಕರಣದ ವಿಚಾರಣಾ ಹಂತದಲ್ಲಿ ಆರೋಪಿಯು ರೂ. 11 ಲಕ್ಷಗಳ ಡಿಮ್ಯಾಂಡ್ ಡ್ರಾಫ್ಟ್‌ ಜೊತೆಗೆ ಇಟ್ಟು ಮೆಮೊ ಸಲ್ಲಿಸಿದ್ದರು. ಈ ಮೆಮೋದಲ್ಲಿ ಪ್ರಕರಣವನ್ನು ರಾಜಿ ಮಾಡಿಕೊಳ್ಳುವ ಪ್ರಾರ್ಥನೆ ಮಾಡಿದ್ದರು. ಆದರೆ, ಫಿರ್ಯಾದಿಯು ಪ್ರಕರಣದ ರಾಜಿಗೆ ವಿರೋಧ ವ್ಯಕ್ತಪಡಿಸಿದ್ದರು. 13 ವರ್ಷಗಳ ನಂತರ ರೂ. 11 ಲಕ್ಷಕ್ಕೆ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹಾಕುವಂತಿಲ್ಲ ಎಂದು ಫಿರ್ಯಾದಿಯು ನ್ಯಾಯಾಲಯಕ್ಕೆ ಮನವಿ ಮಾಡಿದರು.


ಈ ಬಗ್ಗೆ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ಹೈಕೋರ್ಟ್ ಈ ಮೇಲಿನಂತೆ ತೀರ್ಪು ನೀಡಿತು.


M/s Meters and Instruments Pvt Ltd and Anr vs. Kanchan Mehta: AIR 2017 Supreme Court 4594 ಪ್ರಕರಣವನ್ನು ಉಲ್ಲೇಖಿಸಿ ಸೂಕ್ತ ಆದೇಶ ಹೊರಡಿಸುವ ಸೂಚನೆ ನೀಡಿತು. ಇದನ್ನು ಸಿವಿಲ್ ವ್ಯಾಜ್ಯದಂತೆ ನೋಡುವ ಜೊತೆಗೆ CrPC ಪ್ರಕಾರ ಸಮ್ಮರಿ ಟ್ರಯಲ್ ಪ್ರಕಾರ ಸಾಮಾನ್ಯವಾಗಿ ವಿಚಾರಣೆ ನಡೆಸಬೇಕಾಗಿದೆ ಎಂಬುದನ್ನು ಅದು ಹೇಳಿತು.


ಮೀಟರ್ಸ್ ಮತ್ತು ಇನ್ಸ್ಟ್ರುಮೆಂಟ್ಸ್ ಪ್ರೈ. ಲಿ. Vs ಕಾಂಚನ್ ಮೆಹ್ತಾ ಪ್ರಕರಣದಲ್ಲಿ ಹೇಳಿದಂತೆ, ಸೂಕ್ತ ಮೊತ್ತದ ಪರಿಹಾರವನ್ನು ಪಾವತಿಸುವ ಯಾ ನೀಡುವ ಪ್ರಸ್ತಾಪ ಇದ್ದಾಗ ಅದನ್ನು ಪರಿಗಣಿಸಿ ವಿಚಾರಣೆಯನ್ನು ಕೈಬಿಡಬಹುದು ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿತು.


ಪ್ರಕರಣ: ರಾಣಿ ಗೌರ್ Vs ಉ.ಪ್ರ. ಸರ್ಕಾರ ಮತ್ತಿತರರು

ಅಲಹಾಬಾದ್ ಹೈಕೋರ್ಟ್, CrR 2047/2023 Dated 24-05-2023

Ads on article

Advertise in articles 1

advertising articles 2

Advertise under the article