-->
ಗಳಿಕೆ ರಜೆಯ ನಗದು ಪಡೆಯಲು ಮರುನೇಮಕಗೊಂಡ ಉದ್ಯೋಗಿ ಅರ್ಹ: ಕರ್ನಾಟಕ ಹೈಕೋರ್ಟ್‌

ಗಳಿಕೆ ರಜೆಯ ನಗದು ಪಡೆಯಲು ಮರುನೇಮಕಗೊಂಡ ಉದ್ಯೋಗಿ ಅರ್ಹ: ಕರ್ನಾಟಕ ಹೈಕೋರ್ಟ್‌

ಗಳಿಕೆ ರಜೆಯ ನಗದು ಪಡೆಯಲು ಮರುನೇಮಕಗೊಂಡ ಉದ್ಯೋಗಿ ಅರ್ಹ: ಕರ್ನಾಟಕ ಹೈಕೋರ್ಟ್‌





ಉದ್ಯೋಗಿಯು ಗಳಿಕೆ ರಜೆ (Earned Leave)ಯನ್ನು ನಗದಾಗಿ ಪಡೆಯಲು (Enchashment) ಅರ್ಹರೆ ಹೊಂದಿರುತ್ತಾರೆ ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಒಮ್ಮೆ ಉದ್ಯೋಗಿಯು ಗಳಿಕೆ ರಜೆ ಪಡೆಯಲು ಅರ್ಹ ಎಂದಾದರೆ ಆ ನೌಕರ ಅದರ ನಗದೀಕರಣಕ್ಕೂ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ತೀರ್ಪು ಸ್ಪಷ್ಟಪಡಿಸಿದೆ.



ವಜಾಗೊಂಡ ನೌಕರರು ಮರು ನೇಮಕಗೊಂಡ ನಂತರ ಗಳಿಕೆ ರಜೆಯನ್ನು ನಗದು ಮಾಡಿಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ನ್ಯಾ. ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.




ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರ ಸೇವೆಯಿಂದ ವಜಾಗೊಂಡು ಮರುನೇಮಕಗೊಂಡ ನಂತರ ಗಳಿಕೆ ರಜೆಯ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಹೇಳಿರುವ ನ್ಯಾಯಪೀಠ, ಸಿಬ್ಬಂದಿಯ ಗಳಿಕೆ ರಜೆಗೆ ನಗದು ಪಾವತಿಸುವಂತೆ ಆದೇಶ ನೀಡಿದೆ.



ಪ್ರಕರಣದ ವಿವರ:

1977ರಲ್ಲಿ ಕೆಎಸ್‌ಆರ್‌ಟಿಸಿಗೆ ಕಂಡೆಕ್ಟರ್ ಆಗಿ ಸೇವೆಗೆ ಸೇರ್ಪಡೆಯಾಗಿದ್ದ ವಿ. ನಾಗರಾಜ್ ಎಂಬವರನ್ನು ಸಂಸ್ಥೆಯಿಂದ ಶಿಸ್ತುಕ್ರಮದ ಪ್ರಯುಕ್ತ 1991ರಲ್ಲಿ ಸೇವೆಯಿಂದ ವಜಾ ಮಾಡಲಾಗಿತ್ತು.



ವಜಾ ಮಾಡಿರುವ ಆದೇಶವನ್ನು ಪ್ರಶ್ನಿಸಿ ನಾಗರಾಜ್ ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಕಾರ್ಮಿಕ ನ್ಯಾಯಾಲಯವು ಅರ್ಜಿದಾರ ನಾಗರಾಜ್ ಅವರಿಗೆ 1993ರಿಂದ ಪೂರ್ವಾನ್ವಯವಾಗುವಂತೆ ಎಲ್ಲ ಭತ್ಯೆ ಮತ್ತು ಬಾಕಿ ವೇತನ ನೀಡುವಂತೆ ಆದೇಶಿಸಿ ಮರುನೇಮಕ ಮಾಡುವಂತೆ ತೀರ್ಪು ನೀಡಿತ್ತು.



ನಾಗರಾಜ್ 2012ರ ಜುಲೈನಲ್ಲಿ ಸೇವೆಯಿಂದ ನಿವೃತ್ತರಾದರು. ಸಂಸ್ಥೆಯ ಹೊಸ ಸುತ್ತೋಲೆ ಪ್ರಕಾರ ನಾಗರಾಜ್ ಅವರಿಗೆ ನಿವೃತ್ತಿ ಸಮಯದಲ್ಲಿ 300 ರಜೆಗಳ ಬದಲಿಗೆ 246 ಗಳಿಕೆ ರಜೆಗಳಿಗೆ ಮಾತ್ರವೇ ನಗದು ನೀಡಲಾಗಿತ್ತು.



ಇದನ್ನು ಪ್ರಶ್ನಿಸಿ ನಾಗರಾಜ್ ಮತ್ತೊಮ್ಮೆ ಕಾರ್ಮಿಕ ನ್ಯಾಯಾಲಯದ ಕದ ತಟ್ಟಿದ್ದರು. ಈ ಪ್ರಕರಣದಲ್ಲಿ ಗಳಿಕೆ ರಜೆಯ ನಗದು ಸಂಬಂಧ 1,09,210 ರೂ. ವನ್ನು ಶೇ. 12ರಷ್ಟು ಬಡ್ಡಿಯ ಜೊತೆಗೆ ಪಾಔತಿಸಬೇಕು ಎಂದು ಕಾರ್ಮಿಕ ನ್ಯಾಯಾಲಯ ಕೆಎಸ್‌ಆರ್‌ಟಿಸಿಗೆ ನಿರ್ದೇಶನ ನೀಡಿತ್ತು.



ಸಿಬ್ಬಂದಿಯು ನಿಗದಿತ ಅವಧಿಯಲ್ಲಿ ಕಾರ್ಯನಿರ್ವಹಿಸಿಲ್ಲ ಹಾಗೂ ಅವರು ಆ ದಿನಗಳ ರಜೆಯ ಗಳಿಕೆಗೆ ನಗದು ಪಡೆಯಲು ಅರ್ಹರಲ್ಲ ಎಂದು 2019ರಲ್ಲಿ ಕೆಎಸ್‌ಆರ್‌ಟಿಸಿ ಹಿಂಬರಹ ನೀಡಿತ್ತು. ಇದನ್ನು ಪ್ರಶ್ನಿಸಿ ನಾಗರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು.

.

Ads on article

Advertise in articles 1

advertising articles 2

Advertise under the article