Notary Selection Process Cancelled: ನೋಟರಿ ಆಕಾಂಕ್ಷಿಗಳಿಗೆ ಬಿಗ್ ಶಾಕ್: ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ನಿರಾಸೆ
ನೋಟರಿ ಆಕಾಂಕ್ಷಿಗಳಿಗೆ ಬಿಗ್ ಶಾಕ್: ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ನಿರಾಸೆ
ನೋಟರಿ ಪಬ್ಲಿಕ್ ಆಗಿ ನೇಮಕಾತಿ ಹೊಂದಲು ಬಯಸಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳಿಗೆ ಇದು ಬಿಗ್ ಶಾಕಿಂಗ್ ನ್ಯೂಸ್. ನೋಟರಿ ಪಬ್ಲಿಕ್ ಆಗಿ ನೇಮಕಾತಿಗೆ ಸಜ್ಜಾಗಿದ್ದ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ನಿರಾಸೆ ಮೂಡಿಸಿದೆ.
ಕೇಂದ್ರ ಕಾನೂನು ಸಚಿವಾಲಯದ ಅಡಿಯಲ್ಲಿ ಇರುವ ನೋಟರಿ ಸೆಲ್ ನೇತೃತ್ವದಲ್ಲಿ ನಡೆಯುತ್ತಿರುವ ನೋಟರಿ ವಕೀಲರ ನೇಮಕಾತಿ ಪ್ರಕ್ರಿಯೆಗೆ ತಡೆ ಬಿದ್ದಿದೆ.
ಕರ್ನಾಟಕದಲ್ಲಿ ನೋಟರಿ ವಕೀಲರ ನೇಮಕಾತಿಗೆ ಫೆಬ್ರವರಿ 20 ಮತ್ತು ಮಾರ್ಚ್ 7ರಂದು ಆನ್‌ಲೈನ್ ಇಂಟರ್‌ವ್ಯೂ ನಡೆದಿತ್ತು. ಆ ಬಳಿಕ ಕೇಂದ್ರೀಯ ತನಿಖಾ ತಂಡ (ಸಿಬಿಐ) ನೋಟರಿ ನೇಮಕಾತಿಯಲ್ಲಿ ಆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವುದು ಈ ನೇಮಕಾತಿಗೆ ಹಿನ್ನಡೆ ಉಂಟು ಮಾಡಿದೆ.
ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ಪ್ರಕ್ರಿಯೆಯಲ್ಲಿ ನೇಮಕಾತಿ ನಡೆಯುವಂತಾಗಲು ಒಟ್ಟು ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಈ ಬಗ್ಗೆ 26-05-2023ರಂದು ನೋಟರಿ ಸೆಲ್ ಒಂದು ಪ್ರಕಟಣೆ ಹೊರಡಿಸಿದ್ದು, ಮುಂದಿನ ಸೂಚನೆ ವರೆಗೆ ನೋಟರಿ ಪಬ್ಲಿಕ್ ಆಯ್ಕೆ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ ಎಂದು ಈ ಸೂಚನೆ ತಿಳಿಸಿದೆ.
.