ಸಭೆಗೆ ತಡವಾಗಿ ಬಂದ ಉಪ ವಿಭಾಗಾಧಿಕಾರಿ: ಗೆಟ್ ಔಟ್ ಎಂದ ಜಿಲ್ಲಾಧಿಕಾರಿ!
ಸಭೆಗೆ ತಡವಾಗಿ ಬಂದ ಉಪ ವಿಭಾಗಾಧಿಕಾರಿ: ಗೆಟ್ ಔಟ್ ಎಂದ ಜಿಲ್ಲಾಧಿಕಾರಿ!
ಜಿಲ್ಲಾಧಿಕಾರಿ ಕರೆದ ಸಭೆಗೆ ತಡವಾಗಿ ಬಂದ ಉಪ ವಿಭಾಗಾಧಿಕಾರಿಯನ್ನು ಗೆಟ್ ಔಟ್ ಎಂದು ಸಭೆಯಿಂದ ಹೊರಗೆ ಹಾಕಿದ ಅಪರೂಪದ ಪ್ರಸಂಗ ರಾಯಚೂರಿನಲ್ಲಿ ನಡೆದಿದೆ.
ಜಿಲ್ಲೆಯ ವಿಪತ್ತು ನಿರ್ವಹಣಾ ಸಭೆಗೆ ಜಿಲ್ಲೆಯ ಎಲ್ಲ ಹಿರಿಯ ಅಧಿಕಾರಿಗಳನ್ನು ಕರೆಯಲಾಗಿತ್ತು. ಆದರೆ, ಈ ಸಭೆಗೆ ಉಪ ವಿಭಾಗಾಧಿಕಾರಿ ರಜನೀಕಾಂತ್ ಚೌಹಾಣ್ ತಡವಾಗಿ ಬಂದಿದ್ದರು.
ಸಭೆಗೆ ಬರುತ್ತಿದ್ದಂತೆಯೇ ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್, ಈ ಉಡಾಫೆ ಮಾಡಿದ ಅಧಿಕಾರಿಯನ್ನು ಉದ್ದೇಶಿಸಿ "ಸಭೆಗೆ ಬರಲು ಏಕೆ ತಡವಾಯಿತು" ಎಂದು ಕೇಳಿದರು.
ಆಗ "ನಾನು ರಜೆ ಇದೆ ಎಂದು ಅಂದುಕೊಂಡೆ" ಎಂಬ ಉಡಾಫೆ ಉತ್ತರವನ್ನು ಉಪ ವಿಭಾಗಾಧಿಕಾರಿ ರಜನೀಕಾಂತ್ ಚೌಹಾಣ್ ನೀಡಿದರು. ಯಾವ ರಜೆ ಇದೆ.. ಎಂದು ಜಿಲ್ಲಾಧಿಕಾರಿ ಚಂದ್ರಶೇಖರ್ ಕೇಳಿದಾಗ ಅದಕ್ಕೆ ಚೌಹಾಣ್ ಅವರಲ್ಲಿ ಯಾವುದೇ ಉತ್ತರವಿರಲಿಲ್ಲ.
ಇಂತಹ ನಿರ್ಲಕ್ಷ್ಯ ಮತ್ತು ಉಡಾಫೆ ಧೋರಣೆ ತೋರಿದ ಹಿರಿಯ ಅಧಿಕಾರಿಯನ್ನು ಗೆಟ್ ಔಟ್ ಎಂದು ಡಿಸಿ ಚಂದ್ರಶೇಖರ್ ಸಭೆಯಿಂದಲೇ ಹೊರಗೆ ಕಳಿಸಿದರು. ಡಿಸಿಯ ಈ ನಿರ್ಧಾರ ಇತರ ಅಧಿಕಾರಿಗಳ ಎದೆಯಲ್ಲಿ ನಡುಕ ಉಂಟು ಮಾಡಿದ್ದರೆ, ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.