-->
ನನಸಾದ ಬಹುದಿನಗಳ ಕನಸು: ವಕೀಲರಿಗೆ ವೈದ್ಯಕೀಯ ವಿಮೆ- ಇಲ್ಲಿದೆ ಮಾಹಿತಿ

ನನಸಾದ ಬಹುದಿನಗಳ ಕನಸು: ವಕೀಲರಿಗೆ ವೈದ್ಯಕೀಯ ವಿಮೆ- ಇಲ್ಲಿದೆ ಮಾಹಿತಿ

ನನಸಾದ ಬಹುದಿನಗಳ ಕನಸು: ವಕೀಲರಿಗೆ ವೈದ್ಯಕೀಯ ವಿಮೆ- ಇಲ್ಲಿದೆ ಮಾಹಿತಿವಕೀಲರಿಗೆ ವೈದ್ಯಕೀಯ ವಿಮೆ ಯೋಜನೆ ಜಾರಿಯಾಗಬೇಕು ಎಂಬುದು ಬಹುದಿನಗಳ ಕನಸು. ಈ ಬೇಡಿಕೆ ಈಡೇರುವ ಹಂತದಲ್ಲಿ ಇದೆ.ಅಖಿಲ ಭಾರತೀಯ ವಕೀಲರ ಪರಿಷತ್ತು ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯಾಂಗ ಸಚಿವಾಲಯ ದೇಶದ ಪ್ರತಿಯೊಬ್ಬ ಕಾನೂನು ವೃತ್ತಿಪರರಿಗೆ, ವಕೀಲರಿಗೆ ವೈದ್ಯಕೀಯ ವಿಮೆ ಯೋಜನೆಯನ್ನು ಜಾರಿಗೊಳಿಸಲು ಕರಡು ಪ್ರಸ್ತಾವನೆಯನ್ನು ರೂಪಿಸುತ್ತಿದೆ.ಎಲ್ಲ ರಾಜ್ಯಗಳ ವಕೀಲರ ಸಂಘಗಳು ಈ ಕಾರ್ಯಕ್ಕೆ ಸಹಕರಿಸಿದೆ. ಈ ಹಿನ್ನೆಲೆಯಲ್ಲಿ ವಕೀಲರ ಸಂಘದಲ್ಲಿ ನೋಂದಾವಣಿಗೊಂಡಿರುವ ವಕೀಲರ ಮಾಹಿತಿಯನ್ನು ಒದಗಿಸಲು ಕೋರಲಾಗಿದೆ.ಎಲ್ಲ ಬಾರ್ ಕೌನ್ಸಿಲ್ ಗಳು ತಮ್ಮ ಸದಸ್ಯ ವಕೀಲರ ಬಗ್ಗೆ ಮಾಹಿತಿ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ವಕೀಲರು ತಮ್ಮ ಸದಸ್ಯತ್ವ ನೋಂದಣಿಗೊಂಡಿರುವ ವಕೀಲರ ಸಂಘಗಳಿಗೆ ಕೆಳಕಂಡ ಮಾಹಿತಿಯನ್ನು ನೀಡಬೇಕಾಗಿದೆ.2023 ಮೇ ತಿಂಗಳ 31ರೊಳಗೆ ವಕೀಲರ ಸಂಘದ ಕಚೇರಿಗೆ ತಲುಪಿಸುವಂತೆ ವಕೀಲ ಮಿತ್ರರಿಗೆ ಕೋರಲಾಗಿದೆ.


BCI/2577/2023. Dated 12/05/2023 ಈ ಕರಡನ್ನು ರಾಜ್ಯ ವಕೀಲರ ಪರಿಷತ್- KSBC ತಾತ್ವಿಕವಾಗಿ ಅನುಮೋದಿಸಿದೆ.


KSBC /958/2023 Dated 16/05/2023ರಂತೆ ರಾಜ್ಯದ ಎಲ್ಲಾ ವಕೀಲರ ಸಂಘಗಳನ್ನು ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ವಕೀಲರ ಸಂಘದ ಸದಸ್ಯರಾಗಿರುವ ವಕೀಲರ ಮಾಹಿತಿಯನ್ನು ಒದಗಿಸುವಂತೆ ಜಿಲ್ಲಾ ವಕೀಲರುಗಳ ಸಂಘಕ್ಕೆ ವಿನಂತಿಸಿರುತ್ತದೆ.


ವಕೀಲರು, ಸಂಘದ ಎಲ್ಲಾ ಸದಸ್ಯರು ತಮ್ಮ ವೈಯಕ್ತಿಕ ಹಾಗೂ ಕುಟುಂಬದ ಸದಸ್ಯರ ಮಾಹಿತಿಯನ್ನು ನೀಡಬೇಕು.


.

Ads on article

Advertise in articles 1

advertising articles 2

Advertise under the article